ಹೇಗಿದೆ ಗೊತ್ತಾ ನಿತ್ಯಾನಂದ ಸ್ವಾಮಿಯ ಕೈಲಾಸ ದೇಶ,ದೇಶದ ತುಂಬಾ ಅಪ್ಸರೆಯರ ವಾಸ! ಈ ದೇಶಕ್ಕೆ ಹೋಗೋದು ಹೇಗಿದೆ ನೋಡಿ

ಹೇಗಿದೆ ಗೊತ್ತಾ ನಿತ್ಯಾನಂದ ಸ್ವಾಮಿಯ ಕೈಲಾಸ ದೇಶ,ದೇಶದ ತುಂಬಾ ಅಪ್ಸರೆಯರ ವಾಸ! ಈ ದೇಶಕ್ಕೆ ಹೋಗೋದು ಹೇಗಿದೆ ನೋಡಿ

ನಿತ್ಯಾನಂದನ ಬಿಡದಿ ಆಶ್ರಮ, ಅದರಲ್ಲಿ ಆಗಿರುವ ಅವಾಂತರಗಳು ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಎಲ್ಲದೂ ನಿಮಗೆ ಗೊತ್ತೇ ಇದೆ. ಈಗ ದೇಶದಿಂದ ಪ-ರಾರಿಯಾಗಿರುವ ನಿತ್ಯಾನಂದ ಏನು ಮಾಡುತ್ತಿದ್ದಾನೆ ಎಲ್ಲಿದ್ದಾನೆ ಎಂದು ಹಲವರ ಪ್ರಶ್ನೆ. ಯಾಕೆಂದ್ರೆ ಇತ್ತೀಚಿಗೆ ಕೈಲಾಸ ರಾಷ್ಟ್ರದ ಪ್ರತಿನಿಧಿಯಾಗಿ ವಿಶ್ವಸಂಸ್ಥೆಯ ಸಭೆ ಒಂದರಲ್ಲಿ ವಿಜಯಪ್ರಿಯ ಎನ್ನುವ ನಿತ್ಯಾನಂದನ ಅನುಯಾಯಿ ಭಾಗವಹಿಸಿದ್ದರು.

ತನ್ನದೇ ಆದ ಸ್ವಂತ ದೇಶ ಅದಕ್ಕೂ ಒಂದು ಪ್ರತ್ಯೇಕ ಧ್ವಜ ಲಾಂಛನ ತನ್ನ ಕೈಲಾಸಂನಲ್ಲಿ ಪಾರ್ಲಿಮೆಂಟ್ ರಿಸರ್ವ್ ಬ್ಯಾಂಕ್ ಎಲ್ಲವನ್ನು ಪ್ರತ್ಯೇಕವಾಗಿ ನಿತ್ಯಾನಂದ ನಿರ್ಮಿಸಿಕೊಂಡಿದ್ದಾನೆ. ಪ್ರತ್ಯೇಕ ಪಾಸ್ಪೋರ್ಟ್ ಕೂಡ ಇಲ್ಲಿಗೆ ಬರುವವರೆಗೆ ಸಿಗುತ್ತದೆ. ಇನ್ನು ಮೂರು ದಿನಗಳ ಕಾಲ ಇಲ್ಲಿ ವಾಸ ಮಾಡಲು ಉಚಿತ ವೀಸಾ ಕೂಡ ಒದಗಿಸಲಾಗುತ್ತದೆ.

ನೀವು ನಿತ್ಯಾನಂದ ಕೈಲಾಸ ವೆಬ್ಸೈಟ್ ಗೆ ಹೋಗಿ ಅಲ್ಲಿ ಉಚಿತ ವೀಸಾಕ್ಕೆ ಅಪ್ಲೈ ಮಾಡಬಹುದು. ಇಲ್ಲಿಗೆ ಹೋದರೆ ಮೂರು ದಿನ ಉಚಿತ ವಸತಿ ಊಟ ಎಲ್ಲವೂ ನೀಡಲಾಗುತ್ತದೆ. ಮೂರು ದಿನದ ನಂತರ ಮತ್ತೆ ಅವರೇ ಏರ್ಪೋರ್ಟ್ ಗೆ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಾರೆ. ಇದಕ್ಕಾಗಿ ನಿತ್ಯಾನಂದ ಪ್ರೈವೇಟ್ ಜೆಟ್ ವ್ಯವಸ್ಥೆ ಕೂಡ ಮಾಡಿದ್ದಾನಂತೆ.

ನಿತ್ಯಾನಂದನ ರಾಷ್ಟ್ರದಲ್ಲಿ ಹಿಂದುತ್ವವನ್ನು ಹೆಚ್ಚು ಪ್ರಚಾರ ಮಾಡಲಾಗುತ್ತೆ. ಇಲ್ಲಿ ಕೃಷ್ಣ ಜನ್ಮಾಷ್ಟಮಿಯ ಆಚರಣೆಯಿಂದ ಹಿಡಿದು ಎಲ್ಲಾ ಹಿಂದೂ ಹಬ್ಬಗಳ ಆರಾಧನೆ ಮಾಡಲಾಗುತ್ತೆ. ದೇವರು ಎಂದು ಪೂಜೆ ಮಾಡುವುದು ಮಾತ್ರ ನಿತ್ಯಾನಂದನನ್ನು ಎನ್ನಲಾಗಿದೆ. ಇನ್ನು ಇಲ್ಲಿ ಸಾಕಷ್ಟು ಬೇರೆಬೇರೆ ರಾಷ್ಟ್ರದ ಜನರು ವಾಸಿಸುತ್ತಾರೆ. ಅದರಲ್ಲೂ ಹೆಚ್ಚು ಮಹಿಳಾ ಅನುಯಾಯಿಗಳೇ ನಿತ್ಯಾನಂದನ ಆಶ್ರಯದಲ್ಲಿ ಇದ್ದಾರೆ. ಅವರೆಲ್ಲರೂ ತಮ್ಮ ಹೆಸರಿನ ಜೊತೆಗೆ ನಿತ್ಯಾನಂದ ಎಂಬುದನ್ನು ಸೇರಿಸಿಕೊಳ್ಳುತ್ತಾರೆ. ಇನ್ನು ಈ ರಾಷ್ಟ್ರದಲ್ಲಿ ನಿತ್ಯಾನಂದನೆ ಸರ್ವಾಧಿಕಾರಿ.

ನಿತ್ಯಾನಂದನ ರಾಷ್ಟ್ರದಲ್ಲಿ ಇರುವವರ ದಿನಚರಿಯನ್ನ ನೋಡುವುದಾದರೆ, ಬೆಳಿಗ್ಗೆ ಮೂರು ಗಂಟೆಗೆ ಎದ್ದು ಧ್ಯಾನ, ಯೋಗ ನಡೆಯುತ್ತದೆ ಅದಾದ ಬಳಿಕ ದೇವರ ಪೂಜೆ ನಂತರ ಉಪಹಾರ ಸೇವಿಸಿ ಮತ್ತೆ ತಮ್ಮ ತಮ್ಮ ಪ್ರಾಜೆಕ್ಟ್ ಗಳಲ್ಲಿ ಅಲ್ಲಿಯ ಜನರು ನಿರತರಾಗುತ್ತಾರೆ. ಇಲ್ಲಿ ಬೇರೆ ಬೇರೆ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುತ್ತಾರೆ. ಅವರ ಪ್ರಾಜೆಕ್ಟ್ ಅಂದರೆ ಇಲಿ ದಿನವೂ ಬೇರೆ ಬೇರೆ ದೇಶದ ಜನರು ಕರೆ ಮಾಡಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡರೆ ಇವರು ಅದಕ್ಕೆ ಪರಿಹಾರ ಸೂಚಿಸುತ್ತಾರೆ. ಇಲ್ಲಿ ನೃತ್ಯ ತರಬೇತಿ ಕೂಡ ನಡೆಯುತ್ತದೆ ಆಸಕ್ತರು ಅದರಲ್ಲಿ ಭಾಗವಹಿಸಬಹುದು ಅರೆಸ್ಟ್ ಮಾಡಬಹುದು.