ಸ್ವಂತ ಮಗಳನ್ನು ಬಸ್ ಡ್ರೈವರ್ ಕೆಲಸಕ್ಕೆ ನೇಮಿಸಿದ CBI ಅಧಿಕಾರಿ. ಕಾರಣ ಕೇಳಿದರೆ ಶಾಕ್ ಆಗ್ತಿರಾ ನೋಡಿ!!

ಈಗಿನ ಕಾಲದಲ್ಲಿ ತಂದೆ ತಾಯಿಗಳು ತಮ್ಮ ಮಕ್ಕಳ ಸೌಲಭ್ಯಕ್ಕೆ ಏನು ಬೇಕಾದರೂ ಕೊಡಿಸಲು ಸಿದ್ಧರಾಗಿರುತ್ತಾರೆ . ಮತ್ತು ಅವರು ಯಾವುದೇ ರೀತಿಯ ತೊಂದರೆ ಹೆಣ್ಣು ಮಕ್ಕಳ್ಗೆ ಆಗದಂತೆ ನೋಡಿ ಕೊಳ್ಳುತ್ತಾರೆ . ಆದರೆ ಇಲ್ಲೊಬ್ಬ ಯುವತಿ ತಮ್ಮ ತಂದೆ ತಾಯಿಗೆ ದುಡ್ಡಿನ ಹೊರೆ ಕೊಡ ಬಾರದು ಅಂತ ಎಂತಹ ನಿರ್ಧಾರ ತೆಗೆದು ಕೊಂಡಿದ್ದಾಳೆ ನೋಡಿ
ಕಾಲೇಜಿಗೆ ಹೋದ ನಂತರ ಕೆಲವು ಮಕ್ಕಳು ತಮ್ಮ ತಂದೆ ತಾಯಿ ದುಡಿದ ಹಣದಲ್ಲಿ ಮೋಜು-ಮಸ್ತಿ ಎಂದು ಸುತ್ತಾಡುತ್ತಾ ಎಲ್ಲಾ ಹಣವನ್ನು ಖರ್ಚು ಮಾಡುತ್ತಾ ಜವಾಬ್ದಾರಿ ಇಲ್ಲದೆ ಬೆಳೆಯುತ್ತಾರೆ. ಇವರಲ್ಲಿ ಅನೇಕರು ಶ್ರೀಮಂತ ಮಕ್ಕಳೇ ಆಗಿರುತ್ತಾರೆ. ಶ್ರೀಮಂತರ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ ಆದರೆ ಆ ಮಕ್ಕಳಲ್ಲಿ ಗುಣದ ಕೊರತೆ ಇರುತ್ತದೆ.
ಇನ್ನು ಬಡವರ ಮಕ್ಕಳು ಹಣಕಾಸಿಗಾಗಿ ಪರದಾಡುತ್ತಿರುತ್ತಾರೆ. ಅವರು ಒಂದು ರೂಪಾಯಿ ಸಿಕ್ಕರೆ ಅದನ್ನು ಉಳಿಸಿ ಮುಂದಿನ ದಿನಗಳಲ್ಲಿ ಅದರಿಂದ ಯಾವುದಾದರೂ ಉಪಯುಕ್ತ ಸಾಮಗ್ರಿಯನ್ನು ಖರೀದಿಸುವ ಯೋಚನೆಯಲ್ಲಿರುತ್ತಾರೆ. ಶ್ರೀಮಂತರ ಮಕ್ಕಳು ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ.
ಇನ್ನು ಇದೀಗ ಸರ್ಕಾರಿ ನೌಕರಿ ಸಿಬಿಐ ಆಫೀಸರ್ ನ ಮಗಳು ಯಾರು ಊಹಿಸದ ಕೆಲಸ ಮಾಡಿ ತೋರಿಸಿದ್ದಾಳೆ. ಹೌದು ನನ್ನ ತಂದೆ ಒಬ್ಬ ಸರ್ಕಾರಿ ನೌಕರಿ ಮಾಡುತ್ತಿದ್ದರು ಸಹ ಈ ಹುಡುಗಿ ತನ್ನ ತಂದೆಯ ಮೇಲೆ ಭಾರವಾಗದೆ ಅದೆಷ್ಟೋ ವಿದ್ಯಾರ್ಥಿಗಳಿಗೆ ಆದರ್ಶವಾಗುವ ಕೆಲಸ ಮಾಡಿ ತೋರಿಸಿದ್ದಾಳೆ ಎಂದರೆ ತಪ್ಪಾಗುವುದಿಲ್ಲ.
ಕೇರಳದ ತೆಕೆವಿಲ್ಲಾ ಮೂಲದ ಸಿಬಿಐ ಆಫೀಸರ್ ಆಗಿರುವ ಪ್ರದೀಪ್ ಹಾಗೂ ಸುಮಾ ದಂಪತಿಗಳ ಮುದ್ದಿನ ಮಗಳು ರೂಪ ಕೊಲ್ಲಂ. ರೂಪ ಅವರು ಮಾನವ ಸಂಪನ್ಮೂಲ ಕೇಂದ್ರದಲ್ಲಿ ತಮ್ಮ ಪಿಜಿ ಡಿಪ್ಲೋಮೋ ಮಾಡುತ್ತಿದ್ದು, ಇನ್ನು ರೂಪ ಅವರು ಬಸ್ ಚಾಲಾಕಿಯಾಗಿ ಪಾರ್ಟ್ ಟೈಮ್ ಉದ್ಯೋಗ ಮಾಡುತ್ತಿದ್ದಾರೆ.
ಹೌದು ರೂಪ ಅವರ ವಯಸ್ಸು 25 ವರ್ಷ, ಈಕೆಗೆ ಮನೆಯಲ್ಲಿ ಯಾವುದೇ ಹಣದ ಕೊರತೆ ಇಲ್ಲ. ಆದರೂ ಸಹ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳಬೇಕು, ತನ್ನ ತಂದೆ ತಾಯಿಯ ಮೇಲೆ ಅವಲಂಬಿತವಾಗಬಾರದು ಎನ್ನುವ ನಿರ್ಧಾರ ಮಾಡಿದ ರೂಪ ಬಸ್ ಚಾಲಾಕಿಯಾಗಿ ಪಾರ್ಟ್ ಟೈಮ್ ಉದ್ಯೋಗ ಮಾಡಿ ಹಣ ಸಂಪಾದಿಸುತ್ತಿದ್ದಾರೆ.
ಪಾರ್ಟ್ ಟೈಮ್ ಉದ್ಯೋಗ ಮಾಡಿ ಅದರಿಂದ ಬರುವ ಹಣದಿಂದ ತಮ್ಮ ವಿದ್ಯಾಭ್ಯಾಸಕ್ಕೆ ಬೇಕಾದ ಹಣ ಕೂಡಿಡುತ್ತಿದ್ದಾಳೆ. ಅಲ್ಲದೆ ಮಿಕ್ಕ ಹಣವನ್ನು ತಮ್ಮ ತಂದೆ ತಾಯಿಗೆ ಕೊಟ್ಟು ಅದನ್ನು ಉಳಿಸುವಂತೆ ರೂಪ ಅವರು ಹೇಳುತ್ತಾರೆ. ಇನ್ನು ತಮ್ಮ ಸ್ವಂತ ಹಣದಿಂದಲೇ ತಮ್ಮ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲವನ್ನು ರೂಪ ಅವರು ಕೊಂಡುಕೊಳ್ಳುತ್ತಾರಂತೆ.
ಈಗಿನ ಕಾಲದಲ್ಲೂ ತಮ್ಮ ತಂದೆ ತಾಯಿಯ ಮೇಲೆ ಅವಲಂಬಿತರಾಗದೆ ತಮ್ಮ ಸ್ವಂತ ಕಾಲ ಮೇಲೆ ನಿಂತು ಕೊಳ್ಳಬೇಕೆಂಬ ರೂಪ ಅವರ ಈ ವ್ಯಕ್ತಿತ್ವ ನಿಜಕ್ಕೂ ಮೆಚ್ಚಬೇಕಾದಂತದ್ದು. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…