ಸೆಕ್ಯೂರಿಟಿ ಗಾರ್ಡ್ ಆಗಿದ್ದ ಚಂದ್ರಪ್ರಭ ಇಂದು ಎಲ್ಲರ ಮೆಚ್ಚಿನ ಕಾಮಿಡಿಯನ್ ಆಗಿದ್ದು ಹೇಗೆ ಗೊತ್ತಾ ; ವಿಡಿಯೋ ನೋಡಿ

ಸೆಕ್ಯೂರಿಟಿ ಗಾರ್ಡ್ ಆಗಿದ್ದ ಚಂದ್ರಪ್ರಭ ಇಂದು ಎಲ್ಲರ ಮೆಚ್ಚಿನ ಕಾಮಿಡಿಯನ್ ಆಗಿದ್ದು ಹೇಗೆ ಗೊತ್ತಾ ; ವಿಡಿಯೋ ನೋಡಿ

ಕಲೆ ಎನ್ನುವುದು ಎಲ್ಲರಲ್ಲೂ ಇರುತ್ತದೆ. ಒಬ್ಬೊಬ್ಬರಲ್ಲಿ ಒಂದೊಂದು ಕಲೆ ಇರುತ್ತದೆ.ಆದರೆ, ಅದನ್ನು ಗುರುತಿಸಿ, ಪೋಷಿಸಿದರೆ ಮಾತ್ರವೇ ಕಲೆ ಒಲಿಯುತ್ತದೆ. ನಟನೆ ಕೂಡ ಅಷ್ಟೇ. ಸುಲಭವಾಗಿ ಯಾರೂ ನಟರಾಗಲು ಸಾಧ್ಯವಿಲ್ಲ. ಅದರಲ್ಲೂ ಹಾಸ್ಯ ನಟ ಆಗಬೇಕು ಎಂದರೆ ಬಹಳ ಕಷ್ಟ. ಒಬ್ಬರನ್ನು ಅಳಿಸುವುದು ಸುಲಭವಂತೆ ಅದೇ ನಗಿಸುವುದು ಬಹಳ ಕಷ್ಟ ಎಂಬ ಮಾತೇ ಇದೆ. ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಸಾಕಷ್ಟು ಜನ ಕಾಮಿಡಿ ನಟ-ನಟಿಯರಿದ್ದಾರೆ. ಆದರೆ, ಅವರೆಲ್ಲಾ ಹಾಸ್ಯ ನಟರಾಗಲು ಹಿಡಿದ ಹಾದಿ ಸುಲಭವಾಗಿ ಅಂತೂ ಇರಲಿಲ್ಲ. ನಾವು ಈಗ ಹೇಳುವುದಕ್ಕೆ ಹೊರಟಿರುವುದು ಅಂತಹದ್ದೇ ಮುಳ್ಳಿನ ಹಾದಿಯಲ್ಲಿ ಬಂದು ಇಂದು ಎಲ್ಲರನ್ನೂ ನಗಿಸುತ್ತಿರುವ ಹಾಸ್ಯ ನಟನ ಕಥೆ. 

ಹೆಸರು ಚಂದ್ರಪ್ರಭ. ಈ ಹೆಸರನ್ನು ಪ್ರತೀ ವೀಕೆಂಡ್ ಕೇಳುತ್ತೀರಿ. ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಚಂದ್ರಪ್ರಭ ಎಲ್ಲರ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಾರೆ. ಆದರೆ, ಅಂದು ಅವರ ಹೊಟ್ಟೆ ತುಂಬಿಸಿಕೊಳ್ಳಲು ಪಟ್ಟ ಕಷ್ಟ ಸಣ್ಣದಂತೂ ಅಲ್ಲ. ಓದು ತಲೆಗೆ ಹತ್ತದೆ ಫೇಲ್ ಆದ ಚಂದ್ರಪ್ರಭ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಕೊನೆಗೆ ರೆಸಾರ್ಟ್ ಒಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಉದ್ಯೋಗ ಮಾಡಲು ಶುರು ಮಾಡಿದರು. ಕುಟುಂಬ ನಿರ್ವಹಣೆಯನ್ನು ಮಾಡುವ ಸಲುವಾಗಿ ಸೆಕ್ಯೂರಿಟಿ ಗಾರ್ಡ್ ಅದ ಚಂದ್ರಪ್ರಭ ಹಾಸ್ಯ ನಟನಾಗಿ ಬಂದ ಹಾದಿ ಬಹಳ ದೊಡ್ಡದು.     

ಶ್ರೀರಂಗಪಟ್ಟಣದ ಚಂದ್ರಪ್ರಭ ಅದೊಂದು ದಿನ ಸ್ನೇಹಿನ ಜೊತೆಗೆ ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಕುಳಿತಿದ್ದರು. ಪಕ್ಕದಲ್ಲಿದ್ದ ರಂಗಾಯಣದಲ್ಲಿ ಮಕ್ಕಳ ಶಬ್ಧ ಕೇಳಿ ಕುತೂಹಲಕ್ಕೆ ಎಂದು ಬಂದು ನೋಡಿದರು. ಅಲ್ಲಿಂದ ಒಂದು ವರ್ಷಗಳ ಕಾಲ ಚಂದ್ರಪ್ರಭ ಮನೆ, ಕೆಲಸವನ್ನು ಮರೆತು ನಿತ್ಯ ಸಂಜೆ 4 ರಿಂದ 9ರ ವರೆಗೆ ರಂಗಾಯಣದಲ್ಲಿ ಅಭ್ಯಾಸ ಮಾಡಿದರು. ಬಳಿಕ ಇವರು ಸಗಯ್ ರಾಯ್ ಎಂಬುವರ ಸಹಾಯದಿಂದ ಸೆಟ್ ನಲ್ಲಿ ಬೆಳಕು ವಿನ್ಯಾಸಕನಾಗಿ ಕೆಲಸ ಮಾಡಿಕೊಂಡು ಆರು ವರ್ಷಗಳ ಕಾಲ ತಳ್ಳಿದರು. 

ಅಲ್ಲಿಂದ ಚಂದ್ರಪ್ರಭ ಅವರು ಜಿಬಿ ಸರಗೂರು ಸಿದ್ದೇಗೌಡರ ಸಹಾಯದಿಂದ ಆರು ವರ್ಷ ಅವರ ಜೊತೆಗೆ ಕೆಲಸ ಮಾಡಿದರು. ಬಳಿಕ ಸೃಜನ್ ಲೋಕೇಶ್ ಅವರ ಸಹಾಯದಿಂದ ಕಿರುತೆರೆಗೂ ಎಂಟ್ರಿಕೊಟ್ಟು. ಕಾಮಿಡಿ ಶೋಗಾಗಿ ಆಡಿಷನ್ ಕೊಟ್ಟು ಇದೆಲ್ಲಾ ಸಾಧ್ಯವಿಲ್ಲ. ಬಿಟ್ಟು ಬಿಡೋಣ ಎಂದುಕೊಂಡರಿಗೆ ವಅಹಿನಿಯಿಂದ ಕರೆ ಬಂಉ. ಎರಡು ದಿನದ ಶೂಟಿಂಗ್ ಗೆ ಆಯ್ಕೆ ಆಗಿದ್ದೀರಿ ಅಂದಾಗ ಚಂದ್ರಪ್ರಭ ಬಂದು ನಟಿಸಿದರು. ತಮ್ಮ ಪ್ರತಿಭೆಯಿಂದಲೇ ಇಂದು ಎಲ್ಲರ ಮೆಚ್ಚಿನ ಹಾಸ್ಯ ನಟನಾಗಿ ಹೊರಹೊಮ್ಮಿದ್ದಾರೆ.    

ಮಜಾ ಭಾರತ,  ಕಾಮಿಡಿ ಟಾಕೀಸ್, ಮಜಾ ಟಾಕೀಸ್, ಮಜಾ ವೀಕೆಂಡ್, ಗಿಚ್ಚಿ ಗಿಲಿ ಗಿಲಿ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದು, ಉಪೇಂದ್ರ ಅವರ ಐ ಲವ್‌ ಯೂ ಸಿನಿಮಾ ಜೊತೆಗೆ ಇತರೆ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಅಂದು ಊಟಕ್ಕೂ ಪರದಾಡುತ್ತಿದ್ದ ವ್ಯಕ್ತಿ, ಇಂದು ಜನರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಿದ್ದಾರೆ.  ( video credit : third eye )