ಸಫಾರಿಗರನ್ನು ಅಟ್ಟಿಸಿಕೊಂಡು ಬಂದ ಚಮಕ್ ಕೊಟ್ಟ ಆನೆಯ ವೀಡಿಯೋ ನೋಡಿ..

ವನ್ಯ ಜೀವಿಗಳು ತಮ್ಮ ಪಾಡಿಗೆ ತಾವು ಕಾಡಿನಲ್ಲಿ ಹಾಯಾಗಿ ಓಡಾಡಿಕೊಂಡು ಇರುತ್ತವೆ. ಆದರೆ ನಾವು ಮನುಷ್ಯರೇ ಆಗಾಗ ವನ್ಯ ಜೀವಿಗಳಿಗೆ ತೊಂದರೆಗಳನ್ನು ಕೊಡುತ್ತಿರುತ್ತೇವೆ. ಕಾಡನ್ನು ನಾಶ ಮಾಡಿ ನಾಡನ್ನು ಕಟ್ಟಿಕೊಳ್ಳುತ್ತೇವೆ. ಇದರಿಂದ ಪ್ರಾಣಿಗಳಿಗೆ ತಾವು ಔಆಸವಿರುವ ಜಾಗಗಳು ನಾಶವಾಗುತ್ತಿವೆ. ಹಾಗಾಗಿಯೇ ಆಗಾಗ ಕಾಡಿನ ಪ್ರಾಣಿಗಳು ಆಹಾರವನ್ನು ಅರಸಿ ನಾಡಿಗೆ ಬರುತ್ತವೆ. ಇನ್ನು ಆನೆಗಳು ಎಲ್ಲರ ನೆಚ್ಚಿನ ಪ್ರಾಣಿ ಎಂದರೆ ತಪ್ಪಾಗುವುದಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಆನೆಯನ್ನು ಇಷ್ಟಪಡುತ್ತಾರೆ. 

ಕೆಲ ದೇವಸ್ಥಾನಗಳಲ್ಲೂ ಆನೆಗಳನ್ನು ಸಾಕುತ್ತಾರೆ. ಮಕ್ಕಳು ಆನೆಗಳನ್ನು ಮುಟ್ಟಲು ಬಯಸುತ್ತಾರೆ, ಕೆಲವರು ಮಕ್ಕಳ ಕೈಯಿಂದ ಆನೆಗಳಿಗೆ ಬಾಳೆ ಹಣ್ಣು, ಬೆಲ್ಲವನ್ನು ಕೊಡಿಸುತ್ತಾರೆ. ಇದೆಲ್ಲಾ ಮಕ್ಕಳಿಗೆ ಖುಷಿಯಾಗುತ್ತದೆ. ಮೊದಲೆಲ್ಲಾ ಸರ್ಕಸ್ ಗಳಲ್ಲೂ ಆನೆಗಳನ್ನು ಸಾಕಲಾಗುತ್ತಿತ್ತು. ಆದರೆ ಈಗ ಇದೆಲ್ಲಾ ಬ್ಯಾನ್ ಆಗಿದೆ. ದೇವಸ್ಥಾನಗಳಲ್ಲಿ ಮಾತ್ರ ಆನೆ, ಕೋತಿಗಳು ಕಾಣಿಸಿಕೊಳ್ಳುತ್ತವೆ. ಅದು ಬಿಟ್ಟರೆ, ಸಫಾರಿಗೆ ಹೋದರೆ ವನ್ಯ ಜೀವಿಗಳನ್ನು ನೋಡಬಹುದು. ಈ ಸಫಾರಿಯಲ್ಲಿ ಎಲ್ಲಾ ಬಗೆಯ ಪ್ರಾಣಿಗಳನ್ನೂ ನೋಡಬಹುದು. ಆದರೆ ಲಕ್ ಇರಬೇಕು ಅಷ್ಟೇ.    

ಇನ್ನು ಕೆಲ ಪ್ರಾಣಿ ಪ್ರಿಯರು ಹಾಗೂ ಫೋಟೋಗ್ರಾಫಿಗಳು ಆಗಾಗ ಸಫಾರಿಗೆ ತೆರಳುತ್ತಿರುತ್ತಾರೆ. ಅಲ್ಲಿ ವನ್ಯಜೀವಿಗಳ ಫೋಟೋ ಮತ್ತು ವೀಡಿಯೋಗಳನ್ನು ಮಾಡುತ್ತಾರೆ. ಹೀಗೆ ಶ್ರೀಲಂಕಾದಲ್ಲಿ ವ್ಯಕ್ತಿಯೊಬ್ಬ ಸಫಾರಿಗೆಂದು ಜೀಪ್ ನಲ್ಲಿ ಹೋಗಿದ್ದಾರೆ. ಆನೆಯೊಂದು ಕಾಣಿಸಿಕೊಂಡಿದೆ. ಅದರ ಪಾಡಿಗೆ ಅದು ಹೋಗುತ್ತಿದೆ ಎಂದು ಈತನೂ ನಿಧಾನವಾಗಿ ಆನೆಯ ಹಿಂದೆಯೇ ಜೀಪ್ ಅನನು ಓಡಿಸಿದ್ದಾನೆ. ಆದರೆ ಆ ಆನೆಗೆ ಅದು ಏನು ಅನ್ನಿಸಿತೋ ಏನೋ. ಇದ್ದಕ್ಕಿದ್ದ ಹಾಗೆಯೇ ಹಿಂದೆ ತಿರುಗಿ ಜೀಪ್ ಅನ್ನು ಅಟ್ಟಿಸಿಕೊಂಡು ಬಂದಿದೆ. ಇದನ್ನು ಸಫಾರಿಗೆ ಹೋದವರು ವೀಡಿಯೋ ಮಾಡಿದ್ದಾರೆ. ಸದ್ಯ ಆನೆಯಿಂದ ಯಾರಿಗೂ ತೊಂದರೆ ಆಗಿಲ್ಲ.