ಬೇಬಿ ಬಂಪ್ ಫೋಟೋಶೂಟ್ ನಲ್ಲಿ ಮಿಂಚಿದ ಆಶಿತಾ ಚಂದ್ರಪ್ಪ..! ಸೀಮಂತ ಕಾರ್ಯ

2021 ರಲ್ಲಿ ನಟಿ ಆಶಿತಾ ಚಂದ್ರಪ್ಪ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ರೋಹನ್ ರಾಘವೇಂದ್ರ ಅವರ ಜೊತೆ ಸಪ್ತಪದಿ ತುಳಿದ ಆಶಿತಾ ನಂತರ ಯಾವ ಸೀರಿಯಲ್ ನಲ್ಲೂ ಕಂಡು ಬಂದಿರಲಿಲ್ಲ. ಹೌದು ಕನ್ನಡ ಕಿರುತೆರೆಯಲ್ಲಿ ಇವರು ಕೂಡ ಹೆಸರು ಮಾಡಿದಂತಹ ನಟಿ..ಆಶಿತಾ ಚಂದ್ರಪ್ಪ ಜೊತೆ ಜೊತೆಯಲಿ ಎನ್ನುವ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ದೊಡ್ಡದಾಗಿ ಪಾದರ್ಪಣೆ ಮಾಡಿದ್ದರು. ಆಶಿತಾ ಅವರು ತನಗಿಂತ ಕಿರಿಯ ಹುಡುಗನ ಜೊತೆ ಈ ಧಾರವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡವರು. ತಮ್ಮದೇ ಆದ ಅಭಿನಯದ ಮೂಲಕ ಈ ಸೀರಿಯಲ್ ಪ್ರಿಯರಿಗೆ ಅಚ್ಚುಮೆಚ್ಚು ಆಗಿ ಹೆಸರು ಮಾಡಿದವರು ಅಂದ್ರೆ ಅದು ಆಶಿತಾ ಚಂದ್ರಪ್ಪ.
ನಂತರ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿದ್ದಂತಹ ಬಿಗ್ ಬಾಸ್ ಮನೆಗೂ ಕೂಡ ಹೋಗಿ ಸೀಸನ್ 5 ರಲ್ಲಿ ಸ್ಪರ್ಧಿಸಿದ್ದು, ನಂತರ ರಾಧಾ ರಮಣ ಸೀರಿಯಲ್ ನಲ್ಲಿ ನಾಯಕನ ಸಹೋದರಿಯಾಗಿ ಕಾಣಿಸಿದ್ದ ಆಶಿತಾ ಅವರು ಅಲ್ಲಿಯೂ ಕೂಡ ಗಮನ ಸೆಳೆದ ನಟಿ. ಇದಾದ ಬಳಿಕ ಆಶಿತಾ ಚಂದ್ರಪ್ಪ ಅವರು ಯಾವ ಸೀರಿಯಲ್ ನಲ್ಲಿಯೂ ಕಾಣಿಸಿಕೊಳ್ಳಲಿಲ್ಲ. 2021 ರಲ್ಲಿ ರೋಹನ್ ರಾಘವೇಂದ್ರರನ್ನು ಕೈಹಿಡಿದು ಸಂಪೂರ್ಣ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಆಕ್ಟಿಂಗ್ ನಿಂದ ದೂರವಿದ್ದರು. ಆದರೆ ಈಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿದ್ದಾರೆ. ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರ ಬೇಬಿ ಬಂಪ್ ನ ಕೆಲ ಕಲರ್ಫುಲ್ ಫೋಟೋಸ್ ಗಳಲ್ಲಿ ಕಾಣಿಸಿದ್ದಾರೆ..
ಹೌದು, ಅವರ ಮನೆಯವರು ಆಶಿತಾ ಚಂದ್ರಪ್ಪ ಅವರ ಸೀಮಂತ ಕಾರ್ಯ ಮಾಡಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಆಶಿತಾ ಎಂದು ತಿಳಿದು ಬಂದಿದೆ. ಆಶಿತಾ ಚಂದ್ರಪ್ಪ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬೇಬಿ ಬಂಪ್ ಫೋಟೋಗಳನ್ನು ಶೇರ್ ಮಾಡಿಕೊಂಡು, ಅವರ ತಂಗಿ ಮತ್ತು ತಂದೆಗೆ ಧನ್ಯವಾದ ತಿಳಿಸಿದ್ದಾರೆ. ಸದಾ ನನ್ನ ಜೊತೆಗೆ ಇರುವ ನನ್ನ ಮುದ್ದು ತಂಗಿ ಲವ್ ಯು ಎಂದು ಬರೆದುಕೊಂಡು ಶೀರ್ಷಿಕೆ ನೀಡಿ ಕೆಲವು ಫೋಟೋಗಳ ಹಂಚಿಕೊಂಡಿದ್ದಾರೆ. ಆಶಿತಾ ಚಂದ್ರಪ್ಪ ಅವರ ಈ ಫೋಟೋಗಳ ನೋಡಿ, ನೆಟ್ಟಿಗರು ಮತ್ತು ಇವರ ಅಭಿಮಾನಿಗಳು, ಮೊದಲ ಮಗುವಿನ ಆಗಮನ ಖುಷಿಯಲ್ಲಿರುವ ಆಶಿತಾ ಅವರಿಗೆ ಶುಭ ಕೋರಿದ್ದಾರೆ. ಹೌದು ಈ ಫೋಟೋಗಳು ಇದೀಗ ಎಲ್ಲೆಡೆ ವೈರಲ್ ಆಗುತ್ತಿವೆ. ಇಲ್ಲಿವೆ ನೋಡಿ, ನಟಿ ಆಶಿತ ಚಂದ್ರಪ್ಪರ ಸೀಮಂತದ ಕೆಲ ಫೋಟೋಗಳು, ನೀವು ನೋಡಿ ಹಾಗೆ ಇವರಿಗೆ ಶುಭಕೋರಿ ಧನ್ಯವಾದಗಳು...










