ಶಾಲೆಯಲ್ಲಿ ಪ್ರೇಮಿಗಳ ದಿನ ಯಾರು ಯಾರಿಗೆ ಪ್ರಪೋಸ್ ಮಾಡಿದರು ನೋಡಿ.; ವಿಡಿಯೋ ವೈರಲ್

ಶಾಲೆಯಲ್ಲಿ ಪ್ರೇಮಿಗಳ ದಿನ ಯಾರು ಯಾರಿಗೆ ಪ್ರಪೋಸ್ ಮಾಡಿದರು ನೋಡಿ.; ವಿಡಿಯೋ ವೈರಲ್

ಪ್ರೇಮಿಗಳ ದಿನಕ್ಕೆ ಇನ್ನೊಂದೇ ದಿನ ಬಾಕಿ ಇರೋದು. ಹಲವು ದಿನಗಳಿಂದ ತಮ್ಮ ಪ್ರೇಮಿಯನ್ನು ಪ್ರೀತಿಸುತ್ತಿದ್ದರೂ ಅದೆಷ್ಟೋ ಜನ ಪ್ರೇಮ ನಿವೇದನೆಯನ್ನು ಮಾಡಿಕೊಂಡಿರುವುದಿಲ್ಲ. ಪ್ರೇಮಿಗಳ ದಿನಕ್ಕಾಗಿ ಕಾಯುತ್ತಿರುತ್ತಾರೆ. ಅಂತಹವರು ನಾಳೆ ತಮ್ಮ ಪ್ರೀತಿಯ ಸಂಗಾತಿಗೆ ರೆಡ್ ರೋಸ್, ಗ್ರೀಟಿಂಗ್ ಕಾರ್ಡ್, ತಾಜ್ ಮಹಲ್, ಚಾಕ್ಲೇಟ್ಸ್ ಸೇರಿದಂತೆ ಹಲವು ಬಗೆಯ ಗಿಫ್ಟ್ ಗಳನ್ನು ನೀಡುತ್ತಾರೆ. ವ್ಯಾಲೆನ್ ಟೈನ್ಸ್ ಡೇ ಅಂದರೆ, ಪ್ರೇಮಿಗಳು ತಮ್ಮ ಮನದಾಳದ ಮಾತುಗಳನ್ನು ಹೇಳಿಕೋಮಡು ಸಂಗಾತಿ ಜೊತೆಗೆ ಮುನ್ನೆಡೆಯುವ ದಿನ. ಈ ದಿನಕ್ಕಾಗಿ ಹುಡುಗರು ಕಾತುರವಾಗಿ  ಕಾಯುತ್ತಿರುತ್ತಾರೆ. ಹುಡುಗಿಯರು ಕೂಡ ತಮಗೆ ಯಾರು ಪ್ರಪೋಸ್ ಮಾಡಬಹುದು ಎಂದು ನಿರೀಕ್ಷಿಸುತ್ತಿರುತ್ತಾರೆ. 

ಇಲ್ಲೊಂದು ವೀಡಿಯೋದಲ್ಲಿ ಪ್ರೇಮಿಗಳ ದಿನದಂದು ವಿದ್ಯಾರ್ಥಿಗಳು ಪ್ರಪೋಸ್ ಮಾಡಿರುವ ವೀಡಿಯೋ ವೈರಲ್ ಆಗಿದೆ. ಹುಡುಗಿಯೊಬ್ಬಳು ಶಾಲೆಯ ಬಾಗಿಲ್ಲ ರೆಡಿಯಾಗಿ ಕಾಯುತ್ತಿರುತ್ತಾಳೆ. ಸುತ್ತ ನೆರೆದ ಸ್ನೇಹಿತರು ಕೈಯಲ್ಲಿ ಮೊಬೈಲ್ ಹಿಡಿದು ವಿದ್ಯಾರ್ಥಿ ಬಂದು ರೋಸ್ ಕೊಟ್ಟು ಪ್ರಪೋಸ್ ಮಾಡುವುದನ್ನು ವೀಡಿಯೋ ಮಾಡುತ್ತಾರೆ. ಆಗ ಹುಡುಗಿ ಖುಷಿಯಿಂದ ನಾಚಿಕೊಳ್ಳುತ್ತಾಳೆ. ಇದೇ ವೀಡಿಯೋದಲ್ಲಿ ಮತ್ತೊಂದು ಹುಡುಗಿ ತನ್ನ ವಿದ್ಯಾರ್ಥಿಗೆ ಪ್ರಪೋಸ್ ಮಾಡಿದ್ದಾಳೆ. ಆದರೆ ಹುಡುಗ ರೋಸ್ ಅನ್ನು ಪಡೆದು ಬಿಸಾಡಿದ್ದಾನೆ. ಈ ವೀಡಿಯೋದಲ್ಲಿ ಎರಡು ಅರ್ಥಗಳಿವೆ.    

ಒಂದು ಹದಿಹರಯದ ಮಕ್ಕಳು ಓದಿನ ಕಡೆಗೆ ಗಮನ ಹರಿಸಬೇಕೇ ಹೊರತು. ಪ್ರೀತಿ ಪ್ರೇಮೆ ಎಂದು ಸಮಯ ಹಾಳು ಮಾಡಬಾರದು ಎಂದು. ಮತ್ತೊಂದು ಹದಿಹರಯದಲ್ಲಿ ಪ್ರೀತಿ ಪ್ರೇಮ ಸಹಜವೇ. ಆದರೆ ಅದಕ್ಕೆ ವಯಸ್ಸಿನ ಲೆಕ್ಕಾಚಾರವೂ ಮುಖ್ಯ ಎಂಬುದನ್ನು ತಿಳಿಯಬೇಕು. ಪ್ರೀತಿ ಪ್ರೇಮ ಎಂದು ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಇನ್ನು ನಾಳೆ ವ್ಯಾಲೆನ್ ಟೈನ್ಸ್ ಡೇ ಇದ್ದು, ಯಾರು ಯಾರು ಯಾರಿಗೆ ಹೇಗೆಲ್ಲಾ ಪ್ರೊಪೋಸ್ ಮಾಡುತ್ತಾರೋ ಗೊತ್ತಿಲ್ಲ. ಪ್ರೇಮಿಗಳ ಹಬ್ಬದಂದು ರೆಡ್ ರೋಸ್ ಬೆಲೆ ಅಂತೂ ಗಗನಕ್ಕೇರುತ್ತದೆ.