ಮೊಬೈಲ್ ಅನ್ನು ನೀರಿಗೆ ಹಾಕ್ತಿಯ ಅಂತ ಬಿಸಿ ಬಿಸಿ ಕಜ್ಜಾಯ ಕೊಟ್ಟ ತಾಯಿ ; ಶಾಕ್ ಅದ ಮಗಳು ;ವಿಡಿಯೋ ವೈರಲ್

ಮೊಬೈಲ್ ಅನ್ನು ನೀರಿಗೆ ಹಾಕ್ತಿಯ ಅಂತ ಬಿಸಿ ಬಿಸಿ ಕಜ್ಜಾಯ ಕೊಟ್ಟ ತಾಯಿ ; ಶಾಕ್ ಅದ ಮಗಳು  ;ವಿಡಿಯೋ ವೈರಲ್

 ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ತಮಾಷೆಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಜನರ ಬೇಡಿಕೆಯ ಮೇರೆಗೆ ಹೆಚ್ಚಿನ ಸಂಖ್ಯೆಯ ಅಂತಹ ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಅವುಗಳಲ್ಲಿ ಕೆಲವು ವೀಡಿಯೊಗಳನ್ನು ವೀಕ್ಷಿಸಿದ ಬಳಿಕ ಎಂತಹವರಿಗೂ ಸಹ ನಗದೇ ಇರಲು ಸಾಧ್ಯವೇ ಇಲ್ಲ. ಇದೀಗ ಅಂತಹುದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ

 ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ತಮಾಷೆಯ ವಿಡಿಯೋ ಸಖತ್ ವೈರಲ್ ಆಗುತ್ತಿದೆ.  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದರೆ ನಗುವುದನ್ನು ತಡೆಯುವುದು ಸಾಧ್ಯವಾಗುವುದಿಲ್ಲ. ಈ  ವಿಡಿಯೋ ರಾಕೆಟ್ ವೇಗದಲ್ಲಿ ವೈರಲ್ ಕೂಡಾ ಆಗುತ್ತಿದೆ. ಇಲ್ಲಿ ವಿಡಿಯೋ  ಮಾಡುವ ಹುಡುಗಿಯ ಮೇಲೆ ತಾಯಿ ಕೆಂಡಾಮಂಡಲವಾಗಿದ್ದಾರೆ  

ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಕಾರಂಜಿ ಬಳಿ ಕುಳಿತಿರುವ ಹುಡುಗಿಯೊಬ್ಬಳು ತನ್ನ ಹೊಸ ಫೋನ್ ಅನ್ನು ನೀರಿನೊಳಗೆ ಹಾಕುತ್ತಾಳೆ. ಮಾತ್ರವಲ್ಲ ಆ ಫೋನಿನ ಮೇಲೆ ನೀರು ಎರಚುತ್ತಿರುತ್ತಾಳೆ.  ಹುಡುಗಿಯ ಕೈಯ್ಯಲ್ಲಿರುವ  ಫೋನ್ ವಾಟರ್ ಪ್ರೂಫ್ ಆಗಿರುವುದರಿಂದ ಆ ಹುಡುಗಿ ನೀರಿನೊಳಗೆ ಮೊಬೈಲ್ ಮುಳುಗಿಸುತ್ತಿದ್ದಾರೆ. ಅಲ್ಲದೆ ತನ್ನ ಮೊಬೈಲ್ ಬಗ್ಗೆಯೇ ಹುಡುಗಿ ವಿಡಿಯೋ ಮಾಡುತ್ತಿರುತ್ತಾಳೆ. ಆದರೆ ಪಾಪ ತಾಯಿಗೆ ಇದ್ಯಾವುದೂ ಗೊತ್ತಿಲ್ಲ. ಮೊಬೈಲ್ ನೀರಿನೊಳಗೆ ಬಿದ್ದರೆ ಕೆಟ್ಟು ಹೋಗುತ್ತದೆ ಎಂದಷ್ಟೇ ತಿಳಿದಿರುವ ತಾಯಿ ಮಗಳ ವರ್ತನೆ ಕಂಡು ಉಗ್ರ ರೂಪ ತಾಳಿದ್ದಾಳೆ. ಎಲ್ಲರೆದುರೇ ಮಗಳಿಗೆ ಚೆನ್ನಾಗಿ ಬಾರಿಸಿದ್ದಾಳೆ. ಮಗಳು ತಾನು ವಿಡಿಯೋ  ಮಾಡುತ್ತಿರುವುದಾಗಿ ಹೇಳಿದರೂ ಕೇಳಿಸಿಕೊಳ್ಳುವ ವ್ಯವದಾನ ತಾಯಿಗೆ ಇರುವುದಿಲ್ಲ.