ವರದಕ್ಷಿಣೆ ಕೇಳಿದ ವರನಿಗೆ ಹಗ್ಗದಿಂದ ಮರಕ್ಕೆ ಕಟ್ಟಿ ಸರಿಯಾಗೇ ಪೂಜೆ ಮಾಡಿದ ವಧುವಿನ ಕಡೆಯವರು ; ವಿಡಿಯೋ ವೈರಲ್

ವರದಕ್ಷಿಣೆ ಕೇಳಿದ ವರನಿಗೆ ಹಗ್ಗದಿಂದ ಮರಕ್ಕೆ ಕಟ್ಟಿ ಸರಿಯಾಗೇ ಪೂಜೆ ಮಾಡಿದ  ವಧುವಿನ ಕಡೆಯವರು ; ವಿಡಿಯೋ ವೈರಲ್

ಮದುವೆ ಎನ್ನುವುದು ಒಂದು ಸುಂದರವಾದ ಸಂಬಂಧ . ಅದರಲ್ಲಿ ಯಾವುದೇ ರೀತಿಯ ಆಡಂಬರ ಅಥವಾ    ವರದಕ್ಷಿಣೆ  ಡಿಮ್ಯಾಂಡ್ ಇರಬಾರದು . ಈಗಿನ ಕಾಲದಲ್ಲಿ ಹೆಣ್ಣು ಸಿಗುವದೇ ಕಷ್ಟ . ಅಂತಹದರಲ್ಲಿ ಇಲ್ಲೊಬ್ಬ ಬೂಪ ನನಗೆ ವರದಕ್ಷಿಣೆ ಕೊಡದ್ದಿದ್ದರೆ ತಾಳಿ  ಕಟ್ಟುವುದಿಲ್ಲ ಅಂತ ಹಠ    ಮಾಡಿದ್ದಾನೆ .ವರಮಹಾಶಯನಿಗೆ ವರದಕ್ಷಿಣೆಯ ನೆನಪಾಗಿದೆ. ಕೊಡದ ಹೊರತು ಮಾಲೆ ಹಾಕಲೊಲ್ಲೆ ಎಂದು ಪಟ್ಟುಹಿಡಿದ ವರನಿಗೆ ಪಾಠ ಕಲಿಸಬೇಕೆಂದು ಹೆಣ್ಣಿನ ಕಡೆಯವರು ಅವನನ್ನು ಮರಕ್ಕೆ ಕಟ್ಟಿ ಹಾಕಿ ಅಕ್ಷರಶಃ ಬಂಧಿಸಿದ್ದಾರೆ. ಎರಡೂ ಕಡೆಯವರು ಒಪ್ಪಂದಕ್ಕೆ ಬರಲಾಗದೇ ಜಗಳಕ್ಕಿಳಿದಿದ್ದಾರೆ.

ಸಿಕ್ಕಾಪಟ್ಟೆ ವೈರಲ್ ಆಗಿರುವ ಈ ವಿಡಿಯೋನಲ್ಲಿ ವರನ ಸುತ್ತ ಹಗ್ಗ ಬಿಗಿದು ಗಂಟುಹಾಕುತ್ತಿರುವುದನ್ನು ಕಾಣಬಹುದು. . ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಧೋರಣೆಯಲ್ಲಿ ಸಾಲಂಕೃತ ವರ ತಲೆಯೆತ್ತಿ ಸ್ಥಿತಪ್ರಜ್ಞತೆಯಿಂದ ನಿಂತಿದ್ದಾನೆ. “ಈ ಮುಸುಡಿಗೆ ಹೆಣ್ಣು ಸಿಕ್ಕಿದ್ದೇ ಹೆಚ್ಚು, ವರದಕ್ಷಿಣೆ ಬೇರೆ ಕೇಡು,” ಎಂದಿದ್ದಾರೆ ಕೆಲವರು. “ಎರಡೂ ಪಕ್ಷದ ಮಂದಿ ಪೊಲೀಸ್ ಠಾಣೆಯಲ್ಲಿದ್ದಾರೆ. ಅವರು ರಾಜಿಯಾಗಿ ಯಾವುದೇ ಒಪ್ಪಂದಕ್ಕೆ ಬಂದಿಲ್ಲ. ಇನ್ನೂ ಮಂತ್ರಾಲೋಚನೆ ನಡೆದಿದೆ,” ಎಂದು ಪೋಲೀಸರು ತಿಳಿಸಿದ್ದಾರೆ.   

ವರನ ಗೆಳೆಯರು ಕೆಟ್ಟದಾಗಿ ವರ್ತಿಸುತ್ತಿದ್ದರು. ಇದರಿಂದ ಜಗಳ ಶುರುವಾಯಿತು. ಇದರ ನಡುವೆಯೇ ಇವನು ವರದಕ್ಷಿಣೆ ಬೇರೆ ಕೇಳತೊಡಗಿದ. ಇದರಿಂದ ಕುಪಿತರಾದ ವಧುವಿನ ಕಡೆಯವರು ಅವನನ್ನು ಕಟ್ಟಿಹಾಕಿದರು,” ಎಂದೂ ಕೆಲವರು ಹೇಳುತ್ತಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.