ಏನು ಕಾಲ ಬಂತಪ್ಪ ;ಇನ್ನು ಮೀಸೆ ಚಿಗುರದ ಹುಡುಗರು ಅಪ್ರಾಪ್ತ ಹುಡುಗಿಯರೊಂದಿಗೆ ಮನೆಯಿಂದ ಪರಾರಿ ; ಕೊನೆಗೆ ಏನಾಯ್ತು ನೋಡಿ ?

ಏನು ಕಾಲ ಬಂತಪ್ಪ ;ಇನ್ನು ಮೀಸೆ ಚಿಗುರದ ಹುಡುಗರು ಅಪ್ರಾಪ್ತ ಹುಡುಗಿಯರೊಂದಿಗೆ ಮನೆಯಿಂದ ಪರಾರಿ ; ಕೊನೆಗೆ ಏನಾಯ್ತು ನೋಡಿ ?

ಹೌದು ಗೆಳೆಯರೇ ಈಗಿನ ಕಾಲದಲ್ಲಿ ಹುಡುಗ ಮತ್ತು ಹುಡುಗಿಯರಿಗೆ ಏನ್ ಆಗಿದೆ ಗೊತ್ತಿಲ್ಲ . ಓದುವದನ್ನು ಬಿಟ್ಟು ಪ್ರೀತಿ ಪ್ರೇಮ ಅಂತ ಮನೆ ಬಿಟ್ಟು ಓಡಿ . ಹೋಗುತ್ತಾರೆ . ಇದರಿಂದ ಅವರ ತಂದೆ ತಾಯಿಗಳಿಗೆ ಎಷ್ಟು ಮನಸಿಗೆ ನೋವಾಗುತ್ತೆ ಮತ್ತು ಅವರ ಮಾನ ಮರ್ಯಾದೆ ಹೋಗುತ್ತೆ ಅಂತ ಒಂದು ಕ್ಷಣವೂ ಯೋಚಿಸುವುದಿಲ್ಲ . ಇವರು ಏನು ಮಾಡಿದ್ದಾರೆ ನೋಡಣ ಬನ್ನಿ ಒಂದೇ ಗ್ರಾಮದ 4 ಮಕ್ಕಳು ನಾಪತ್ತೆಯಾಗಿರುವ ಘಟನೆ ತುಮಕೂರುಜಿಲ್ಲೆಯ ಶಿರಾತಾಲೂಕಿನ ಚಿಕ್ಕಬಾಣಗೆರೆ ಗ್ರಾಮದಲ್ಲಿ ನಡೆದಿದೆ. ಒಂದೇ ಗ್ರಾಮದ ನಾಲ್ವರು ಮಕ್ಕಳು ಕಣ್ಮರೆಯಾಗಿದ್ದು ಗ್ರಾಮದಲ್ಲೀಗ ಆತಂಕ ಆವರಿಸಿದೆ.

ಮಂಜುಳಾ, ಮಧು ಕುಮಾರ್, ಮಹಾಲಕ್ಷ್ಮಿ ಹಾಗೂ ಭಾನು ಕಣ್ಮರೆಯಾದ ಮಕ್ಕಳು.ಶನಿವಾರ ಮಧ್ಯಾಹ್ನ ಆಟ ಆಡಲೆಂದು ಮನೆಯಿಂದ ಹೋದವರು ವಾಪಸ್ ಮನೆಗೆ ಬಂದಿಲ್ಲ. ಎಷ್ಟೋತ್ತಾದರೂ ಮಕ್ಕಳು ಮನೆಗೆ ಬಂದಿಲ್ಲ ಎಂದು ಗಾಬರಿಗೊಂಡ ಪೋಷಕರು ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದ್ರೆ ಏನು ಪ್ರಯೋಜನವಾಗಿಲ್ಲ. ಊರೆಲ್ಲಾ ಹುಡುಕಿದರೂ ಮಕ್ಕಳು ಸಿಗದ ಕಾರಣ ಪೋಷಕರು ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಇನ್ನು ಇಲ್ಲಿ ಅಚ್ಚರಿ ಎಂದರೆ ನಾಪತ್ತೆಯಾಗಿರುವ ಎಲ್ಲರೂ 15-16 ವರ್ಷದ ವಯಸ್ಸಿನವರಾಗಿದ್ದಾರೆ.ಒಂದೇ ಗ್ರಾಮದಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಹಾಸನದ ಬಸ್ ನಿಲ್ದಾಣದಲ್ಲಿ ನಿನ್ನೆ ಪತ್ತೆಯಾಗಿದ್ದಾರೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿಕ್ಕಬಾಣಗೆರೆ ಗ್ರಾಮದ ಮಂಜುಳಾ, ಮಧು ಕುಮಾರ್, ಮಹಾಲಕ್ಷ್ಮಿ ಹಾಗೂ ಭಾನು ಕಣ್ಮರೆಯಾಗಿದ್ದು, ಒಂದೇ ಗ್ರಾಮದ ನಾಲ್ವರು ಮಕ್ಕಳು ಕಣ್ಮರೆಯಾಗಿದ್ದರಿಂದ ಗ್ರಾಮದಲ್ಲಿ ಆತಂಕ ಮನೆ ಮಾಡಿತ್ತು.
ನಾಪತ್ತೆಯಾಗಿದ್ದ ಎಲ್ಲರೂ 15 ವರ್ಷದ ವಯಸ್ಸಿನವರಾಗಿದ್ದಾರೆ. ಒಂದೇ ಗ್ರಾಮದ ಒಂದೇ ವಯಸ್ಸಿನ 4 ಮಕ್ಕಳು ನಾಪತ್ತೆಯಾಗಿರುವುದು ಹಲವು ಅನುಮಾನ ಹುಟ್ಟು ಹಾಕಿತ್ತು, ಘಟನೆ ಸಂಬಂಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಗೆ ಇಳಿದಿದ್ದರು.

ಶಿಲಾ ಶಾಸರ ಟಿ.ಬಿ.ಜಯಚಂದ್ರ ಅವರು ಘಟನೆ ಸಂಬಂಧ ಪ್ರತಿಕ್ರಿಯಿಸಿದ್ದರು, ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮಕ್ಕಳ ಚಿತ್ರಗಳನ್ನು ಹಂಚಿಕೊಂಡು ಎಲ್ಲಾದರೂ ಪತ್ತೆಯಾದರೆ ತಿಳಿಸಿ ಎಂದು ಜನರಲ್ಲಿ ಮನವಿ ಮಾಡಿದ್ದರು

ಮಕ್ಕಳು ಯಾಕೆ ಮನೆ ಬಿಟ್ಟು ಹೋದರು, ಯಾರಾದರೂ ಮಕ್ಕಳನ್ನು ಕರೆದುಕೊಂಡು ಹೋದರಾ, ಅಥವಾ ಮಕ್ಕಳೇ ಎಲ್ಲಾದರೂ ಸುತ್ತಾಡಿಕೊಂಡು ಬರೋಣ ಎಂದು ಹೊರಟರಾ? ಮನೆಯಲ್ಲಿ ಹೇಳದೆ ಹೊರಟಿದ್ದು ಯಾಕೆ ಎಂಬೆಲ್ಲಾ ಪ್ರಶ್ನೆಗಳಿಗೆ ಮಕ್ಕಳ ವಿಚಾರಣೆಯಿಂದ ತಿಳಿದು ಬರಲಿದೆ,