ಮನೆ ಟೆರೇಸ್‌ನಲ್ಲಿ ಬಾಯ್‌ಫ್ರೆಂಡ್ ಜೊತೆ ಸಿಕ್ಕಿಬಿದ್ದ ಮಗಳಿಗೆ ಚಪ್ಪಲಿ ಪೂಜೆ ಮಾಡಿದ ಅಮ್ಮ ; ವಿಡಿಯೋ ವೈರಲ್

ಮನೆ ಟೆರೇಸ್‌ನಲ್ಲಿ ಬಾಯ್‌ಫ್ರೆಂಡ್ ಜೊತೆ ಸಿಕ್ಕಿಬಿದ್ದ ಮಗಳಿಗೆ ಚಪ್ಪಲಿ ಪೂಜೆ ಮಾಡಿದ ಅಮ್ಮ ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ತಮಾಷೆಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಜನರ ಬೇಡಿಕೆಯ ಮೇರೆಗೆ ಹೆಚ್ಚಿನ ಸಂಖ್ಯೆಯ ಅಂತಹ ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಅವುಗಳಲ್ಲಿ ಕೆಲವು ವೀಡಿಯೊಗಳನ್ನು ವೀಕ್ಷಿಸಿದ ಬಳಿಕ ಎಂತಹವರಿಗೂ ಸಹ ನಗದೇ ಇರಲು ಸಾಧ್ಯವೇ ಇಲ್ಲ. ಇದೀಗ ಅಂತಹುದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ

ಹೌದು ಗೆಳೆಯರೇ ಇತ್ತೀಚಿನ ಕಾಲದಲ್ಲಿ ಹುಡುಗಿಯರಿಗೆ ಹೇಳೋರು ಕೇಳೋರು ಯಾರು ಇಲ್ಲ ಅಂತ ತಮಗೆ ಇಷ್ಟ ಬಂದ ಹಾಗೆ ನಡೆದು ಕೊಳ್ಳುತ್ತಾರೆ . ಅದರಲ್ಲೂ ತಮ್ಮ ಹದಿ ಹರೆಯದ ವಯಸ್ಸಿನಲ್ಲಿ ಇವರಿಗೆ ಯಾರಾದರೂ ಒಬ್ಬರು  ಬಾಯ್‌ಫ್ರೆಂಡ್  ಇರಲೇ ಬೇಕು  . ಇಲ್ಲಿ ಒಬ್ಬ ಯುವತಿಗೆ ಅವರ ಅಮ್ಮ ಸರಿಯಾಗೇ ಚಪ್ಪಲಿ ಪೂಜೆ  ಮಾಡಿದ್ದಾಳೆ . ಇದಕ್ಕೆ ಕಾರಣ ಇಲ್ಲಿದೆ ನೋಡಿ    

ಪ್ರೇಮಿಗಳ ದಿನ ಎಲ್ಲೆಡೆ ಲವ್ ಬರ್ಡ್‌ಗಳು ಓಡಾಡುವುದನ್ನು ನೋಡಬಹುದು. ತಮ್ಮ ಪ್ರೀತಿಪಾತ್ರರನ್ನು ಈ ದಿನ ಭೇಟಿ ಮಾಡಬೇಕೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಹೀಗಿರುವಾಗ ಆಕೆಯೂ ಹಾಗೆ ಮಾಡಿದಳು. ಮನೆಯವರ ಒಪ್ಪಿಗೆಯಿಲ್ಲದೆ ಮನೆಯಿಂದ ಹೊರ ಹೋಗುವುದು ಅಸಾಧ್ಯವೆಂದು ತಿಳಿದು ಮನೆಯ ಟೆರೇಸ್‌ನಲ್ಲಿ ಲವರ್‌ನ್ನು ಭೇಟಿಯಾದಳು. ಆದರೆ ಅಷ್ಟರಲ್ಲೇ ತನ್ನ ತಾಯಿ ಕೈಗೆ ಸಿಕ್ಕಿಬಿದ್ದಿದ್ದಾಳೆ. ಉತ್ತರಭಾರತದಲ್ಲಿ ಈ ಘಟನೆ ನಡೆದಿದೆ. ಮುಂದೆ ಏನಾಯಿತು ಎಂದು ಆಶ್ಚರ್ಯಪಡುತ್ತೀರಾ .

ಇದನ್ನು ನೋಡಿದ ತಾಯಿಯು ತನ್ನ ಚಪ್ಪಲಿಗಳನ್ನು ಎತ್ತಿಕೊಂಡು ಇಬ್ಬರನ್ನು ಹೊಡೆಯಲು ಹಿಂಜರಿಯಲಿಲ್ಲ, ಬಳಕೆದಾರರು ಇಡೀ ಘಟನೆಯ ವೀಡಿಯೊವನ್ನು ಇಂಟರ್‌ನೆಟ್‌ನಲ್ಲಿ ಹಂಚಿಕೊಂಡ ನಂತರ ಘಟನೆ ಬೆಳಕಿಗೆ ಬಂದಿದೆ. ವೈರಲ್ ಆಗಿರುವ ವೀಡಿಯೊವನ್ನು ಅವರ ನೆರೆಹೊರೆಯವರು ರೆಕಾರ್ಡ್ ಮಾಡಿದ್ದಾರೆ. ಇದರಲ್ಲಿ ಟೆರೇಸ್‌ಗೆ ಆಗಮಿಸುವ ತಾಯಿ ಮೂಲೆ ಮೂಲೆಯಲ್ಲಿ ಹುಡುಕಿ ಬಾಯ್‌ಫ್ರೆಂಡ್‌ನ್ನು ಕಂಡು ಹುಡುಕುತ್ತಾಳೆ. ನಂತರ ಕಾಲಿನಿಂದ ಚಪ್ಪಲಿಯನ್ನು ತೆಗೆದು ಆತನಿಗೆ ಸರಿಯಾಗಿ ಹೊಡೆಯುತ್ತಾಳೆ. ಆತ ತಪ್ಪಿಸಿಕೊಂಡು ಓಡಿ ಹೋಗುತ್ತಾನೆ. ಆ ತಾಯಿ ನಂತರ ಮಗಳನ್ನೂ ಕರೆದು ಅವಳಿಗೂ ಚಪ್ಪಲಿಯಲ್ಲಿ ಹೊಡೆಯುವುದನ್ನು ನೋಡಬಹುದು.
ಇಂಟರ್‌ನೆಟ್‌ನಲ್ಲಿ ವೈರಲ್ ಆಗಿರೋ ವೀಡಿಯೋಗೆ 1 ಮಿಲಿಯನ್‌ಗೂ ಹೆಚ್ಚು ಲೈಕ್ಸ್ ಲಭಿಸಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ