ಮಲಗಿದಲ್ಲೇ ಹುಡುಗಿಯನ್ನು ಬ್ಯಾಲೆನ್ಸ್ ಮಾಡುತ್ತಾ ನೀನಾದೆ ನಾ ಎಂದ ಹೀರೋ ; ವಿಡಿಯೋ ವೈರಲ್

ಮಲಗಿದಲ್ಲೇ ಹುಡುಗಿಯನ್ನು ಬ್ಯಾಲೆನ್ಸ್ ಮಾಡುತ್ತಾ ನೀನಾದೆ ನಾ ಎಂದ ಹೀರೋ ; ವಿಡಿಯೋ ವೈರಲ್

ನಾವು ಆಗಾಗ ಹಲವು ಬಗೆಯ ಡ್ಯಾನ್ಸ್ ಗಳನ್ನು ನೋಡುತ್ತಿರುತ್ತೇವೆ. ಮೊದಲೆಲ್ಲಾ ಭರತನಾಟ್ಯ, ಫೋಕ್ ಡ್ಯಾನ್ ಅಂತ ಎರಡು ರೂಪಕಗಳನ್ನು ನೋಡಿದ್ದೆವು. ಆದರೆ, ಕಾಲ ಬದಲಾದಂತೆ, ಈಗ ಬೆಲ್ಲಿ ಡ್ಯಾನ್ಸ್, ಜುಂಬಾ, ವೆಸ್ಟರ್ನ್, ಪಾರ್ಟಿ ಡ್ಯಾನ್ಸ್, ವೆಡ್ಡಿಂಗ್ ಡ್ಯಾನ್ಸ್, ಲಿಫ್ಟಿಂಗ್ ಡ್ಯಾನ್ಸ್, ಭರತನಾಟ್ಯ ಹೀಗೆ ಸಾಕಷ್ಟು ವಿಧದ ಡ್ಯಾನ್ಸ್ ಗಳು ಈಗ ಬಳಕೆಯಲ್ಲಿವೆ. ಈ ಡ್ಯಾನ್ಸ್ ಪ್ರೋಗ್ರಾಮ್ ಗಳಲ್ಲಿ ಮಕ್ಕಳಿಂದ ಹಿಡಿದು ಎಲ್ಲರೂ ಮಾಡುವ ಒಂದೊಂದು ಬಗೆಯ ಡ್ಯಾನ್ಸ್ ಗಳಂತೂ ಪ್ರತಿಯೊಬ್ಬರನ್ನೂ ನಿಬ್ಬೆರಗಾಗುವಂತೆ ಮಾಡುತ್ತದೆ. 

ಪುನೀತ್ ರಾಜ್ ಕುಮಾರ್ ನಟನೆಯ ಯುರತ್ನ ಚಿತ್ರದಲ್ಲಿ ರೊಮ್ಯಾಮಟಿಕ್ ಹಾಡು ಇಂದಿಗೂ ಫೇಮಸ್ ಆಗಿದೆ. ನಿರ್ದೇಶಕ ಸಂತೋಷ್ ಆನಂದ್ರಾಮ್  ಅವರ ಈ ಚಿತ್ರವನ್ನು ನಿರ್ದೇಶಿಸಿದ್ದು, ಅಪ್ಪು ಜೋಡಿಯಾಗಿ ಸಯ್ಯೇಷಾ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಪ್ರಕಾಶ್ ರಾಜ್, ಡಾಲಿ ಧನಂಜಯ, ಸೋನು ಗೌಡ, ದಿಗಂತ್, ರಾಧಿಕಾ ಶರತ್ ಕುಮಾರ್, ಸಾಯಿಕುಮಾರ್ ಸೇರಿದಂತೆ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ. ಚಿತ್ರಕ್ಕೆ ತಮನ್ ಸಂಗೀತ ನೀಡಿದ್ದರೆ, ವಿಜಯ್ ಕಿರಗಂದೂರ ನಿರ್ಮಾಪಕರು. ಈ ಚಿತ್ರದಲ್ಲಿನ ನೀನಾದೆ ನಾ ಹಾಡು ತುಂಬಾ ಚೆನ್ನಾಗಿದೆ.  

ಈ ಹಾಡಿಗೆ ಸಯೇಷಾ ಮತ್ತು ಅಪ್ಪು ಅದ್ಬೂತವಾಗಿ ಡ್ಯಾನ್ಸ್ ಮಾಡಿದ್ದು, ಈ ಹಾಡಿಗೆ ಇಂದಿಗೂ ಯುವಕರು ಹೊಸ ಹೊಸ ರೀತಿಯಲ್ಲಿ ಡ್ಯಾನ್ಸ್ ಮಾಡುತ್ತಲೇ ಇರುತ್ತಾರೆ. ಇಲ್ಲೊಂದು ಜೋಡಿಗಳು ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಈ ಹಾಡಿಗೆ ಹೆಜ್ಜೆ ಹಾಕಿರುವ ವೀಡಿಯೋವನ್ನು ಅಪ್ ಲೋಡ್ ಮಾಡಿದ್ದಾರೆ. ನೀನಾದೆ ನಾ ಎಂಬ ಹಾಡಿಗೆ ಯುವತಿ ಹಾಗೂ ಯುವಕ ಡಿಫರೆಂಟ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಹುಡುಗಿಯನ್ನು ಯುವಕ ಮಲಗಿಕೊಂಡು ಕೈಯಲ್ಲೇ ಲಿಫ್ಟ್ ಮಾಡಿದ್ದಾನೆ. ಹಾಡಿನ ಪೂರ ಹೀಗೆ ಡ್ಯಾನ್ಸ್ ಮಾಡಿದ್ದು ಸಖತ್ತಾಗಿ ಮೂಡಿ ಬಂದಿದೆ. ಈ ವೀಡಿಯೋ ಈಗ ವೈರಲ್ ಆಗಿದೆ.