ಯೌಟ್ಯೂಬ್ನಿಂದ ತಿಂಗಳಿಗೆ ಅದೆಷ್ಟು ಲಕ್ಷ ಆದಾಯ ಗಳಿಸುತ್ತಾರೆ ಗೊತ್ತಾ ಶಿವಪುತ್ರ..! ಅಸಲಿ ಸತ್ಯ ನೋಡಿ
ಜೀವನ ಅಂದ್ರೆ ಹಾಗೇನೇ ಯಾವಾಗ ಯಾರಿಗೆ ಯಾವ ರೀತಿಯ ಯೋಚನೆಗಳು ಅವರ ತಲೆಗೆ ಬರುತ್ತವೆ ಎಂದು ಹೇಳಲಿಕ್ಕಾಗದು. ಅವರ ಇಷ್ಟದಂತೆ ಅವರ ಜೀವನವನ್ನ ಮಾಡಬೇಕು ಎಂಬುದಾಗಿ ನೆಲೆಯೂರಿ, ಭದ್ರವಾಗಿ ತಮ್ಮ ಕನಸುಗಳಿಗೆ ಕಷ್ಟಗಳನ್ನು ಎದುರಿಸಿ, ಒಂದಲ್ಲ ಒಂದು ದಿನ ದೊಡ್ಡ ಮಟ್ಟಕ್ಕೆ ನಾನು ಬೆಳೆಯುತ್ತೆನೆ ಎನ್ನುವ ಹಂಬಲ, ಸತತ ಪ್ರಯತ್ನ ಇದ್ದರೆ ಏನು ಬೇಕಾದರೂ ಮಾಡಬಹುದು, ಕೆಲಸದಲ್ಲಿ ನಿಷ್ಠೆ ಹೆಚ್ಚಾಗಿದ್ದರೆ ಒಂದಲ್ಲ ಒಂದು ದಿನ ನಾನು ಕೂಡ ಯಶಸ್ವಿಯಾಗುತ್ತೇನೆ ಎನ್ನುವ ಮನಸ್ಥಿತಿ ಇದ್ದಲ್ಲಿ ಸಾಧನೆ ಮಾಡಬಹುದು. ಅಂಥಹ ಯಶಸ್ವಿಯಾಗಿರುವ ನಿದರ್ಶನಗಳು ನಮ್ಮ ಮುಂದೆ ಈಗಾಗಲೇ ಸಾಕಷ್ಟಿವೆ. ಹೌದು ಅದೇ ಸಾಲಿಗೆ ಇದೀಗ ಉತ್ತರ ಕರ್ನಾಟಕದ ಕಾಮಿಡಿ ಕಲಾವಿದ ನಟ ಶಿವಪುತ್ರ ಅವರು ಸೇರಿದ್ದಾರೆ ಎನ್ನಬಹುದು.
ಹೌದು ಶಿವಪುತ್ರ ಅವರ ಹೆಸರನ್ನು ನೀವು ಈಗಾಗಲೇ ಕೇಳಿರುತ್ತೀರಿ..ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಮ್ ಎಲ್ಲಾ ಕಡೆ ಶಿವಪುತ್ರ ಅವರ ಕಾಮಿಡಿ ವಿಡಿಯೋಗಳು ಕಾಣುತ್ತಲೇ ಇರುತ್ತವೆ. ಹೌದು 2019ರಲಿ ಒಂದು ವರ್ಷ ಬೆಂಗಳೂರಿನಲ್ಲಿ ಇನ್ಫೋಸಿಸ್ ಸಂಸ್ಥೆಯಲ್ಲಿ ಸೆಕ್ಯುರಿಟಿ ಆಗಿ ಕೆಲಸ ಮಾಡಿದ ಶಿವಪುತ್ರ ಅವರು ಕೇವಲ ಒಂದೇ ವರ್ಷಕ್ಕೆ ಬೆಂಗಳೂರು ಸಹವಾಸ ಸಾಕೆಂದು ಮರಳಿ ತಮ್ಮ ಊರು ಸೇರಿದ್ದರಂತೆ ಶಿವಪುತ್ರ. ತದನಂತರ ಅವರಲ್ಲಿದ್ದ ನಟನೆಯ ಆಸಕ್ತಿ ಒಂದು ಯುಟ್ಯೂಬ್ ಚಾನಲ್ ಮೂಲಕ ಆರಂಭ ಆಯ್ತು. ಗೆಳೆಯರನ್ನು ಸೇರಿಸಿಕೊಂಡು ಆರಂಭ ಮಾಡಿದರು ಎನ್ನಲಾಗಿದೆ. ನಂತರ ಹಂತಹಂತವಾಗಿ ತಿಂಗಳಿಗೆ ಒಂದು ವಿಡಿಯೋ ಬಿಡುತ್ತಿದ್ದ ಶಿವಪುತ್ರ, ಅವರ ಊರಿನ ಜನತೆ ಇವರನ್ನು ಆರಂಭದಲ್ಲಿ ಟೀಕೆ ಮಾಡಿದ್ದು ಇದೆ.
ಹೀಗೆ ಇವರ ಯೂಟ್ಯೂಬ್ ಚಾನೆಲ್ ಗೆ ಒಂದು ಲಕ್ಷ ಸಬ್ಸ್ಕ್ರಿಬರ್ಸ್ ಆಗಿದ್ದು, ತದನಂತರ ವಿಡೀಯೋಗಳನ್ನ ಹೆಚ್ಚು ಜನರು ನೋಡುತ್ತಿದ್ದು ಇಷ್ಟ ಪಡುತ್ತಿದ್ದು ಇದೀಗ 10 ಲಕ್ಷ ಚಂದಾದಾರರು ಆಗಿದ್ದಾರೆ. ಈಗ ವಾರಕ್ಕೆ ಎರಡು ಕಾಮಿಡಿ ವಿಡಿಯೋಗಳನ್ನು ಶಿವಪುತ್ರ ಯೂಟ್ಯೂಬ್ನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಹಾಗೆ ಶಿವಪುತ್ರ ಅವರು ಹೆಚ್ಚು ಎತ್ತರಕ್ಕೆ ಬೆಳೆದಿದ್ದಾರೆ ಎನ್ನಬಹುದು. ಸಾಕಷ್ಟು ಅಭಿಮಾನಿ ಬಳಗವನ್ನು ಸಹ ಹೊಂದಿದ್ದಾರೆ. ಹೌದು ತಿಂಗಳಿಗೆ ಶಿವಪುತ್ರ ಅವರ ಆದಾಯ ಯೂಟ್ಯೂಬ್ ನಿಂದ ಬರೋದು ಎಷ್ಟು ಗೊತ್ತಾ.? ಮಾಹಿತಿ ತಿಳಿದು ಬಂದ ಪ್ರಕಾರ ತಿಂಗಳಿಗೆ ಸುಮಾರು 8 ರಿಂದ 12 ಲಕ್ಷ ರೂಪಾಯಿ ಹಣ ಸಂಪಾದಿಸುತ್ತಾರೆ ಶಿವಪುತ್ರ ಎನ್ನಲಾಗಿದೆ. ಹಾಗೆ ಫೇಸ್ಬುಕ್ ನಲ್ಲಿಯೂ ಕೂಡ ಗಳಿಸುತ್ತಾರೆ ಎಂದು ಮಾಹಿತಿ ಲಭ್ಯವಾಗಿದೆ.