ಚಂದ್ರನ ಮೇಲೆ ಆಯ್ತು..; ಈಗ ಜಗತ್ತಿನಲಿ ಯಾರು ಮಾಡದ ಸಾಹಸಕ್ಕೆ ಕೈ ಹಾಕಿದ ಇಸ್ರೋ..! ಮುಂದಿನ ಟಾರ್ಗೆಟ್ ಇದೆಯಂತೆ..

ಹೌದು ಸ್ನೇಹಿತರೆ, ಸೂರ್ಯದೇವನಿಗೆ ನಾವು ಕೋಟಿ ಕೋಟಿ ಪ್ರಣಾಮಗಳನ್ನು ನಮಿಸುತ್ತೇವೆ ಆತನನ್ನು ರವಿ, ಭಾಸ್ಕರ್, ಹಾಗೂ ಭಾನು ಎಂಬ ಅಂದ ಚಂದದ ಹೆಸರುಗಳಿಂದ ಕರೆಯುವ ಪದ್ಧತಿ ಇದೆ. ಪೋಷಕರು ಮಕ್ಕಳಿಗೆ ಸೂರ್ಯನ ಕೆಲವು ಈ ಹೆಸರುಗಳನ್ನೇ ಇಡುತ್ತಾರೆ. ಅದನ್ನು ನೀವು ಈಗಾಗಲೇ ಗಮನಿಸಿದ್ದೀರಿ. ಸೂರ್ಯವೆಂದರೆ ಅದೊಂದು ಅತಿ ದೊಡ್ಡ ಶಕ್ತಿ, ಹಾಗೂ ಸೂರ್ಯ ಭಯಾನಕ ಶಕ್ತಿ ಆಗಿರುತ್ತದೆ. ಆದರಿಂದಲೇ ನಾವು ಸೌರಶಕ್ತಿಯನ್ನು ತಯಾರು ಮಾಡಿದ್ದೇವೆ
ಅವಾಗವಾಗ ಗ್ರಹಣ ಹಿಡಿದಾಗ ಶ್ರದ್ದೆಯಿಂದ ಭಕ್ತಿಯಿಂದ ಸೂರ್ಯನ ನಮಸ್ಕರಿಸುತ್ತೇವೆ. ಹೌದು ಇದೀಗ ಎಲ್ಲರಿಗೂ ಗೊತ್ತಿರುವ ವಿಚಾರ ಏನೆಂದರೆ ಇತ್ತೀಚಿಗೆ ನಮ್ಮ ಇಸ್ರೋ ವಿಜ್ಞಾನಿಗಳು ಚಂದ್ರನ ಮೇಲೆ ಯಶಸ್ವಿಯಾಗಿ ನೌಕೆ ಕಾಲಿಡುವಂತೆ ಮಾಡಿದ್ದು ಇದು ಇಡೀ ದೇಶವೇ ಹೆಮ್ಮೆ ಪಡುವ ವಿಷಯ. ಇದೀಗ ಮುಂದಿನದಾಗಿ ಸಂಶೋಧನಾ ವಸ್ತುವಾಗಿ ಸೂರ್ಯ ಕಣ್ಣಿಗೆ ಬಿದ್ದಿದ್ದಾನೆ. ಸೂರ್ಯನ ಸನಿಹಕ್ಕೆ ಹೋಗಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಈ ಕುರಿತು ಎಲ್ಲಾ ಕೆಲಸವನ್ನು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಹೌದು ಇದೊಂದು ಭಾರತದ ಪ್ರಪ್ರಥಮ ಸೂರ್ಯದ ಮೇಲೆ ಅಧ್ಯಯನ ಎನ್ನುವುದು ಅತಿ ದೊಡ್ಡ ಹಿರಿಮೆ. ಮುಂದಿನ ದಿನಗಳಲ್ಲಿ ಆದಿತ್ಯ ಎಲ್ ಒನ್ ಎಂಬ ಈ ಯೋಜನೆಯ ಮೂಲಕ ಉಡಾವಣೆ ಮಾಡಲು ಇಸ್ರೋ ಮುಂದಾಗುತ್ತಿದೆ. ಇದು ಖುಷಿಯ ವಿಚಾರ.
ಈ ಇಸ್ರೋ ಆದಿತ್ಯ ಎಲ್ ಒನ್ ಯೋಜನೆಯಲ್ಲಿ ಮುಖ್ಯವಾಗಿ 'ಕರೋನಗ್ರಫಿ ಸ್ಯಾಟಲೈಟ್' ವಿಶೇಷ ಉಪಗ್ರಹವ ಬಾಹ್ಯಾಕಾಶಕ್ಕೆ ಕಳುಹಿಸಿ ಕೊಡುತ್ತಿದ್ದು, ಸೂರ್ಯನ ಹೊರ ವಾತವರಣ ಹೇಗಿರುತ್ತದೆ, ಮತ್ತು ಅಲ್ಲಿ ಸೂರ್ಯನು ಹೇಗೆ ವರ್ತನೆ ಮಾಡುತ್ತಾನೆ, ಎನ್ನುವ ಪ್ರತಿಯೊಂದು ಅಂಶವ ಅಧ್ಯಯನ ನಡೆಸಿ ಚಟುವಟಿಕೆಗಳನ್ನು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡಲಿದೆಯಂತೆ. ಈ ಉಡಾವಣೆಗೆ ಪಿಎಸ್‌ಎಲ್‌ವಿ ಎಂಬ ವಿಶ್ವಾಸಾರ್ಹ ರಾಕೆಟ್ ಬಳಕೆ ಮಾಡಿಕೊಳ್ಳಲು ಇಸ್ರೋ ಮುಂದಾಗಲಿದೆಯಂತೆ. ಪಿಎಸ್‌ಎಲ್‌ವಿ ಅಂದ್ರೆ, ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಎಂದರ್ಥ...