ನನ್ನ ಅಕ್ಕಳನ್ನು ಜಗತ್ತಿಗೆ ತೋರಿಸುವುದು ಇಷ್ಟವಿರಲಿಲ್ಲ ಎಂದು ಡಾಲಿ ಧನಂಜಯ್ ಹೇಳಿದ್ಯಾಕೆ..?

ವೀಕೆಂಡ್ ವಿತ್ ರಮೇಶ್ ನಲ್ಲಿ ನಿನ್ನೆ ಮೊನ್ನೆಯ ಸಂಚಿಕೆಯಲ್ಲಿ ಡಾಲಿ ಧನಂಜಯ್ ಅವರನ್ನು ಕೆಂಪು ಕುರ್ಚಿಯ ಮೇಲೆ ಕೂರಿಸಲಾಗಿತ್ತು. ಡಾಲಿ ಧನಂಜಯ್ ಅವರು ಬೆಳದು ಬಂದ ಕುಟುಂಬ, ಅವರ ಸ್ನೇಹಿತರು, ಜೊತೆಗಾರರನ್ನು ಕರೆಸಲಾಗಿತ್ತು. ಡಾಲಿ ಧನಂಜಯ್ ಅವರು ಹುಟ್ಟಿದ ಆಸ್ಪತ್ರೆ, ವೈದ್ಯರು, ಓದಿದ ಶಾಲೆ, ಕಾಲೇಜು ಎಲ್ಲವನ್ನೂ ತೋರಿಸಲಾಯ್ತು. ಡಾಲಿ ಧನಂಜಯ್ ಅವರು ಗೋಲಿ ಆಡುತ್ತಿದ್ದದ್ದು, ಅವರಿಗೂ ಮನೆಯವರ ಮೇಳಿರುವ ಎಮೋಷನಲ್ ವಿಚಾರಗಳನ್ನು ಕೂಡ ತೋರಿಸಲಾಯ್ತು.
ಇಂಜಿನಿಯರಿಂಗ್ ಓದಿದ ಡಾಲಿ ಧನಂಜಯ್ ಅವರು ಇನ್ ಫೋಸಿಸ್ ನಲ್ಲಿ ಕೆಲಸ ಗಿಟ್ಟಿಸಿಕೊಂಡು, ಒಂದೇ ವರ್ಷಕ್ಕೆ ಕೆಲಸ ಬಿಟ್ಟು ಬಂದರು. ಇದೆಲ್ಲಾ ಸೆಟ್ ಆಗೊಲ್ಲ ಎಂದು ನಟನೆಯನ್ನು ಆರಿಸಿಕೊಂಡರು. ಆದರೆ, ಡಾಲಿ ಧನಂಜಯ್ ಅವರಿಗೆ ನಟನೆಯ ಹಾದಿ ಅಷ್ಟು ಸುಲಭವಾಗಿ ಇರಲಿಲ್ಲ. ಕಷ್ಟಪಟ್ಟು ಈ ಸ್ಥಾನಕ್ಕೆ ಬಂದಿದ್ದಾರೆ. ತುಂಬು ಕುಟುಂಬದಲ್ಲಿ ಬೆಳೆದ ಡಾಲಿ ಧನಂಜಯ್ ಅವರಿಗೆ ಇಬ್ಬರು ಅಕ್ಕಂದಿರು, ಒಬ್ಬ ಅಣ್ಣ. ಎಲ್ಲರೂ ಸುಳವಾಗಿದ್ದು, ಅವರ ಅಕ್ಕಂದಿರಲ್ಲಿ ಒಬ್ಬರನ್ನು ನನ್ನ ಮಗಳು ಎಂದು ಕರೆದಿದ್ದಾರೆ.
"ಇವಳು ನಮ್ಮ ಮನೆ ಮಗು.. ಚಿಕ್ಕವಯಸ್ಸಿನಲ್ಲಿ ಕಣ್ಣಿನ ನರ್ವ್ ಹೊರಟು ಹೊಯ್ತು. ಇವಾಗ್ಲೂ ನಮಗೆಲ್ಲರಿಗೂ ಮಗುನೇ. ಅವಳು ಮಗು ಥರಾನೇ ಮಾತಾಡೋದು. ನಮ್ಮ ತಾತನ ಜೊತೆ ತುಂಬ ಅಟ್ಯಾಚ್ ಆಗಿದ್ಲು. ಅಜ್ಜಿಗೂ ಹತ್ತಿರ.. ಅವ್ರೇನು ಮಾತಾಡ್ತಾರೋ ಅದನ್ನೇ ಮಾತಾಡ್ತಾಳೆ. ಆಗಾಗ ಅಮ್ಮನಿಗೂ ಆವಾಜ್ ಹಾಕ್ತಿರ್ತಾಳೆ.. ಅವ್ಳು ದೇವರು ನಮಗೆ ಕೊಟ್ಟಿರೋ ಗಿಫ್ಟು. ಈವಾಗ್ಲೂ ನಮ್ಮ ಅಪ್ಪ, ನಮ್ಮ ಅಜ್ಜಿ, ನೀವೆಲ್ಲ ಚೆನ್ನಾಗಿದ್ದೀರಿ ಅಂದ್ರೆ ಅದು ಅವಳ ಯೋಗ ಎಂದು ಹೇಳುತ್ತಿರುತ್ತಾರೆ. ಅದು ನಿಜ, ಅವಳಿಂದಲೇ ನಾವೆಲ್ಲ ಚೆನ್ನಾಗಾಗಿದ್ದದ್ದು" ಎಂದರು.
ಹೌದು ಡಾಲಿ ಧನಂಜಯ್ ಅವರ ಅಕ್ಕನ ಹೆಸರು ರಾಣಿ. ಇವರು ಊರಿಗೆ ರಾಣಿ. ನನ್ನ ಮಗಳು. ಇವಳನ್ನ ಈ ಜಗತ್ತಿಗೆ ತೋರಿಸುವುದು ನನಗೆ ಇಷ್ಟವಿರಲಿಲ್ಲ ಎಂದು ಹೇಳುತ್ತಾರೆ. ಯಾಕೆಂದರೆ, ಡಾಲಿ ಧನಂಜಯ್ ಅವರ ಅಕ್ಕ ರಾಣಿಗೆ ಪೊಲಿಯೋದಿಂದ ಕಣ್ಣಿನ ನರಕ್ಕೆ ಸಮಸ್ಯೆ ಅಗಿದೆ. ಹೀಗಾಗಿ ಚಿಕ್ಕ ವಯಸ್ಸಿನಿಂದಲೂ ರಾಣಿ ಅವರಿಗೆ ಕಣ್ಣು ಕಾಣಿಸುವುದಿಲ್ಲವಂತೆ. ಮಗುವಂತೆ ನಡೆದುಕೊಳ್ಳುವ ರಾಣಿ ಎಂದರೆ, ಎಲ್ಲರಿಗೂ ಪ್ರೀತಿ ಅಂತೆ. ಇನ್ನೊಬ್ಬರು ಮಾತನಾಡುವುದನ್ನು ರಿಪೀಟ್ ಮಾಡುವ ರಾಣಿ ನೋಡುವುದಕ್ಕಷ್ಟೇ ದೊಡ್ಡವರು ಆದರೆ, ಮಗುವಿನಂತೆ ನಡೆದುಕೊಳ್ಳುತ್ತಾರೆ.