ಬಂಪರ್ ಆಫರ್ ಈ ಹುಡುಗಿಯನ್ನು ಮದುವೆಯಾದರೆ ಎರಡು ಕೋಟಿ ಮನೆ, ಕ್ಲಿನಿಕ್ ಎರಡೂ ಫ್ರೀ..! ವಿಡಿಯೋ ವೈರಲ್

ಬಂಪರ್ ಆಫರ್ ಈ ಹುಡುಗಿಯನ್ನು ಮದುವೆಯಾದರೆ ಎರಡು ಕೋಟಿ  ಮನೆ, ಕ್ಲಿನಿಕ್ ಎರಡೂ ಫ್ರೀ..! ವಿಡಿಯೋ ವೈರಲ್

ಈಗ ರೀಲ್ಸ್ ಗಳಿಗೆ ಕಡಿಮೆ ಏನೂ ಇಲ್ಲ. ಆದರೆ, ಕೆಲವೊಂದು ರೀಲ್ಸ್ ಗಳು ಎಷ್ಟೆಲ್ಲಾ ಕಾಮಿಡಿಯಾಗಿ ಇರುತ್ತೆ ಎಂದರೆ, ನೋಡಿದರೆ, ನಗು ತಡೆಯೋಕಾಗಲ್ಲ. ಕೆಲ ರೀಲ್ಸ್ ಗಳು ಸೀರಿಯಸ್ ವಿಷಯವಾದರೂ ನಗುವಂತೆ ಮಾಡುತ್ತೆ. ರೀಲ್ಸ್ ಹುಚ್ಚಿರುವವರು ಹೇಗೆಲ್ಲಾ ಆಡುತ್ತಾರೆ ಎಂದು ಗೆಸ್ ಮಾಡಲು ಕೂಡ ಸಾಧ್ಯವಿಲ್ಲ. ಕೊರೊನಾ ಕಾಲದಲ್ಲಿ ಕೆಲವರು ವೀಡಿಯೋ ಕಾಲ್ ಮೂಲಕವೇ ಮದುವೆಯಾಗಿದ್ದು, ನಿಶ್ಚಿತಾರ್ಥ ಮಾಡಿಕೊಂಡಿದ್ದು ಗೊತ್ತು. ಆದರೆ, ರೀಲ್ಸ್ ಮೂಲಕ ವಧು-ವರ ಅನ್ವೇಷಣೆ ಮಾಡೋದನ್ನ ನೋಡಿದರೆ ಎಂಥವರಿಗೂ ಶಾಕ್ ಆಗುತ್ತೆ. ಅಂತಹದ್ದೇ ಒಂದು ರೀಲ್ ಇಲ್ಲಿದೆ. ನೋಡಿ..

ಈ ಹುಡುಗಿಯನ್ನ ಮದುವೆಯಾಗುವ ಹುಡುಗನಿಗೆ ಬಂಪರ್ ಆಫರ್ ಸಿಗುವುದಂತೂ ಗ್ಯಾರೆಂಟಿ. ಯಾಕೆಂದರೆ, ರೀಲ್ ನಲ್ಲಿ ಮೂವರು ಇದ್ದು, ಒಬ್ಬಾತ ಮಗುವನ್ನು ಎತ್ತಿಕೊಂಡಿದ್ದಾನೆ. ಈತ ಡಾಕ್ಟರ್ ಕೋರ್ಟ್ ಧರಿಸಿ, ಸೆತಸ್ಕೋಪ್ ಅನ್ನು ಕುತ್ತಿಗೆಗೆ ಹಾಕಿಕೊಂಡಿದ್ದಾನೆ. ಪಕ್ಕದಲ್ಲಿ ಹುಡುಗಿಯೊಬ್ಬಳು ಇದ್ದಾಳೆ. ಈ ಹುಡುಗಿಯನ್ನ ಮದುವೆಯಾಗುವ ಹುಡುಗನಿಗೆ ತಮ್ಮ ಹಿಂದೆ ಇರುವ ಮನೆ ಹಾಗೂ ಕ್ಲೀನಿಕ್ ಅನ್ನು ನೀಡಲಾಗುತ್ತೆ ಎಂದು ಹೇಳಿದ್ದಾನೆ. ನಂತರ ಮಾತನಾಡಿರುವ ಹುಡುಗಿ, ಯಾರಿಗೆಲ್ಲಾ ಇಷ್ಟವೋ ಅವರೆಲ್ಲಾ ಆದಷ್ಟು ಬೇಗ ಕಮೆಂಟ್ ಮಾಡಿ ಎಂದು ನಾಚಿಕೊಂಡು ಹೇಳಿದ್ದಾಳೆ.    

ಈ ವೀಡಿಯೋವನ್ನು ನೋಡಿದರೆ, ಎಂಥಾ ಕಾಲ ಬಂತಪ್ಪ ಎಂದು ತಲೆ ಚಚ್ಚಿಕೊಳ್ಳದಂತಿರುವುದಿಲ್ಲ. ಈ ವೀಡಿಯೋವನ್ನು memes.bks ಕಾಮಿಡಿಯಾಗಿ ಎಡಿಟ್ ಮಾಡಿ ಅಪ್ ಲೋಡ್ ಮಾಡಿದೆ. ಕಮೆಂಟ್ ಬಾಕ್ಸ್ ನಲ್ಲಿ ಕೆಲವರು ತಮ್ಮ ಮೊಬೈಲ್ ನಂಬರ್ ಅನ್ನು ಕೂಡ ಹಾಕಿದ್ದಾರೆ. ಆದರೆ, ಈ ರೀಲ್ ಹಿಂದಿನ ಸತ್ಯ ಮಾತ್ರ ಯಾರಿಗೂ ಗೊತ್ತಿಲ್ಲ. ರೀಲ್ಸ್ ನಲ್ಲೂ ವಧು-ವರ ಅನ್ವೇಷಣೆ ನಡೆಯೋದು ಮಾತ್ರ ಆಶ್ಚರ್ಯವೇ ಸರಿ. ಈ ರೀಲ್ ಅನ್ನು ನೋಡಿ ಯಾರ್ಯಾರು ಇನ್ಯಾವ್ಯಾವ ಐಡಿಯಾಗಳನ್ನು ಉಪಯೋಗಿಸಿ, ಏನೆಲ್ಲಾ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಾರೋ, ಆ ದೇವರೇ ಬಲ್ಲ.