ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಗೆ ಅವಮಾನ ಆಗುತ್ತಿದ್ದರೂ ಕೊಡ ಸುಮ್ಮನಿರುವುದು ಏಕೆ ಗೊತ್ತಾ?

ನಮ್ಮ ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳು ಪೈಕಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿರುವ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಇನ್ನೂ ಈ ಬಾರಿಯ ಬಿಗ್ ಬಾಸ್ ಸೀಸನ್ ಹತ್ತಕ್ಕೆ ಕಾಲಿಟ್ಟಿದ್ದು ಈ ಸೀಸನ್ ಹಿಂದಿನ ಒಂಬತ್ತು ಸೀಸನ್ ಗಳಿಗಿಂತ ಹೆಚ್ಚಿನ ವಿಭಿನ್ನತೆ ಒಳಗೊಂಡಿದೆ ಎಂದು ನಮಗೆ ಈಗಾಗಲೇ ತಿಳಿದಿದೆ. ಏಕೆಂದ್ರೆ ಹಿಂದಿಯ ಅವತರಣಿಕೆಯಲ್ಲಿ ಮೂಡಿ ಬರುತ್ತಿರುವ ಈ ಬಿಗ್ ಬಾಸ್ ಎಲ್ಲಾ ಭಾಷೆಯಲ್ಲಿ ಕೂಡ ಸಾಕಷ್ಟು ಸೀಸನ್ ಗಳನ್ನ ಯಶಸ್ವಿಯಾಗಿ ಮುಗಿದಿದೆ. ಇನ್ನೂ ಯಾವ ಭಾಷೆಯಲ್ಲಿ ಕೂಡ ನಮ್ಮ ಈ ಬಾರಿಯ ಸೀಸನ್ ಹತ್ತರಲ್ಲಿ ನಡೆದಿದೆ. ಅದುವೇ ಜನರ ವೋಟಿಂಗ್.
ವೋಟಿಂಗ್ ಮೂಲಕ ಅತಿ ಕಡಿಮೆ ವೋಟ್ ಪಡೆದು ಈ ಬಾರಿ "ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ಕಾರ್ತಿಕ್,ಬುಲೆಟ್ ಪ್ರಕಾಶ್,ಸಂಗೀತ ಹಾಗೂ ತನೀಷ" ಅವರು ಅನರ್ಹರು ಎಂದು ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ.
ಇನ್ನೂ ಮನೆ ಒಳಗೆ ಅನರ್ಹರು ಎಂದು ಮನೆಗೆ ಬಂದ "ಡ್ರೋನ್ ಪ್ರತಾಪ್" ಅವರನ್ನು ಮನೆಯ ಜನ ಈಗ ಅವರ ಹಿಂದಿನ ದಿನಗಳ ಬಗ್ಗೆ ಟೀಕೆ ಮಾಡಲು ಶುರುಮಾಡಿದ್ದಾರೆ. ಅದ್ರಲ್ಲೂ ಹೆಚ್ಚಾಗಿ ಕಾಮಿಡಿ ಕಿಲಾಡಿ ಖ್ಯಾತಿಯ ಸಂತೋಷ ಅವರು ಅವರ ವಯಕ್ತಿಕ ವಿಚಾರವನ್ನು ಮತ್ತೊಬ್ಬರನ್ನು ನಗಿಸಲು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಇನ್ನೂ ಪ್ರಥಮ್ ಅವರು ಕೊಡ ಲಾರ್ಡ್ ಪ್ರಥಮ್ ಆಗಿ ಮನೆ ಒಳಗೆ ಬಂದು ಎಲ್ಲರಿಗೂ ಉತ್ತೇಜನ ನೀಡುವ ಸಲುವಾಗಿ ತಾವು ಮಾಡುತ್ತಿರುವ ತಪ್ಪುಗಳನ್ನು ನೇರವಾಗಿ ತಿಳಿಸಿ ತಿದ್ದುಕೊಳ್ಳುವಂತೆ ಮಾಡಿದರು ಆದರೆ ಸಂತೋಷ್ ಅವರಿಗೆ ಕೂಡ ನೇರವಾಗಿ ಹೇಳಿದ್ದರು ಕೊಡ ಸಂತೋಷ್ ಅವರು ಯಾವ ರೀತಿಯ ತಪ್ಪನ್ನು ತಿದ್ದುಕೊಂಡಿಲ್ಲ.
ಮೊನ್ನೆ ಕೂಡ ಅವರು ಪ್ರತಾಪ್ ಅವರ ಹಿಂದಿನ ಇಂಟರ್ವ್ಯೂ ನಲ್ಲಿ ಹೇಳುವ ಮಾತನ್ನು ಕೊಡ ಹೇಳುತ್ತಾ ಇದ್ದದ್ದನ್ನು ಕೇಳಿಸಿಕೊಂಡ ಡ್ರೋನ್ ಪ್ರತಾಪ್ ಅವರು ರೆಸ್ಟ್ ರೂಂ ನಲ್ಲಿ ಕುಳಿತು ಕಣ್ಣೀರಿಟ್ಟಿದ್ದಾರೆ. ಆದರೆ ಅದಾದ ಕೊಂಚ ಸಮಯದ ಬಳಿಕ ಕ್ಯಾಪ್ಟನ್ ಆಯ್ಕೆಯ ಪ್ರಕ್ರಿಯೇಲ್ಲಿ ಡ್ರೋನ್ ಪ್ರತಾಪ್ ಅವರು ಸ್ನೇಹಿತ ಅವ್ರಿಗೆ ತಾವು ನೇರವಾಗಿ ತಮ್ಮನ್ನು ಅವಮಾನಿಸುವದನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ನೇರವಾಗಿ ತಿಳಿಸಿರುವುದು ಎಲ್ಲ ಪ್ರೇಕ್ಷಕರಿಗೂ ಕೂಡ ಕುಷಿ ಕೊಟ್ಟಿದೆ. ಇನ್ನೂ ನೆನ್ನೆ ಎಪಿಸೋಡ್ ನಲ್ಲಿ ಕೊಡ ಕಿಚ್ಚ ಅವರು ಸಂತೋಷ್ ಹಾಗೂ ಮನೆಯವರಿಗೆ ನೇರವಾಗಿ ಬುದ್ಧಿವಾದ ಹೇಳಿರುವ ಕಾರಣ ತಮ್ಮನ್ನು ತಿದ್ದುಕೊಳ್ಳುತ್ತಾರ ಎಂದು ನಾವು ಕಾದು ನೋಡಬೇಕಿದೆ.