ಸಾಯಂಕಾಲ ಮಾಯವಾಗುವ ವಿಸ್ಮಯಕಾರಿ ಶಿವಲಿಂಗ! ಈ ಶಿವನ ದೇವಸ್ಥಾನ ಎಲ್ಲಿದೆ ಗೊತ್ತಾ? ವಿಡಿಯೋ ನೋಡಿ

ಸಾಯಂಕಾಲ ಮಾಯವಾಗುವ ವಿಸ್ಮಯಕಾರಿ ಶಿವಲಿಂಗ! ಈ ಶಿವನ ದೇವಸ್ಥಾನ ಎಲ್ಲಿದೆ ಗೊತ್ತಾ? ವಿಡಿಯೋ ನೋಡಿ

ವೀಕ್ಷಕರ ದಿನಕ್ಕೆ ಕೇವಲ ಒಂದು ಸಾರಿ ಮಾತ್ರ ದರ್ಶನ ಕೊಡುವ ಅಪರೂಪದ ಶಕ್ತಿಶಾಲಿ ಶಿವಲಿಂಗ, ಶಿವಲಿಂಗದ ಎಲ್ಲಾ ಪವಾಡ ನಿಮ್ಮ ಕಣ್ಣ ಮುಂದೆ ನಡೆಯುತ್ತದೆ. ಪ್ರತಿದಿನ ಬೆಳಗ್ಗೆ 5:00 ಗಂಟೆಗೆ ಈ ದೇವಸ್ಥಾನ ಕಾಣಿಸುತ್ತದೆ. ಸಂಜೆ 5:00ಗೆ ಈ ದೇವಸ್ಥಾನ ನಿಮ್ಮ ಕಣ್ಣ ಮುಂದೆ ಮಾಯವಾಗುತ್ತದೆ.ಪ್ರತಿದಿನ ಇದೇ ದೇವಸ್ಥಾನದಲ್ಲಿ ಶಿವಲಿಂಗದ ದರ್ಶನ ಪಡೆಯಲು ಸುಮಾರು 20ರಿಂದ 25 ಸಾವಿರ ಜನ ಬರುತ್ತಾರೆ. ಇನ್ನು ಈ ಪವಾಡ ನೋಡಲು ಜನರು ವಿದೇಶದಿಂದ ಸಹ ಬರುತ್ತಾರೆ. ಇಡೀ ಪ್ರಪಂಚದಲ್ಲಿ ನೀವು ಇಂತಹ ದೇವಸ್ಥಾನ ನೋಡಲು ಎಲ್ಲಿಯೂ ಸಾಧ್ಯವಿಲ್ಲ.

ಗುಜರಾತ್ ರಾಜ್ಯದ ವಡೋದರದಿಂದ 80 ಕಿಲೋಮೀಟರ್ ಪ್ರಯಾಣ ಮಾಡಿದರೆ, ಬುರುಚ್ ಜಿಲ್ಲೆ ಸಿಗುತ್ತದೆ. ಬರುಚ್ ಜಿಲ್ಲೆಯಿಂದ 2 ಕಿಲೋಮೀಟರ್ ಪ್ರಯಾಣ ಮಾಡಿದರೆ, ಜಂಬೂಜರ್ ಹೆಸರಿನ ಸಮುದ್ರ ಬರುತ್ತದೆ. ಇನ್ನು ಇದೆ ಸಮುದ್ರದ ಅಡಿಯಲ್ಲಿ ಶ್ರೀ ಸ್ತಂಭೇಶ್ವರನ ದೇವಸ್ಥಾನ ಇದೆ.ಅತ್ಯಂತ ನಿಗೂಢ ಹಾಗೂ ವಿಸ್ಮಯದಿಂದ ಕೂಡಿರುವ ದೇವಸ್ಥಾನ ಇದು. ಪ್ರತಿದಿನ ಸಂತೆ 5 ರಿಂದ 7 ಗಂಟೆಗೆ ಈ ದೇವಸ್ಥಾನ ಸಮುದ್ರದಲ್ಲಿ ಮುಳುಗುತ್ತದೆ. ಮತ್ತೆ ಬೆಳ್ಳಗಿನಜಾವ 5 ಗಂಟೆಗೆ ಈ ದೇವಸ್ಥಾನ ನೀರಿನಿಂದ ಹೊರಗೆ ಬಂದು ಎಲ್ಲರಿಗೂ ಕಾಣಿಸುತ್ತದೆ. ಈ ರೀತಿಯ ಅದ್ಭುತ ವಿಸ್ಮಯ ನೀವು ಎಲ್ಲೂ ನೋಡಲು ಸಾಧ್ಯವಿಲ್ಲ.   

ಈ ದೇವಸ್ಥಾನಕ್ಕೆ ಬಂದು ಈ ಲಿಂಗ ರೂಪಿ ದೇವರ ದರ್ಶನ ಪಡೆಯಲು ಸುಮಾರು ಲಕ್ಷಗಳಲ್ಲಿ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಇನ್ನು ಸಮುದ್ರದ ನೀರು ಹೆಚ್ಚಾಗುತ್ತಿದ್ದಂತೆ ದೇವಸ್ಥಾನದಲ್ಲಿ ಅಲಾರಾಂ ಶಬ್ದ ಕೇಳಿ ಬರುತ್ತದೆ. ತಕ್ಷಣ ದೇವಸ್ಥಾನದಲ್ಲಿರುವ ಎಲ್ಲಾ ಭಕ್ತರು ದೇವಸ್ಥಾನದಿಂದ ಹೊರಗೆ ಬರಬೇಕಾಗುತ್ತದೆ.  ( video credit : goli inside hit 

ಮತ್ತೊಂದು ವಿಶೇಷ ಏನು ಎಂದರೆ ಜನವರಿ ತಿಂಗಳಿಂದ ಏಪ್ರಿಲ್ ತಿಂಗಳಿನವರೆಗೆ ಸಮುದ್ರದ ನೀರು ಮಧ್ಯಾಹ್ನ 3 ಗಂಟೆಗೆ ಹೆಚ್ಚಾಗಲು ಶುರುವಾಗುತ್ತದೆ. ಹಾಗೂ ದೇವಸ್ಥಾನ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗುತ್ತದೆ. ಇನ್ನು ಮೇ ತಿಂಗಳಿನಿಂದ ಡಿಸೆಂಬರ್ ತಿಂಗಳಿನವರೆಗೆ ದೇವಸ್ಥಾನ ಸಂಜೆ 5:00 ಗಂಟೆಗೆ ನೀರಿನಲ್ಲಿ ಮುಳುಗಡೆ ಶುರುವಾಗುತ್ತದೆ.

ಇನ್ನು ಈ ದೇವಸ್ಥಾನದ ಬಗ್ಗೆ ಮಹಾಶಿವಪುರಾಣ, ರುದ್ರ ಸಹಿತ ಭಾಗ ಎರಡು 45ನೇ ಅಧ್ಯಾಯದಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಈ ದೇವಸ್ಥಾನವನ್ನು ಶಿವನ ಪುತ್ರ ಸ್ಕಂದ ಕಾರ್ತಿಕೇಯ ಅವರು ನಿರ್ಮಾಣ ಮಾಡಿದ್ದಾರೆ ಎನ್ನಲಾಗುತ್ತದೆ. ತಾರಕಾಸುರನ ಸಂ*ಹಾರ ಮಾಡಿದ ನಂತರ ಕಾರ್ತಿಕೇಯನಿಗೆ ತಾನು ಪಾಪ ಮಾಡಿದೆ ಎನ್ನುವ ಅರಿವು ಆಗುತ್ತದೆ.

ಈ ವೇಳೆ ವಿಷ್ಣು ದೇವರ ಮೋರೆ ಹೋದ ಕಾರ್ತಿಕೇಯನು, ಅವರ ಸೂಚನೆಯಂತೆ ಮೂರು ಲಿಂಗ ಗಳನ್ನು ಸ್ಥಾಪಿಸುತ್ತಾರೆ. ಇನ್ನು ಆ ಮೂರು ಲಿಂಗಗಳ ಪೈಕಿ ಒಂದು ಸ್ತಂಭೇಶ್ವರ ಲಿಂಗ. ಪ್ರತಿ ದಿನ ಆ ಲಿಂಗವನ್ನು ನೀರಿನಲ್ಲಿ ಅಭಿಷೇಕ ಮಾಡಿ ನಿನ್ನ ಪಾಪವನ್ನು ಕಳೆದುಕೋ ಎಂದು ವಿಷ್ಣು ದೇವರು ಕಾರ್ತಿಕೇಯನಿಗೆ ಸಲಹೆ ನೀಡಿದ್ದರು. ಇನ್ನು ಈ ಕಾರಣದಿಂದ ಲಿಂಗವನ್ನು ಸ್ಥಾಪಿಸಿದ ನಂತರ ಕಾರ್ತಿಕೇಯ ದೇವರು ನೀರಿನ ರೂಪ ತಾಳಿ, ನಂತರ ದಿನಾಲೂ ಪರಶಿವನಿಗೆ ಅಭಿಷೇಕ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.