ತಂಗಿಯ ಮದುವೆಯಲ್ಲಿ ‘ಊ ಅಂಟಾವಾ’ ಹಾಡಿಗೆ ಸೀರೆಯುಟ್ಟು ಬೆಳ್ಳಿ ಡಾನ್ಸ್ ಮಾಡಿದ ಯುವತಿಯರು ;ವಿಡಿಯೋ ವೈರಲ್

ತಂಗಿಯ ಮದುವೆಯಲ್ಲಿ ‘ಊ ಅಂಟಾವಾ’ ಹಾಡಿಗೆ ಸೀರೆಯುಟ್ಟು ಬೆಳ್ಳಿ ಡಾನ್ಸ್ ಮಾಡಿದ ಯುವತಿಯರು ;ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳು ವೈರಲ್ ಆಗಿವೆ. ಅದರಲ್ಲಿ ಕೆಲವು ತಮಾಷೆಯಾಗಿದ್ದರೆ ಇನ್ನು ಕೆಲವು ಅಚ್ಚರಿ ಮೂಡಿಸುತ್ತವೆ. ತೆಲುಗಿನ ಬ್ಲಾಕ್ ಬಸ್ಟರ್ ಪುಷ್ಪಾ ಚಿತ್ರದ ಊ ಅಂಟಾವಾ ಹಾಡು ಸೃಷ್ಟಿಸಿದ ಕ್ರೇಜ್ ಅಷ್ಟಿಷ್ಟಲ್ಲ. ಈ ಹಾಡು ಇಂದಿಗೂ ಅಂತರ್ಜಾಲದಲ್ಲಿ ಜನಮನ ಮೆಚ್ಚಿದೆ. ಈ ಹಾಡಿಗೆ ರೀಲುಗಳನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ. ಈ ಹಾಡನ್ನು ಕೆಲವು ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಲಾಗುತ್ತದೆ.

ಇದೀಗ ನೋಯ್ಡಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೀರೆಯುಟ್ಟ ಮೂವರು ತಮ್ಮ ಸೊಂಟ ಬಳಸಿ ಬೆಲ್ಲಿ ಡ್ಯಾನ್ಸ್ ಮಾಡಿದ್ದು ವೈರಲ್ ಆಗಿದೆ. ಊ ಅಂತಾವಾ ಹಾಡಿಗೆ ಮೂವರು ಮಹಿಳೆಯರು ಬೆಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಈ ಹಾಡಿನ ಮಧ್ಯೆ ಟಿಪ್ ಟಿಪ್ ಬರಸಾ ಪಾಣಿ ಎಂಬ ಹಾಡನ್ನು ಪ್ಲೇ ಮಾಡಲಾಗಿದ್ದು, ಈ ಹಾಡಿಗೂ ಅವರು ತಮ್ಮ ಸೊಂಟವನ್ನು ಬಲವಾಗಿ ಬಗ್ಗಿಸಿದ್ದಾರೆ. 

ಈ ವಿಡಿಯೋವನ್ನು ಖುಷಿ ಶರ್ಮಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊ10.6 ಮಿಲಿಯನ್‌ ಗು ಹೆಚ್ಚು ವೀಕ್ಷಣೆಗಳನ್ನು ಮತ್ತು 380000 ಕ್ಕೂ ಹೆಚ್ಚು ಲೈಕ್ಸ್ ಗಳನ್ನೂ ಸ್ವೀಕರಿಸಿದೆ. ಇದು ಫೇಸ್‌ಬುಕ್‌ನಲ್ಲಿ 8 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.