ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಾಗಭೂಷಣ್! ಆಕೆ ಯಾರು ಗೊತ್ತಾ?

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಾಗಭೂಷಣ್! ಆಕೆ ಯಾರು ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಉದಯೋನ್ಮುಖ ನಟರಲ್ಲಿ ಸಾಕಷ್ಟು ಮಂದಿ ಇದ್ದಾರೆ. ಆ ಮಂದಿಯ ಪೈಕಿ ಮುಂಚೂಣಿಯಲ್ಲಿ ಇರುವ ಹೆಸರು ಎಂದ್ರೆ ಅದು ನಾಗ ಭೂಷಣ. ಇನ್ನೂ ಇವರು ಮೊದಲೆಲ್ಲಾ ಚಿತ್ರರಂಗದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ತೊಡಗಿಸಿಕೊಂಡು ಆ ನಂತರ ಉತ್ತಮ ಕಾಮಿಡಿಯನ್ ಎಂದು ಗುರುತಿಸಿಕೊಂಡರು. ಆದರೆ ಇವರಿಗೆ ನಟನೆ ಗಿಂತ ಹೆಚ್ಚು ನಿರ್ದೇಶನದಲ್ಲಿ ಆಸಕ್ತಿ ಇದ್ದ ಕಾರಣ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲ್ಸ ನಿರ್ವಹಣೆ ಮಾಡುತ್ತಾ ಬಂದರು. ಆ ನಂತರ ಡಾಲಿ ಹಾಗೂ ನಾಗ ಭೂಷಣ ಅವರು ಎಂಜಿನಿಯರಿಂಗ್ ಕಾಲೇಜಿನ ಸಮಯದಿಂದಲೂ ಸ್ನೇಹಿತರು ಆಗಿರುವ ಕಾರಣ ಅವರ ಪ್ರೋತ್ಸಾಹದಿಂದ ನಾಗ ಭೂಷಣ ಅವ್ರು ಡೈರೆಕ್ಟರ್ ಆಗಿ ಪ್ರಮೋಷನ್ ಕೊಡ ಪಡೆದು ಭೇಷ್ ಗಿರಿ ಪಡೆದುಕೊಳ್ಳುತ್ತಾರೆ.

ಉತ್ತಮ ಕಲಾವಿದ ,ಕಾಮಿಡಿಯನ್ ಹಾಗೂ ನಿರ್ದೇಶಕ ಎಂದು ಪ್ರಸಿದ್ದಿ ಪಡೆದಿದ್ದ ನಾಗ ಭೂಷಣ ಅವರು ಸಂಪೂರ್ಣ ನಟನಾಗಿ ಟಗರು ಪಲ್ಯ ಚಿತ್ರದ ಮೂಲಕ ಕೊಡ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಳ್ಳುವ ಸಮಯದಲ್ಲಿ ಅವರು ಅತಿ ವೇಗದ ಕಾಲು ಚಾಲನೆ ಮಾಡಿದ ತಪ್ಪಿಗೆ ವೃದ್ದ ದಂಪತಿ ಬಲಿಯಾಗುತ್ತಾರೆ. ಆ ಕಾರಣದಿಂದ ಅವರ ವಯಕ್ತಿಕ ಹಾಗೂ ಸಿನಿಮಾ ಜೀವನ ಕೊಂಚ ಏರು ಪೇರು ಅನುಭವಿಸಬೇಕಾಯಿತು ಎಂದು ಹೇಳಬಹುದು. ಇನ್ನೇನು ಟಗರು ಪಲ್ಯ ಬಿಡುಗಡೆ ಸಮಯದಲ್ಲಿ ಇವರಿಗೆ ಇಂತಹ ಪರಿಸ್ಥಿತಿ ಎದುರಾಗಿದ ಕಾರಣದಿಂದ ಸಾಕಷ್ಟು ಮಂದಿ ಇವರನ್ನು ದ್ವೇಷಿಸಲು ಶುರುಮಾಡಿದರು. ಹಾಗಾಗಿ ಟಗರು ಪಲ್ಯ ಅಷ್ಟಾಗಿ ಹೆಚ್ಚಿನ ಸಕ್ಸಸ್ ಪಡೆಯಲಿಲ್ಲ ಎಂದು ಹೇಳಬಹುದು. ಇನ್ನೂ ಈ ಕಾರಣದಿಂದ ಈ ನಟ ಇವರು ಡಿಪ್ರೆಶನ್ ನಲ್ಲಿ ಇದ್ದರು. ಇದೀಗ ಅದೆಲ್ಲದರಿಂದ ಹೊರಬಂದು ತಮ್ಮ ಜೀವನ ಶೈಲಿಯನ್ನು ಮೊದಲಿನಂತೆ ಶುರುಮಾಡಿದ್ದಾರೆ.

ಇನ್ನೂ ಮೊನ್ನೆ ತಮ್ಮ ದೀರ್ಘ ಕಾಲದ ಸ್ನೇಹಿತೆಯಾಗಿದ್ದ ಪೂಜಾ ಪ್ರಕಾಶ್ ಅವರನ್ನು  ಮದುವೆ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಪೂಜಾ ಪ್ರಕಾಶ್ ಅವರು ಚಿತ್ರಕಲೆ ಹಾಗೂ ಗ್ರಾಫಿಕ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಇವರಿಬ್ಬರ ಮದುವೆ ಬೆಳಗಾವಿಯಲ್ಲಿ ನಡೆದಿದೆ. ಇನ್ನೂ ಇವರಿಬ್ಬರ ಮದುವೆಯ ಆಮಂತ್ರಣ ಪತ್ರ ಎಲ್ಲರಿಗಿಂತ ವಿಭಿನ್ನ ಆಗಿದ್ದ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಗೆಯೇ ಫೆಬ್ರವರಿ 2ರಂದು ಅದ್ದೂರಿಯ ಆರತಕ್ಷತೆಯನ್ನು ಮೈಸೂರಿನಲ್ಲಿ ನೆರವೇರಲಿದೆ ಎಂದು ತಿಳಿಸಿದ್ದಾರೆ. ಸ್ನೇಹಿತನ ಮದುವೆಗೆ ನೀನಾಸಂ ಸತೀಶ್, ಡಾಲಿ ಧನಂಜಯ್ ಹಾಗೂ ನವೀನ್ ಶಂಕರ್ ಜೊತೆಗೆ ಇನ್ನಿತರ ಕಲಾವಿದರು ಕೊಡ ಬಂದು ಶುಭ ಹಾರೈಸಿದ್ದಾರೆ. ಧನಂಜಯ್ ಅವರ ಮುಂದಿನ ಜೀವನಕ್ಕೆ ಶುಭವಾಗಲಿ ಎಂದು ನಾವೆಲ್ಲರೂ ಆಶಿಸೋಣ.