ಬಾಬಾ ವಂಗಾ. ಇವರ ಬಗ್ಗೆ ಆಗಾಗ ಸುದ್ದಿ ಕೇಳುತ್ತಲೇ ಇರುತ್ತೀವಿ. ಅಂಧ ಮಹಿಳೆಯಾಗಿರುವ ಈಕೆ ಜಗತ್ತಿನ ಭವಿಷ್ಯವನ್ನು ನುಡಿದಿರುವವರು. ಯಾವಾಗ ಏನೆಲ್ಲಾ ಆಗುತ್ತದೆ. ಈ ಜಗತ್ತು ಎಂದು ಕೊನೆಗೊಳ್ಳುತ್ತದೆ ಎಂಬುದನ್ನೂ ಖಡಾಖಂಡಿತವಾಗಿ ಭವಿಷ್ಯ ಹೇಳಿದ್ದಾರೆ. 1996ರಲ್ಲಿ ನಿಧನರಾಗಿರುವ ಈ ಮಹಿಳೆ ಹೇಳಿರುವ ಭವಿಷ್ಯಗಳಲ್ಲಿ ಯಾವುದೂ ಸುಳ್ಳಾಗಿಲ್ಲ. ಇದುವರೆಗೂ ಬಾಬಾ ವಂಗಾ ಅವರು ಹೇಳಿದ ಭವಿಷ್ಯಗಳೆಲ್ಲವೂ ನಿಜವಾಗಿವೆ. ಈಗ 2023 ರಲ್ಲಿ ಜಗತ್ತಿನಲ್ಲಿ ಏನೆಲ್ಲಾ ಆಗುತ್ತೆ ಎಂಬುದನ್ನು ಕೂಡ ಬಾಬಾ ವಂಗಾ ಹೇಳಿದ್ದಾರೆ.
ಬಾಬಾ ವಂಗಾ ಅವರ ಭವಿಷ್ಯ ನುಡಿಯ ಪ್ರಕಾರ ಈ ವರ್ಷ ಪ್ರಪಂಚಕ್ಕೆ ಸೌರ ಸುನಾಮಿ ಅಪ್ಪಳಿಸುತ್ತದೆ. ಸೂರ್ಯ ಕೋಪಗೊಂಡ ಕಾರಣ ಹೀಗಾಗಲಿದ್ದು, ಜನ ಸೂರ್ಯನ ತಾಪದಿಂದ ತತ್ತರಿಸಿ ಹೋಗುತ್ತಾರಂತೆ. ಇನ್ನು ಈ ಸುನಾಮಿಯ ಪರಿಣಾಮವಾಗಿ ಭೂಮಿ ಸೂರ್ಯನತ್ತ ವಾಲಿದರೆ, ಬೆಂಕಿ ಉರಿಯಿಂದ ಜನ ನರಳುತ್ತಾರಂತೆ. ಅದೇ ಸೂರ್ಯನಿಂದ ಕೊಂಚ ದೂರ ಸರಿದರೆ ಹಿಮದಲ್ಲಿ ಜಗತ್ತು ತುಂಬಿ ಹೋಗುತ್ತದೆ. ಇದರಿಂದಲೂ ಜನ ನರಕವನ್ನು ನೋಡುತ್ತಾರೆ ಎಂದು ಬಾಬಾ ವಂಗಾ ಹೇಳಿದ್ದಾರೆ.
ಭೂಮಿ ಕದಲುತ್ತೆ, ಕತ್ತಲೆ ಕವಿಯುತ್ತೆ, ಮಾನವ ಜೀವನ ನಾಶವಾಗುತ್ತೆ ; ಈ ವರ್ಷ ಸಂಭವಿಸೋ ದುರಂತ ಕುರಿತು 'ಬಾಬಾ ವಂಗಾ' ಸ್ಪೋಟಕ ಭವಿಷ್ಯ .ಅಣು ಸ್ಥಾವರ ಒಂದು ಸ್ಫೋಟಗೊಂಡು ದೊಡ್ಡ ಪ್ರಮಾಣದಲ್ಲಿ ಜೀವ ಹಾನಿ ಉಂಟಾಗುತ್ತದೆ. ರಾಷ್ಟ್ರವೊಂದು ಜನರ ಮೇಲೆ ಜೈವಿಕ ದಾಳಿ ನಡೆಸುತ್ತಾರೆ. ಇನ್ನು ಸರ್ಕಾರವೇ ಮಕ್ಕಳು ಹೇಗೆ ಹುಟ್ಟಬೇಕು? ಎಷ್ಟು ಮಕ್ಕಳು ಬೇಕು ಎಂಬುದನ್ನು ನಿರ್ಧರಿಸುತ್ತದೆ. ಸರ್ಕಾರ ಸಹಜ ಹೆರಿಗೆ ಆಗದಂತೆ ತಡೆಯುತ್ತದೆ. ಎಲ್ಲಾ ಮಕ್ಕಳೂ ಲ್ಯಾಬ್ ನಲ್ಲೇ ಸೃಷ್ಟಿಯಾಗುತ್ತವೆ ಎಂದು ಬಾಬಾ ವಂಗಾ ಹೇಳಿದ್ದಾರೆ. ಸೌರ ಸುನಾಮಿ ಇಂದಾಗಿ ತಂತ್ರಜ್ಞಾನ ಚಿಂದಿಯಾಗುತ್ತದೆ. ಸಂಪರ್ಕಗಳು ಕಡಿತಗೊಂಡು ಮನುಷ್ಯರು ಕಂಗೆಟ್ಟು ಹೋಗುತ್ತಾರೆ. ಹೀಗೆ ಬಾಬಾ ವಂಗಾ ತಮ್ಮ ಅಂಧ ಕಣ್ಣಿನಿಂದಲೇ ಜಗತ್ತಿನ ಭವಿಷ್ಯವನ್ನು ನುಡಿದಿದ್ದಾರೆ. ( video credit : nav bharat times )