ಕಿಡ್ನಿ ಮಾರಾಟ ಮಾಡಿ ಜೀವಿಸುವ ಪರಿಸ್ಥಿತಿ ಬೆಂಗಳೂರಿಗರಿಗೆ ಬಂದಿದ್ಯಾ..?

ಕಿಡ್ನಿ ಮಾರಾಟ ಮಾಡಿ ಜೀವಿಸುವ ಪರಿಸ್ಥಿತಿ   ಬೆಂಗಳೂರಿಗರಿಗೆ ಬಂದಿದ್ಯಾ..?

ಬೆಂಗಳುರಿನಲ್ಲಿ ಸ್ವಂತ ಮನೆಯಲ್ಲಿ ವಾಸಿಸುವವರ ಸಂಖ್ಯೆಗಿಂತಲೂ ಬಾಡಿಗೆ ಮನೆಗಳಲ್ಲಿ ನೆಲೆಸಿರುವವರ ಸಂಖ್ಯೆಯೇ ಹೆಚ್ಚು. ಪ್ರತಿ ನಿತ್ಯ ಕೆಲಸವನ್ನು ಹರಸಿ ಬೆಂಗಳೂರಿಗೆ ಸಾವಿರಾರು ಜನ ಯುವಕ-ಯುವತಿಯರು ಬರುತ್ತಲೇ ಇರುತ್ತಾರೆ. ಬೆಂಗಳುರಿನಲ್ಲಿ ಪಿಜಿಗಳು, ಬಾಡಿಗೆ ಮನೆಗಳೆಲ್ಲವೂ ತುಂಬಿ ಹೋಗಿವೆ. ಹೀಗಿರುವಾಗ ಬಾಡಿಗೆ ಮನೆಗಳು ಸಿಗುವುದು ಕಷ್ಟ. ಅದರಲ್ಲೂ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಬೆಲೆಯೂ ಗಗನಕ್ಕೇರಿದೆ. ಐದಾರು ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಮನೆಗಳು ಸಿಗುವುದೇ ಇಲ್ಲ. 

ಬೆಂಗಳೂರಿನಲ್ಲಿ ಬಾಡಿಗೆ ಮನೆ ಬೇಕೆಂದರೆ ದಿನಗಟ್ಟಲೆ ಹುಡುಕಾಡಬೇಕು. ಹುಡುಕಿದರೂ ಸಿಗುವುದು ಬಹಳ ಕಷ್ಟ. ಇಲ್ಲೊಬ್ಬ ವ್ಯಕ್ತಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾನೆ. ಅದೂ ಕೂಡ ಬಾಡಿಗೆ ಮನೆಗೆ ಅಡ್ವಾನ್ಸ್ ಅನ್ನು ನೀಡುವ ಸಲುವಾಗಿ ಕಿಡ್ನಿಯನ್ನು ಮಾರಾಟಕ್ಕಿಟ್ಟಿದ್ದಾನೆ. ಹೌದು, ತಿಂಗಳು  ತಿಂಗಳು ಬಾಡಿಗೆ ಕಟ್ಟುವುದೇ ಕಷ್ಟ. ಬಡವರಂತೂ ಬಾಡಿಗೆ ಕಟ್ಟುವ ಸಮಯ ಬಂದರೆ, ನಿದ್ದೆ ಮಾಡದೇ ಒದ್ದಾಡುತ್ತಿರುತ್ತಾರೆ. ಇದೇ ಪರೀಸ್ಥಿತಿಗೆ ಇಲ್ಲೊಬ್ಬ ವ್ಯಕ್ತಿ ಸಿಲುಕಿದ್ದಾನೆ. ಹಾಗಾಗಿ ಆತ ಕಿಡ್ನಿ ಮಾರಾಟಕ್ಕಿದೆ, ಮನೆ ಬಾಡಿಗೆಗೆ ಅಡ್ವಾನ್ಸ್ ನೀಡಬೇಕಿದೆ ಎಂದು ಪೋಸ್ಟರ್ ಅನ್ನು ಮರಕ್ಕೆ ನೇತು ಹಾಕಿದ್ದಾನೆ. 

ಇದನ್ನು ನೋಡಿಸ ವ್ಯಕ್ತಿಯೊಬ್ಬ ಫೋಟೋ ತೆಗೆದು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಇನ್ನು ಈ ಪೋಸ್ಟರ್ ನಲ್ಲಿ ಆ ವ್ಯಕ್ತಿ ತಮಾಷೆಗಾಗಿ ಮಾಡಿದ್ದು, ನನಗೆ ಇಂದಿರಾನಗರದಲ್ಲಿ ಮನೆ ಬಾಡಿಗೆಗೆ ಬೇಕಿದೆ. ಪ್ರೊಫೈಲ್ ಗಾಗಿ ಸ್ಕ್ಯಾನ್ ಮಾಡಿ ಎಂದು ಬರೆದಿದ್ದಾರೆ. ಆದರೆ, ಮೊದಲು ಕಿಡ್ನಿ ಮಾರಾಟಕ್ಕಿದೆ ಎಂದು ಬರೆದಿರುವುದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಸಿಗುವುದು ಇಷ್ಟು ಕಷ್ಟವೇ ಎಂಬುದನ್ನು ಯೋಚಿಸುತ್ತಿದ್ದಾರೆ. ಒಂದು ರೀತಿಯಲ್ಲಿ ಬೆಂಗಳೂರು ನಗರ ಬಹಳ ಎತ್ತರಕ್ಕೆ ಬೆಳೆದಿದ್ದು, ಬಾಡಿಗೆ ಮನೆಗಳು ಸಿಗುವುದು ಕೂಡ ಕಷ್ಟವಿದೆ. ಅಲ್ಲದೇ, ಬಾಡಿಗೆ ಕೂಡ ಕಡಿಮೆ ಏನಿಲ್ಲ. ಒಟ್ನಲ್ಲಿ ವ್ಯಕ್ತಿಯೊಬ್ಬ ತಮಾಷೆ ಮಾಡುವ ರೀತಿಯಲ್ಲಿ ಬೆಂಗಳುರಿನ ಪರೀಸ್ಥಿತಿಯನ್ನು ಸೂಕ್ಷ್ಮವಾಗಿ ಹೇಳಿದ್ದಾರೆ.