ಎದೆ ಮುಟ್ಟಿದ್ರೆ ಕಪಾಳಕ್ಕೆ ಹೊಡೆಯದೇ ಸುಮ್ಮನಿರೋಕಾಗುತ್ತಾ? ಸಾನ್ಯಾ ಅಯ್ಯರ್ ಹೇಳಿದ್ದೇನು..? ಅ ಹುಡುಗ ಯಾರು ಗೊತ್ತಾ: ವಿಡಿಯೋ ವೈರಲ್

ಎದೆ   ಮುಟ್ಟಿದ್ರೆ    ಕಪಾಳಕ್ಕೆ ಹೊಡೆಯದೇ ಸುಮ್ಮನಿರೋಕಾಗುತ್ತಾ?  ಸಾನ್ಯಾ ಅಯ್ಯರ್ ಹೇಳಿದ್ದೇನು..?  ಅ ಹುಡುಗ ಯಾರು ಗೊತ್ತಾ: ವಿಡಿಯೋ ವೈರಲ್

ಪುತ್ತೂರಿನಲ್ಲಿ ನಡೆದ ಕಂಬಳಕ್ಕೆ ನಟಿ ಸಾನ್ಯಾ ಅಯ್ಯರ್ ಗೆಸ್ಟ್ ಆಗಿ ಹೋಗಿದ್ದು ಎಲ್ಲರಿಗೂ ತಿಳಿದ ವಿಚಾರ. ಆದರೆ ಕಂಬಳ ನಡೆದ ಜಾಗದಲ್ಲಿ ಹುಡುಗರ ಜೊತೆಗೆ ಆದ ಕಿರಿಕ್ ಈಗ ಎರಡು ದಿನದಿಂದ ಭಾರೀ ಸುದ್ದಿಯಾಗಿದೆ. ಕುಡಿದು ಬಂದು ಸೆಲ್ಫಿ ಕೇಳಿದ ಹುಡುಗನಿಗೆ ನಟಿ ಸಾನ್ಯಾ ಅಯ್ಯರ್ ಕಪಾಳಕ್ಕೆ ಹೊಡೆದಿದ್ದಾರೆ. ಹುಡುಗನೂ ವಾಪಸ್ ಸಾನ್ಯಾಗೆ ಕಪಾಳ ಮೋಕ್ಷ ಮಾಡಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಈ ಗಲಾಟೆಯ ವೀಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನೊಂದು ಕಡೆ ಆ ಹುಡುಗ ಸಾನ್ಯಾ ಅವರ ಮೈ ಮುಟ್ಟಿ ಕಿರುಕುಳ ನೀಡಿದ. ಅದಕ್ಕೆ ಸಾನ್ಯಾ ಹೊಡೆದಿದ್ದು ಎಂದು ಹೇಳಲಾಗುತ್ತಿದೆ. 

ಆದರೆ, ಅಲಿ ನಡೆದ ಸತ್ಯ ಘಟನೆಯ ಬಗ್ಗೆ ಸಾನ್ಯಾ ಅಯ್ಯರ್ ಮಾಧ್ಯಮದ ಎದುರಿಗೆ ಸ್ಪಷ್ಟನೆ ನೀಡಿದ್ದಾರೆ. ಪುತ್ತೂರಿನಲ್ಲಿ ಕಂಬಳವನ್ನು ನೋಡಿದ ಸಾನ್ಯಾ ಅಯ್ಯರ್ ಅವರು ಕಾರ್ಯಕ್ರಮದಲ್ಲಿ ಸರಿಯಾಗಿ ನೋಡಲು ಆಗಲಿಲ್ಲ ಎಂದು ಮತ್ತೆ ಸ್ನೇಹಿತೆಯರ ಜೊತೆಗೆ ಹೋಗಿದ್ದರಂತೆ. ಈ ವೇಳೆ ಬಂದ ಹುಡುಗನೊಬ್ಬ ಸಾನ್ಯ ಅಯ್ಯರ್ ಅವರ ಸ್ನೇಹಿತೆಯ ಕೈ ಹಿಡಿದು ಎಳೆದಿದ್ದಾನೆ. ಆಗ ಭಯಗೊಂಡ ಸಾನ್ಯಾ ಹಾಗೂ ಸ್ನೇಹಿತರು, ಕಾರ್ಯಕ್ರಮ ಆಯೋಜಕರ ಗಮನಕ್ಕೆ ತಂದಿದ್ದಾರೆ. ಆದರೆ ಹುಡುಗ ಅಲ್ಲಿಂದ ಎಲ್ಲಿಗೆ ಹೋದ.? ಏನಾಯಿತು ಎಂಬುದು ಯಾರಿಗೂ ಗೊತ್ತಿಲ್ಲ. ವೀಡಿಯೋ ಮಾತ್ರ ವೈರಲ್ ಆಗಿ ಸುದ್ದಿ ಜೋರಾಗಿದೆ.   

ಅದರಲ್ಲೂ ನಾನು ಹುಡುಗನಿಗೆ ಹೊಡೆದೆ, ಆತನೂ ತನಗೆ ಹೊಡೆದ ಎಂದು ಸುದ್ದಿಯಾಗಿದೆ. ಇದೆಲ್ಲಾ ಸುಳ್ಳು. ಆ ರೀತಿ ಎಲ್ಲಾ ಏನೂ ನಡೆದೇ ಇಲ್ಲ ಎಂದು ಸಾನ್ಯಾ ಅಯ್ಯರ್ ಸ್ಪಷ್ಟವಾಗಿ ಹೇಳಿದ್ದಾರೆ. ಇದರ ಜೊತೆಗೆ ಶಾಪಿಂಗ್ ಮಾಲ್, ಥಿಯೇಟರ್ ಗಳಿಗೆ ಹೋದ್ರೆ ಅಲ್ಲೂ ಗಂಡಸರು ಎದೆ ಮುಟ್ಟುವದು, ಮೈ ಸೋಕಿಸುವುದನ್ನು ಮಾಡುತ್ತಾರೆ. ಎಲ್ಲಾ ಗಂಡಸರೂ ಹಾಗೆ ಮಾಡೊಲ್ಲ. ಆದರೆ, ಹೆಣ್ಣು ಮಕ್ಕಳಿಗೆ ಇಲ್ಲಿ ಸ್ವಾತಂತ್ರ್ಯವೇ ಇಲ್ಲ ಎಂದು ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ. ಅ ಹುಡುಗ  ಪುತ್ತೂರು ನಲ್ಲಿ ವಾಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ . ಸಾನ್ಯಾ ಅಯ್ಯರ್ ಜೊತೆ ಸೆಲ್ಫಿ ತೆಗೆದು ಕೊಳ್ಳಲು ಹೋಗಿ ಏನೋ ಸ್ವಲ್ಪ ಕೈ ಟಚ್ ಆಗಿದೆ ಅಷ್ಟೇ ಅದನ್ನೇ ಈ ಮೀಡಿಯಾದವರು ದೊಡ್ಡ ಸುದ್ದಿ ಮಾಡಿದ್ದಾರೆ ಎಂದು ತಿಳಿದಿ ಬಂದಿದೆ . ( video credit ; third eye )

<