ವಧುವಿಗೆ ಕೇಕ್ ತಿನ್ನಿಸಲು ಹೋಗಿ ಇಗ್ಗಾ ಮುಗ್ಗಾ ಹೊಡೆಸಿ ಕೊಂಡ ವರ ಛೆ ಪಾಪ ಹೀಗಾಗ ಬಾರದಿತ್ತು ಎಂದು ನೆಟ್ಟಿಗರು ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ತಮಾಷೆಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಜನರ ಬೇಡಿಕೆಯ ಮೇರೆಗೆ ಹೆಚ್ಚಿನ ಸಂಖ್ಯೆಯ ಅಂತಹ ವೀಡಿಯೊಗಳನ್ನು ಅಪ್ಲೋಡ್ ಮಾಡಲಾಗುತ್ತದೆ. ಅವುಗಳಲ್ಲಿ ಕೆಲವು ವೀಡಿಯೊಗಳನ್ನು ವೀಕ್ಷಿಸಿದ ಬಳಿಕ ಎಂತಹವರಿಗೂ ಸಹ ನಗದೇ ಇರಲು ಸಾಧ್ಯವೇ ಇಲ್ಲ. ಇದೀಗ ಅಂತಹುದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಈ ವಿಡಿಯೋವನ್ನು ನೋಡಿದರೆ ಗ್ರಾಮದ ಕಾರ್ಯಕ್ರಮದಲ್ಲಿ ಇದನ್ನು ಚಿತ್ರೀಕರಿಸಲಾಗಿದೆ ಎಂದು ತೋರುತ್ತದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ತಮಾಷೆಯ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋದಲ್ಲಿ, ವಧು ಮತ್ತು ವರರು ಕೆಲವು ಕ್ಷುಲ್ಲಕ ವಿಷಯಗಳಿಗೆ ಪರಸ್ಪರ ಜಗಳವಾಡುವ ಮೂಲಕ ಮದುವೆಯನ್ನು ಹಾಳು ಮಾಡಿಕೊಂಡಿದ್ದಾರೆ. ವಿಡಿಯೋದ ಆರಂಭದಲ್ಲಿ, ವಧು-ವರರು ವೇದಿಕೆಯ ಮೇಲೆ ನಿಂತಿರುವುದನ್ನು ಕಾಣಬಹುದು. ಸಂಪೂರ್ಣ ಸಂತೋಷದ ವಾತಾವರಣ ಅಲ್ಲಿದೆ.. ವರ ವಧುವಿಗೆ ಕೇಕ್ ತಿನ್ನಿಸಲು ಹೋಗುತ್ತಾನೆ . ಆದರೆ ವದು ಬೇಡ ಅಂದರು ಅವಳಿಗೆ ತಿನ್ನಿಸಲು ಹೋಗುತ್ತಾನೆ .
ವಧು ತಾಳ್ಮೆ ಕಳೆದುಕೊಂಡು ವರನಿಗೆ ಕಪಾಳಮೋಕ್ಷ ಮಾಡುತ್ತಾಳೆ. ಅಷ್ಟೇ ಅಲ್ಲ, ಅತಿಥಿಗಳು ಮಧ್ಯಪ್ರವೇಶಿಸಿದರೂ ಇಬ್ಬರ ಜಗಳವನನು ನಿಲ್ಲಿಸುವುದು ಕಷ್ಟ ಎನ್ನುವಷ್ಟರ ಮಟ್ಟಿಗೆ ತಾರಕಕ್ಕೆ ಹೋಗುತ್ತದೆ. ಮದುವೆಯ ದಿನ ನವದಂಪತಿಗಳು ಜಗಳವಾಡುತ್ತಿರುವುದನ್ನು ಕಂಡು ಅಲ್ಲಿದ್ದವರು ಬೆಚ್ಚಿಬೀಳುತ್ತಾರೆ. ಅವರು ಮಧ್ಯಪ್ರವೇಶಿಸಿ ಜಗಳವನ್ನು ನಿಲ್ಲಿಸಲು ಪ್ರಯತ್ನಿಸಿದರು ಆದರೆ ವಧುವರರು ತಮ್ಮ ಜಗಳವನ್ನು ನಿಲ್ಲಿಸುವುದಿಲ್ಲ. . ನೀವೇನಂತೀರಾ ?