ಹೌದು ಗೆಳೆಯರೇ ,, ವಿದ್ಯಾರ್ಥಿ ಮತ್ತು ಗುರುವಿನ ಸಂಬಂಧ ತುಂಬಾ ಪವಿತ್ರವಾದುದ್ದು . ಅದಕ್ಕೆ ಗುರು ದೇವೋ ಭವ ಅಂತ ಹೇಳುತ್ತಾರೆ . ಆದರೆ ಇಲ್ಲೊಂದು ಘಟನೆ ಮಂಡ್ಯದ ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಅದು ಏನೆಂದು ತಿಳಿಯೋಣ ಬನ್ನಿ .
ಈ ಶಿಕ್ಷಕ ಹಾಸ್ಟೆಲ್ನಲ್ಲಿ ಹುಡುಗಿಯರಿಗೆ ಯಾವಾಗಲು ಅಶ್ಲೀಲ CD ತೋರಿಸುತ್ತಿದನಂತೆ .ಇದರಿಂದ ರೊಚ್ಚಿಗೆದ್ದ ಹುಡುಗಿಯರು ಸ್ಟೂಡೆಂಟ್ಸ್ ಕಬ್ಬಿನ ಜಲ್ಲೆ, ದೊನ್ನೆ ಹಿಡಿದು ಹಾಸ್ಟೆಲ್ಗೆ ನುಗ್ಗಿದ್ದಾರೆ. ಹಾಸ್ಟೆಲ್ನಲ್ಲಿ ಕಾಮುಕ ಶಿಕ್ಷಕನಿಗೆ ಕಬ್ಬಿನ ಜಲ್ಲೆಯಿಂದ ಏಟು ನೀಡಿದ್ದಾರೆ.
ಕಾಮುಕ ಶಿಕ್ಷಕ ದಿನಾ ರಾತ್ರಿ ಹಾಸ್ಟೆಲ್ನಲ್ಲಿ ಕಾಟ ಕೊಡುತ್ತಿದ್ದನು. ಚಿನ್ಮಯಾನಂದ ರಾತ್ರಿ ಹಾಸ್ಟೆಲ್ಗೆ ಬಂದು ಲೈಂಗಿಕ ಕಿರುಕುಳ ಕೊಡುತ್ತಿದ್ದನು. ಹಾಸ್ಟೆಲ್ ಹುಡುಗಿಯರು ಶಿಕ್ಷಕನ ಕಾಟಕ್ಕೆ ರೋಸಿ ಹೋಗಿದ್ದು, ಕಾಮುಕ ಶಿಕ್ಷಕನ ಕಾಟಕ್ಕೆ ಹುಡುಗಿಯರು ಕಾಳಿ ಅವತಾರ ತಾಳಿದ್ದಾರೆ.
ಮಂಡ್ಯದ ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದಲ್ಲಿ ಘಟನೆ ನಡೆದಿದೆ.
ವಿದ್ಯಾರ್ಥಿನಿಯರು ಕಾಮುಕ ಶಿಕ್ಷಕ ಚಿನ್ಮಯಾನಂದಗೆ ಚಳಿ ಬಿಡಿಸಿದ್ದಾರೆ. ವಸತಿ ಶಾಲೆಯ ಉಸ್ತುವಾರಿ ಚಿನ್ಮಯಾನಂದಗೆ ಹಿಗ್ಗಾಮುಗ್ಗಾ ಥಳಿತ ಮಾಡಿದ್ದಾರೆ. ಪೊಲೀಸರು ಕಾಮುಕ ಶಿಕ್ಷಕ ಚಿನ್ಮಯಾನಂದನನ್ನ ಬಂಧಿಸಿದ್ದಾರೆ. ಶಿಕ್ಷಕನ ವಿರುದ್ದ ವಿದ್ಯಾರ್ಥಿನಿಯರ ಪೋಷಕರು ಆಕ್ರೋಶ ಹೊರಹಾಕಿದ್ಧಾರೆ. ಆರೋಪಿ ಶಿಕ್ಷಕನ ಅಮಾನತ್ತು ಸೇರಿ ಕಠಿಣ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ.ಇದರಿಂದ ಬೇರೆ ಶಿಕ್ಷಕರು ಬುದ್ದಿ ಕಲಿಯುವಂತಾಗಲು ಎಂದು ಬಯೋಸೋಣ . ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ( video credit : btv news )