ರಾಜ್ಯದಲ್ಲಿ ಭೂಕಂಪ ಸಂಭವಿಸುತ್ತೆ ಎಂದು ಎಚ್ಚರಿಸಿದ ಬಬಲೇಶ್ವರ ಸ್ವಾಮೀಜಿ ? ಜನರು ಶಾಕ್

ಜಯಪುರದ ಬಬಲೇಶ್ವರ ಜಿಲ್ಲೆಯಲ್ಲಿ ಬಬಲಾದಿ ಎಂಬ ಮಠವೊಂದಿದೆ. ಈ ಮಠದಲ್ಲಿ ಮುನ್ನೂರು ವರ್ಷಗಳ ಹಿಂದೆ ಸಿದ್ಧಿ ಪುರುಷ ಸದಾಶಿವ ಅಜ್ಜ ಎಂಬುವರು ಬಬಲಾದಿಯಲ್ಲಿ ನೆಲೆ ನಿಂತಿದ್ದರು. ಇಲ್ಲಿ ಪವಾಡಗಳನ್ನು ಮಾಡುತ್ತಿದ್ದರು. ಇವರ ಪವಾಡಗಳನ್ನು ಕಂಡ ಜನರು ಬೆರಗಾಗಿದ್ದರು. ಇನ್ನು ಅಜ್ಜ ಶಿವರಾತ್ರಿಯಂದು ನುಡಿಯುವ ವರ್ಷದ ಭವಿಷ್ಯ ಯಾವತ್ತೂ ಸುಳ್ಳಾಗಿಲ್ಲ. ಅಜ್ಜನವರು ಕಾಲಜ್ಞಾನವನ್ನು ನುಡಿದಿದ್ದರು. ಇದನ್ನು ಚಿಕ್ಕಪ್ಪಯ್ಯ ಮುಂಡಗಿ ಎಂಬುವರು ಸುಮಾರು ಹನ್ನೆರಡು ಪುಟಗಳಲ್ಲಿ ಬರೆದಿಟ್ಟಿದ್ದರು. ಪ್ರತಿ ವರ್ಷ ಈ ಭವಿಷ್ಯವನ್ನು ಸಿದ್ದು ಮುತ್ಯಾ ಓದುತ್ತಾರೆ. 

ಅಜ್ಜ ನುಡಿದಂತೆ ಅದಾಗಲೇ ಹಲವು ಭವಿಷ್ಯಗಳು ನಿಜವಾಗಿವೆ. ಪ್ರಧಾನಿ ನರೇಂದ್ರ ಮೋದಿ, ಡಿಜೆ ಕೆಜೆ ಹಳ್ಳಿ ಪ್ರಕರಣ, ಮಂಗಳೂರು ಗಲಭೆ, ಕೊರೊನಾ, ರಷ್ಯಾ-ಉಕ್ರೇನ್ ಯುದ್ಧ ಹೀಗೆ ಪ್ರತಿಯೊಂದರ ಬಗ್ಗೆಯೂ ಭವಿಷ್ಯ ನುಡಿದಿದ್ದರು. ಈ ಶಿವರಾತ್ರಿಯಲ್ಲಿ ಭೂಕಂಪವಾಗುವ ಬಗ್ಗೆ ಅಜ್ಜ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಕೇಳಿದ ಜನರು ಆತಂಕಗೊಂಡಿದ್ದಾರೆ. ಇದರ ಜೊತೆಗೆ ಬಬಲೇಶ್ವರ ಸ್ವಾಮೀಜಿಗಳು ಮತ್ತಷ್ಟು ಭವಿಷ್ಯವನ್ನು ಕೂಡ ನುಡಿದಿದ್ದಾರೆ.  

ದೇಶದಲ್ಲಿ ಭೂಕಂಪನ ಹಾಗೂ ಜಲಪ್ರಳಯ ಉಂಟಾಗಲಿದೆ ಎಂದು ಹೊಳೆಬಬಲಾದಿ ಮಠಾಧೀಶರು ಮತ್ತು ಕಾರ್ಣಿಕರಾದ ಶ್ರೀ ಸಿದ್ಧರಾಮಯ್ಯ ಹೊಳಿಮಠ ಭವಿಷ್ಯ ನುಡಿದಿದ್ದಾರೆ. ರಾಜ್ಯದಲ್ಲಿ ಭೂಮಿ ಕುಪ್ಪಳಿಸಲಿದೆ ಎಂದು ಸಿದ್ಧರಾಮಯ್ಯ ಹೊಳಿಮಠ ಸ್ವಾಮೀಜಿ ಇದೀಗ ಭವಿಷ್ಯ ನುಡಿದಿದ್ದಾರೆ. (video credit : tv 9 kannada )

ಸಜ್ಜನರೆಲ್ಲರೂ ದುರ್ಜನರಾಗಿ, ಕೆಟ್ಟದನ್ನು ರೂಢಿಸಿಕೊಳ್ಳುತ್ತಾರೆ. ನಮ್ಮ ನಮ್ಮಲ್ಲಿ ಜಗಳಗಳು ಶುರುವಾಗುತ್ತವೆ. ಮಳೆ ಬೆಳೆ ಉತ್ತಮವಾಗಿ ಆಗುತ್ತದೆ. ಇದರ ಜೊತೆಗೆ ಜಲಪ್ರಳಯವೂ ಆಗುತ್ತದೆ. ಭೂಮಿ ಕುಪ್ಪಳಿಸುತ್ತದೆ. ಮಕ್ಕಳು ತಂದೆ-ತಾಯಿಯನ್ನು ಹೆಚ್ಚು ಪ್ರೀತಿಸಲು ಶುರು ಮಾಡುತ್ತಾರೆ. ಇದರಿಂದ ವೃದ್ಧಾಶ್ರಮಗಳು ಕಡಿಮೆಯಾಗುತ್ತವೆ. ಗಡಿ ಕಾಯುವ ಯೋಧರಿಗೆ ಜಯವಾಗುತ್ತದೆ. ರಾಜ್ಯದಲ್ಲಿ ಕೊಲೆ, ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತವೆ. ರಾಜ್ಯದಲ್ಲಿ ಸೂತಕದ ಛಾಯೆ ಮೂಡುತ್ತದೆ ಎಂದು ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.