ಈ ವಾರದ ವೋಟಿಂಗ್ ಪರ್ಸಂಟೇಜ್ ನಿಂದಾ ಮನೆಯಿಂದ ಹೊರಗೆ ಬಂದ ಸ್ಪರ್ಧಿ ಯಾರು ಗೊತ್ತಾ?

ಈ ವಾರದ ವೋಟಿಂಗ್ ಪರ್ಸಂಟೇಜ್ ನಿಂದಾ ಮನೆಯಿಂದ ಹೊರಗೆ ಬಂದ ಸ್ಪರ್ಧಿ ಯಾರು ಗೊತ್ತಾ?

ಈಗ ಕಿರುತೆರೆಯಲ್ಲಿ ಅದರಲ್ಲಿ ಈ ಮೂರು ತಿಂಗಳು ಕಾಲ ಹೆಚ್ಚಿನ ಸದ್ದು ಮಾಡುವ ಸುದ್ದಿ ಎಂದ್ರೆ ಅದು ಬಿಗ್ ಬಾಸ್ ಕನ್ನಡ. ಈ ಬಾರಿಯ ದಶಕದ ಸೀಸನ್ ಆಗಿರುವ ಕಾರಣದಿಂದ ಬಿಗ್ ಬಾಸ್ ಸೀಸನ್ ನಲ್ಲಿ ಹೆಚ್ಚಿನ ನಿರೀಕ್ಷೆ ಇಡಬಹುದು ಎಂದು ವಾಹಿನಿ ಮುಂಚೆಯೇ ತಿಳಿಸಿತ್ತು. ಆದರೆ ಈ ಬಾರಿಯ ಸ್ಪರ್ಧಿಗಳ ಆಯ್ಕೆಯಲ್ಲಿ ಕೊಂಚ ಎಡವಿದ್ದು ಮನೆಯಲ್ಲಿ ಮನೋರಂಜನೆಯ ವಿಷಯದ ಬದಲು ಜಗಳಗಳೆ ಹೆಚ್ಚಾಗಿದೆ ಎಂದ್ರೆ ತಪ್ಪಾಗಲಾರದು. ಹಾಗಾಗಿ ಈ ಬಾರಿ 7ನೆ ವಾರ ಕಳೆಯುತ್ತಾ ಬಂದಿದ್ದರು ಕೊಡ ಮನೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. 

ಇನ್ನೂ ಈಗ ಬಿಗ್ ಬಾಸ್ ಕನ್ನಡ ಸೀಸನ್ ಹತ್ತು 7ನೆ ವಾರ ಕೊಡ ಮುಗಿದಿದೆ. ಇನ್ನೂ ಸುದೀಪ್ ಅವರ ಪಂಚಾಯತಿಯಲ್ಲಿ ಯಾರಿಗೆ ಸಖತ್ ಕ್ಲಾಸ್ ಉತ್ತಮ ಹಾಗೂ ಕಿಚ್ಚನ ಚಪ್ಪಾಳೆ ಪಡೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ. ಅದರೊಟ್ಟಿಗೆ ಈ ಬಾರಿ ನಾಮಿನೇಟ್ ಆಗಿರುವ 13ಮಂದಿಯ ಪೈಕಿ ಯಾರು ಈ ವಾರ ಮನೆಯಿಂದ ಹೋರ ಹೋಗುತ್ತಾರೆ ಎಂದು ಸಾಕಷ್ಟು ಗೊಂದಲ ಹಾಗೂ ಕುತೂಹಲವನ್ನು ಕೊಡ ಸೃಷ್ಟಿ ಮಾಡಿದೆ. ಇನ್ನೂ ಈ ವಾರ ನಾಮಿನೇಟ್ ಆಗಿರುವ ಎಲ್ಲರೂ ಕೊಡ ಬಿಗ್ ಬಾಸ್ ಮನೆಯಲ್ಲಿ ಟಪ್ ಕಾಂಟೆಸ್ಟ್ ಟೆಂಟ್ ಎಂದೇ ಗುರುತಿಸಿಕೊಂಡುವವರು ಆಗಿದ್ದಾರೆ. ಹಾಗಾಗಿ ಯಾರು ಮನೆಯಿಂದ  ಹೊರಗೆ ಹೋಗುತಾಟರೆ ಎಂದು ಎಲ್ಲರಲ್ಲೂ ಕುತೂಹಲ ಹೆಚ್ಚಾಗಿದೆ.

ಕಳೆದ ವಾರ ವೋಟಿಂಗ್ ರೇಟಿಂಗ್ ಮೂಲಕ ಕಿಚ್ಚ ಸುದೀಪ್ ಅವರು ಎಲ್ಲಾ ಸ್ಪರ್ಧಿಗಳನ್ನು ಸೇವ್ ಮಾಡಲಾಗಿತ್ತು. ಹಾಗಾಗಿ ಮೊದಲಿಗೆ ಡ್ರೋನ್ ಪ್ರತಾಪ್ ಇಂದ ಶುರುವಾದ ಈ ಸೇವಿಂಗ್ ಪರ್ಸಂಟೇಜ್ ಸ್ನೇಹಿತ ಅವರಿಗೆ ಅಂತ್ಯವಾಗಿ ಅತಿ ಕಡಿಮೆ ವೋಟ್ ಪಡೆದುಕೊಂಡ ನೀತು ಅವರು ಮನೆಯಿಂದ ಹೋರ ಬರುವಂತೆ ಮಾಡಿತ್ತು. ಇನ್ನೂ ಈ ವಾರ ಈ ವರೆಗೂ ಮನೆಯಲ್ಲಿ ತನ್ನ ನಿಲುವನ್ನು ಕಂಡುಕೊಂಡಿಲ್ಲದ ಸ್ನೇಹಿತ ಅವರು ಮನೆಯಿಂದ ಹೊರಗೆ ಹೋಗಬಹುದು ಎನ್ನುವ ಊಹೆ ಒಂದು ಕಡೆ ಆದರೆ ಇನ್ನೂ ಬೆಂಕಿ ತನೀಷ ಅವರು ಕಾಲಿಗೆ ಪೆಟ್ಟಗಿರುವ  ಕಾರಣದಿಂದ ವಾರ ಪೂರ್ತಿ ಮನೆಯಿಂದ ಹೊರಗೆ ಇದ್ದ ಕಾರಣದಿಂದ ಅವರು ಕೊಡ ಮನೆಯಿಂದ ಹೊರಗೆ ಬರಬಹುದು ಎಂದು ಜನ ತಿಳಿಸುತ್ತಿದ್ದಾರೆ. ಆದ್ರೆ ಯಾರು ಮನೆಯಿಂದ ಹೊರಗೆ ಬರುತ್ತಾರೆ ಎಂದು ನಾವು ಕಾದು ನೋಡಬೇಕಿದೆ.