ಹುಡುಗಿಯ ಕೈ ಹಿಡಿದು ಚುಡಾಯಿಸಿದವನ ಗತಿ ಕೊನೆಗೆ ಏನಾಯ್ತು..? ವೈರಲ್ ವಿಡಿಯೋ

ಹುಡುಗಿಯ ಕೈ ಹಿಡಿದು ಚುಡಾಯಿಸಿದವನ ಗತಿ ಕೊನೆಗೆ ಏನಾಯ್ತು..? ವೈರಲ್ ವಿಡಿಯೋ

ಈ ಜಗತ್ತಿನಲ್ಲಿ ಎಲ್ಲೂ ಒಂಟಿ ಹುಡುಗಿಯರಿಗೆ ರಕ್ಷಣೆ ಎಂಬುದೇ ಇಲ್ಲ. ಜೊತೆಗಿದ್ದವರೆ ಹುಡುಗಿಯ ಬಾಳನ್ನು ಹಾಳು ಮಾಡಲು ಮುಂದಾಗುತ್ತಾರೆ. ಇತ್ತೀಚೆಗಂತೂ ಶಾಲೆಗೆ ಹೋದ ಪುಟಾಣಿ ಹೆಣ್ಣು ಮಕ್ಕಳು ಕೂಡ ಮನೆಗೆ ಹೆಣವಾಗಿ ಬಂದ ಸುದ್ದಿಗಳನ್ನು ಕೇಳುತ್ತಲೇ ಇದ್ದೇವೆ. ಮಕ್ಕಳಿಗೆ ಪಾಠ ಹೇಳಿಕೊಡುವ ನೆಪದಲ್ಲಾದರೂ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವನ್ನು ನಡೆಸುತ್ತಾರೆ. ಇದೀಗ ಇಲ್ಲೊಂದು ವೀಡಿಯೋ ವೈರಲ್ ಆಗಿದ್ದು, ಬಾಲಕಿಯನ್ನು ಯುವಕನೊಬ್ಬ ಪೀಡಿಸಿದ್ದು, ಕ್ಯಾಮರಾದಲ್ಲಿ ಸೆರೆಯಾಗಿದೆ. 

ಇಲ್ಲೊಬ್ಬಳು ಬಾಲಕಿ ಮೆಟ್ಟಲನ್ನು ಹತ್ತಿಕೊಂಡು ಒಬ್ಬಳೇ ಹೋಗುತ್ತಿರುತ್ತಾಳೆ. ಆದರೆ, ಮೇಲೆ ಹುಡುಗನೊಬ್ಬ ಕೂಲಿಂಗ್ ಗ್ಲಾಸ್ ಹಾಕಿ ಈಕೆ ಬರುವುದನ್ನೇ ಕಾಯುತ್ತಾ ನೋಡುತ್ತಿರುತ್ತಾನೆ. ಹುಡುಗಿ ಹತ್ತಿರ ಬಂದ ಕೂಡಲೇ ದಾರಿಗೆ ಅಡ್ಡ ಹಾಕಿ ಆಕೆಯ ಕೈ ಹಿಡಿದು ಎಳೆಯುತ್ತಾನೆ. ಆಕೆ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಬಾಲಕಿಯನ್ನು ಫ್ಲರ್ಟ್ ಮಾಡಲು ಮುಂದಾಗುತ್ತಾನೆ. ಈ ವೇಳೆಗೆ ಮೇಲಿಂದ ವ್ಯಕ್ತಿಯೊಬ್ಬ ಬರುತ್ತಿರುತ್ತಾನೆ. ಆತ ಇವರನ್ನು ನೋಡಿ, ಹುಡುಗನಿಗೆ ಬುದ್ಧಿ ಹೇಳುತ್ತಾನೆ. ಆದರೆ, ಹುಡುಗ ಕೇರ್ ಮಾಡದೇ ವಾಪಸ್ ಮಾತನಾಡುತ್ತಾನೆ. ಆತ ಅಲ್ಲಿಂದ ಹೊರಟು ಬಿಡುತ್ತಾನೆ.  

ಸ್ವಲ್ಪ ಸಮಯದ ಬಳಿಕ ಇನ್ನೊಬ್ಬಳು ಪುಟ್ಟ ಬಾಲಕಿ ಬರುತ್ತಾಳೆ. ಇವರಿಬ್ಬರನ್ನು ನೋಡಿ ಆಕೆಯನ್ನು ಬಿಡುವಂತೆ ಹೇಳುತ್ತಾಳೆ. ಆದರೆ, ಅವನು ಪುಟ್ಟ ಬಾಲಕಿಯನ್ನು ಗದರಿಸುತ್ತಾನೆ. ಅಲ್ಲಿಂದ ಹೊರಟ ಆ ಪುಟಾಣಿ ತನ್ನ ತಾಯಿಯನ್ನು ಕರೆದುಕೊಂಡು ಬರುತ್ತಾರೆ. ಅವರ ತಾಯಿ ಬಂದು ಹುಡುಗನಿಗೆ ಬೈಯುತ್ತಾಳೆ. ಗಲಾಟೆ ಮಾಡಿ ಪೊಲೀಸರಿಗೆ ಫೋನ್ ಮಾಡುತ್ತಾಳೆ. ಅಷ್ಟರಲ್ಲಿ ಹುಗನಿಗೆ ಮೊದಲು ಗದರಿಸಿದ್ದ ವ್ಯಕ್ತಿಯೂ ಪೊಲೀಸರನ್ನು ಕರೆದುಕೋಮಡು ಬರುತ್ತಾರೆ. ಪೊಲೀಸರು ಬಂದು ಹುಡುಗನಿಗೆ ಹೊಡೆದು ಎಳೆದುಕೋಮಡು ಹೋಗುತ್ತಾರೆ. ಈ ದೃಷ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು. ( video credit : digital eyes )