ಸಂಸಾರಕ್ಕಾಗಿ ತ್ಯಾಗ ಮಾಡಿ ಕಷ್ಟದಲ್ಲಿ ಬದುಕಿದ ದೇವೇಗೌಡ ಅವರ ಪುತ್ರಿ ಡಾ.ಮಂಜುನಾಥ್ ಪತ್ನಿ ಸಖತ್ ಸಿಂಪಲ್

ವೀಕೆಂಡ್ ವಿತ್ ರಮೇಶ್ ಸೀಸನ್ 5 ರಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಮುಖ್ಯಸ್ಥ ಡಾ. ಸಿ.ಎನ್.ಮಂಜುನಾಥ್ ಅವರು ಆಗಮಿಸಿದ್ದು. ಈಗಾಗಲೇ ಡಾ. ಸಿಎನ್ ಮಂಜುನಾಥ್ ಅವರು ದೇಶಾದ್ಯಂತ ಹೆಸರು ಮಾಡಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿ ಲಕ್ಷಾಂತರ ಮಂದಿ ಹೃದ್ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಈ ಬಗ್ಗೆ ಮೊನ್ನೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ನೋಡಿ ಎಲ್ಲರೂ ತಿಳಿದುಕೊಂಡಿದ್ದೀರಾ. ಆದರೆ, ಸಿಎನ್ ಮಂಜುನಾಥ್ ಅವರ ಪತ್ನಿ ಹಿರಿಯ ರಾಜಕಾರಣಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರ ಪುತ್ರಿ ಎಂಬುದು ಹಲವರಿಗೆ ತಿಳಿದಿರಲಿಲ್ಲ.
ಮಂಜುನಾಥ್ ಅವರು ದೇವೇಗೌಡ ಅವರ ಅಳಿಯರಾಗಿದ್ದು, ಅವರ ಪುತ್ರಿ ಅನಸೂಯ ಎಂಬುವರನ್ನು ವಿವಾಹವಾಗಿದ್ದಾರೆ. ಹಾಗಿದ್ದರೂ ಕೂಡ ಮಂಜುನಾಥ್ ಅವರು ಎಂದಿಗೂ ಮಾವನಿಂದ ಯಾವುದೇ ಸಹಾಯವನ್ನೂ ಪಡೆಯದೆ, ಸಿಂಪಲ್ ಆಗಿ ಮದುವೆಯಾದರು. ಅನಸೂಯ ಅವರು ಹೂಡ ಹೋಮ್ ಸೈನ್ಸ್ ಓದಿದ್ದರು. ಮದುವೆಯಾದಾಗ ಅವರಿಗೆ ಸರ್ಕಾರಿ ಕೆಲಸವೂ ಸಿಕ್ಕಿತ್ತು. ಆದರೆ, ತಮ್ಮ ಪತಿ ಹಾಗೂ ಸಂಸಾರಕ್ಕಾಗಿ ಕೆಲವನ್ನು ತ್ಯಜಿಸಿ ಸಂಸಾರವನ್ನು ನಡೆಸಿದರು. ಮಣಿಪಾಲ್ ನಲ್ಲಿ ಮಂಜುನಾಥ್ ಅವರು ಓದುವಾಗ ಅನಸೂಯ ಮತ್ತೆ ಅವರ ಪತಿ ಚಿಕ್ಕ ರೂಮಿನಲ್ಲಿ ವಾಸ ಮಾಡುತ್ತಿದ್ದರು ಆಗಲೂ ಕೂಡ ತಂದೆಯಿಂದ ಕೊಂಚವೂ ಸಹಾಯ ಪಡೆಯಲಿಲ್ಲ.
ದೇವೇಗೌಡ ಅವರೇ ಒಮ್ಮೆ ಸಹಾಯ ಮಾಡುವುದಾಗಿ ಕೇಳಿದಾಗ ಅನಸೂಯ ಅವರು ಒಂದೇ ಮಾತಿನಲ್ಲಿ ತಿರಸ್ಕಾರ ಮಾಡಿದರಂತೆ. ಇನ್ನು ಅನಸೂಯ ಹಾಗೂ ಮಂಜುನಾಥ್ ಅವರು ಬಹಳ ಕಷ್ಟಪಟ್ಟು ಜೀವನ ನಡೆಸಿದ್ದಾರೆ. ನನ್ನ ಹೆಂಡತಿಯ ಸಹಕಾರದಿಂದಲೇ ನಾನು ಇಂದು ಸಾಧನೆ ಮಾಡಿದ್ದೀನಿ ಎಂದು ಮಂಜುನಾಥ್ ಅವರು ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಇನ್ನು ಅನಸೂಯ ಹಾಗೂ ಮಂಜುನಾಥ್ ಅವರಿಗೆ ಇಬ್ಬರು ಮಕ್ಕಳಿದ್ದು, ಮಗ ಸಾತ್ವಿಕ್ ಕೂಡ ತಂದೆಯಂತೆ ಹೃದ್ರೋಗ ತಜ್ಞರಾಗಿದ್ದಾರೆ. ಇನ್ನು ಮಗಳು ಡೆಂಟಲ್ ವೈದ್ಯಯಾಗಿ ಕಾರ್ಯ ನಿರ್ವಹಿಸುತ್ತಾರೆ.(video credit ; third eye )