ತಾಯಿ ಕೊರತೆ ಬರದಂತೆ ಶೌರ್ಯನ ನೋಡಿಕೊಳ್ತಿರುವ ರಾಘು..! ಮಗನಿಗೆ ಎಷ್ಟು ದುಡ್ಡು ಕೊಟ್ರು ನೋಡಿ

ಕದ್ದ ಚಿತ್ರವು ಸುಹಾಸ್ ಕೃಷ್ಣ ಬರೆದು ನಿರ್ದೇಶಿಸಿದ ಕನ್ನಡ ಡ್ರಾಮಾ ಥ್ರಿಲ್ಲರ್ ಚಲನಚಿತ್ರವಾಗಿದೆ. ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರು ಮತ್ತು ನಮ್ರತಾ ಸುರೇಂದ್ರನಾಥ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.. ಹೌದು ಜೊತೆಗೆ ಬೇಬಿ ಆರಾಧ್ಯ, ತ್ರಿವಿಕ್ರಮ್, ರಘು ಶಿವಮೊಗ್ಗ, ಬಾಲಾಜಿ ಮನೋಹರ್ ಮತ್ತು ಅನೇಕರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೃಷ್ಣ ರಾಜ್ ಸಂಗೀತ ಸಂಯೋಜಿಸಿದ್ದು, ಗೌತಮ್ ಮನು ಛಾಯಾಗ್ರಹಣ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಶ್ರೀ ಕ್ರೇಜಿ ಮೈಂಡ್ಜ್ ಸಂಕಲನ ಮಾಡಿದ್ದಾರೆ. ಶಾನ್ವಿ ಟಾಕೀಸ್ ಬ್ಯಾನರ್ ಅಡಿಯಲ್ಲಿ ಸಂದೀಪ್ ಹೆಚ್ ಕೆ ಮತ್ತು ಸುಹಾಸ್ ಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಹೌದು ಇಂದು ನಟ ವಿಜಯ ರಾಘವೇಂದ್ರ ಅವರ ನಟನೆಯ ಕದ್ದ ಚಿತ್ರದ ಪ್ರೀಮಿಯರ್ ಶೋ ನಡೆಯಿತು. ನಿನ್ನೆ ಕೂಡ ನಡೆದಿದೆ, ಹೌದು ಪ್ರೀಮಿಯರ್ ಶೋಗಾಗಿ ಸಾಕಷ್ಟು ಸೆಲೆಬ್ರಿಟಿಗಳು ಆಗಮಿಸಿದ್ದರು. ರಾಘವೇಂದ್ರ ಅವರ ಅಭಿನಯವನ್ನು ಹಾಡಿ ಕೊಂಡಾಡಿದ್ದಾರೆ..ಅವರ ಸಿನಿಮಾ ರಂಗದ ಜರ್ನಿಯಲಿ ಇದೊಂದು ವಿಭಿನ್ನವಾದ ಪಾತ್ರ, ಹಾಗೆ ತುಂಬಾ ವಿಭಿನ್ನವಾಗಿಯೆ ಖಡಕ್ಕಾಗಿ ಸಕತ್ ನಟನೆ ಮಾಡಿ ಎಲ್ಲರ ಮೆಚ್ಚುಗೆ ಮಾತುಗಳ ಗಿಟ್ಟಿಸಿಕೊಂಡಿದ್ದಾರೆ ರಾಘು. ಹೌದು ಈ ಕದ್ದ ಚಿತ್ರ ಇದೆ ತಿಂಗಳು ಎಂಟನೇ ತಾರೀಕು ಶುಕ್ರವಾರ ಭರ್ಜರಿಯಾಗಿ ರಾಜ್ಯದಂತ ಬಿಡುಗಡೆ ಕಾಣಲಿದೆ. ಈಗ ಪ್ರೀಮಿಯರ್ ಶೋನಲ್ಲಿ ಮಗ ಮತ್ತು ಕುಟುಂಬಸ್ಥರು ಕೂಡ ವಿಜಯ ರಾಘವೇಂದ್ರ ಅವರೊಟ್ಟಿಗೆ ಕಾಣಿಸಿದ್ದಾರೆ.
ಮಗ ಶೌರ್ಯನನ್ನು ಒಂದು ಕ್ಷಣ ಕೂಡ ಬಿಟ್ಟಿರದ ವಿಜಯ ರಾಘವೇಂದ್ರ ಅವರು ಮಗನ ಎಷ್ಟು ಕೇರ್ ಮಾಡುತ್ತಿದ್ದರು ಅಂದ್ರೆ, ನಿಜಕ್ಕೂ ಖುಷಿ ಆಗುತ್ತದೆ ಒಂದು ಕಡೆ, ಇನ್ನೊಂದು ಕಡೆ ಇಂತಹ ವೇಳೆ ಅವರ ಮಡದಿ ಸ್ಪಂದನ ಇಲ್ಲವಲ್ಲ ಎಂದು ಕಣ್ಣೀರು ಬರುವಂತೆ ಕಂಡಿತು. ನಟ ವಿಜಯ ರಾಘವೇಂದ್ರ ಅವರಿಗೆ ನೋವಾಗುತ್ತಿದ್ದರೂ ಹೆಂಡತಿ ನೆನಪಾಗಿ ಕಣ್ಣೀರು ತರುವಂತೆ ಆಗುತ್ತಿದ್ದರೂ ಅದನ್ನು ತಡೆದುಕೊಂಡು ಸಿನಿಮಾ ವೀಕ್ಷಣೆ ಮಾಡಿದ್ದಾರೆ ರಾಘು. ಮಗನಾದ ಶೌರ್ಯನನ್ನು ಮಾತನಾಡಿಸುತ್ತಾ ಅವನಿಗೆ ಏನು ಬೇಕು ಅದನ್ನು ತೆಗೆದುಕೊಂಡು ತಿನ್ನುವಂತೆ ಹಣವನ್ನು ಕೂಡ ಕೊಡುತ್ತಾರೆ. ಆ ದೃಶ್ಯ ಇದೀಗ ಕ್ಯಾಮರಾ ಸೆರೆಯಾಗಿದ್ದು ನಿಜಕ್ಕೂ ತಂದೆ ಮಗನ ಪ್ರೀತಿ ಎಂಥದ್ದು, ಮಗನ ಮೇಲೆ ತಾಯಿ ಇಲ್ಲದ ಸ್ಥಿತಿಯಲ್ಲಿ ರಾಘು ಅವರು ಯಾವ ರೀತಿ ಪ್ರೀತಿ ತೋರಿಸಿದರು ಗೊತ್ತಾ ಈ ವಿಡಿಯೋ ನೋಡಿ. ನಿಜಕ್ಕೂ ನಿಮ್ಮ ಕಣ್ಣಂಚಲ್ಲಿ ನೀರು ಬರುತ್ತದೆ..ಹಾಗೆ ಕದ್ದ ಚಿತ್ರವನ್ನು ಎಲ್ಲರೂ ಕೂಡ ಚಿತ್ರಮಂದಿರಕ್ಕೆ ಭೇಟಿ ನೀಡಿ ಸಿನಿಮಾ ನೋಡಿ, ಸಿನಿಮಾವನ್ನು ಗೆಲ್ಲಿಸೋಣ. ಸ್ಪಂದನ ಅವರ ಅಗಲಿಕೆಯ ನೋವಿನಲ್ಲಿರುವ ವಿಜಯ ಅವರಿಗೆ ಅವರ ಈ ಸಿನಿಮಾ ಗೆಲ್ಲಿಸುವ ಮೂಲಕ ನೋವಿನಿಂದ ಸ್ವಲ್ಪ ಹೊರಬರುವ ಹಾಗೆ ರಾಘು ಅವರಿಗೆ ಪುಷ್ಟಿಯ ನೀಡೋಣ, ಧನ್ಯವಾದಗಳು...
VIDEO CREDIT : CINI STORE