ಮನುಷ್ಯನ ನಾಶ ಮಾಡುವ ಈ ಅಭ್ಯಾಸಗಳು ಇದ್ದರೆ ಇಂದೇ ಬಿಟ್ಟು ಬಿಡಿ..! ಇಲ್ಲಾಂದ್ರೆ ಕಷ್ಟ ಆಗುತ್ತೆ

ಮನುಷ್ಯನ ನಾಶ ಮಾಡುವ ಈ ಅಭ್ಯಾಸಗಳು ಇದ್ದರೆ ಇಂದೇ ಬಿಟ್ಟು ಬಿಡಿ..! ಇಲ್ಲಾಂದ್ರೆ ಕಷ್ಟ ಆಗುತ್ತೆ

ಹೌದು ಹಿಂದಿನ ಹಿರಿಕರು ಹೇಳಿದಂತೆ ಮನುಷ್ಯನಿಗೆ ಒಂದು ಅಭ್ಯಾಸ ಇರಬೇಕು, ಅದು ಕೆಟ್ಟ ಅಭ್ಯಾಸ ಆಗಿರಲಿ ಒಳ್ಳೆಯ ಅಭ್ಯಾಸ ಆಗಿರಲಿ ಒಟ್ಟಿನಲ್ಲಿ ಒಂದು ಅಭ್ಯಾಸ ನಿಜಕ್ಕೂ ಇರಲೆಬೇಕು ಎನ್ನುತ್ತಾರೆ. ಹೌದು ಇತ್ತೀಚಿನ ದಿನಕ್ಕೆ ಈ ಮಾತು ತುಂಬಾನೇ ಸ್ಟ್ರಾಂಗ್ ಆಗಿ ಬೆಳೆದಿದೆ.. ಹೆಚ್ಚಾಗಿ ಕೆಟ್ಟ ಅಭ್ಯಾಸಗಳನ್ನೇ ಕೆಲವರು ರೂಡಿಸಿಕೊಂಡಿದ್ದಾರೆ..ಜೀವನದಲ್ಲಿ ಒಳ್ಳೆಯ ಅಭ್ಯಾಸ ಯಾವುವುಗಳು, ಕೆಟ್ಟ ಅಭ್ಯಾಸಗಳು ಹೇಗಿರುತ್ತವೆ,  ಅವುಗಳನ್ನು ನಾವು ಯಾವ ರೀತಿ ನಮ್ಮಲ್ಲಿ ಮೈ ಕೂಡಿಸಿಕೊಂಡಿದ್ದೇವೆ ಎನ್ನುವ ಸಣ್ಣ ಅರಿವು ಕೂಡ ಇಲ್ಲದೆ ನಾಶವಾಗಿ ಹೋಗುತ್ತಿದ್ದಾರೆ.

ಹೌದು ಇಂದಿನ ಈ ಲೇಖನದಲ್ಲಿ ನಾವು ನಿಮಗೆ ತಿಳಿಸ ಹೊರಟಿರುವ ಈ ಕೆಲವು ಕೆಟ್ಟ ಅಭ್ಯಾಸಗಳನ್ನು ತಿಳಿದುಕೊಳ್ಳಿ..ಜೊತೆಗೆ ಇದರಿಂದ ಇವತ್ತೇ ದೂರ ಇರಿ. ಮೊದಲಿಗೆ ತಾಳ್ಮೆ, ಇತ್ತೀಚಿನ ದಿನಕ್ಕೆ ಹೆಚ್ಚಾಗಿ ಯಾರೂ ಕೂಡ ತಾಳ್ಮೆಯಿಂದ ಇರುತ್ತಿಲ್ಲ. ಕೇವಲ 30 ಸೆಕೆಂಡಿಗೆ ಇರುವ ವಿಡಿಯೋ ಹಾ+ಟ್ ಅಥ್ವಾ ಫನ್ನಿ ರಿಲ್ಸ್ ಗಳನ್ನು ನೋಡುತ್ತಾ ತಮ್ಮ ಖುಷಿ ಕ್ಷಣವನ್ನು ಸಂಭ್ರಮಿಸುತ್ತಾರೆ. ಹೆಚ್ಚಾಗಿ ಯಾವ ಕೆಲಸದಲ್ಲಿಯೂ ಹೆಚ್ಚು ಜನರು ತಾಳ್ಮೆ ಹೊಂದಿರುವುದಿಲ್ಲ, ಶ್ರದ್ಧೆ ಇರುವುದಿಲ್ಲ, ಅವರಿಗೆ ಅದು ಖುಷಿ ನೀಡುವುದಿಲ್ಲ ಎಂದಾದರೆ ಅವರು ಅದನ್ನು ತ್ಯಜಿಸಿ ಬಿಡುತ್ತಾರೆ, ಇದು ಕೂಡ ಒಂದು ಕೆಟ್ಟ ಸಮಸ್ಯೆ
ಆಗಿದೆ. ತಾಳ್ಮೆಯನ್ನು ಇಂದೇ ಎಲ್ಲರೂ ಹೆಚ್ಚಾಗಿಯೇ ಮೈಗೂಡಿಸಿಕೊಳ್ಳಿ.  

ಎರಡನೆಯದು ಇನ್ನೊಬ್ಬ ವ್ಯಕ್ತಿಯ ಬಗ್ಗೆ ಅರಿಯದೆ ಅಥವಾ ಅರಿದು ತಪ್ಪಾಗಿ ಜಡ್ಜ್ ಮಾಡುವುದು. ಇದಕ್ಕೆ ಉದಾಹರಣೆ ಬಸ್ಸಿನಲ್ಲಿ ಹೋಗುವಾಗ ಹಿರಿಯ ವಯಸ್ಸಿನವರಿಗೆ ಸೀಟು ಬಿಡದೆ ಕಿವಿಯಲ್ಲಿ ಹೆಡ್ಫೋನ್ ಹಾಕಿಕೊಂಡು ಕುಳಿತು ಹಾಡು ಕೇಳುತ್ತಿರುವ ಒಬ್ಬ ಯಂಗ್ ಯುವಕನನ್ನ ಅಲ್ಲಿರುವವರು ಎಬ್ಬಿಸುತ್ತಾರೆ. ನಂತರ ಅವರಿಗೂ ಗೊತ್ತಾಗುತ್ತದೆ ಆತನಿಗೂ ಒಂದು ಕಾಲು ಇರುವುದಿಲ್ಲ ಎಂದು, ಇದುವೇ ಒಬ್ಬರ ಬಗ್ಗೆ ಗೊತ್ತಿಲ್ಲದೆ ಮಾತನಾಡಬಾರದು ಎನ್ನುವ ಅಂಶ. ಅವರ ಬಗ್ಗೆ ಏನೇನೋ ಅಂದುಕೊಳ್ಳಬಾರದು, ಈ ರೀತಿಯ ಕೆಟ್ಟ ಅಭ್ಯಾಸ ನಿಮ್ಮಲ್ಲಿ ಎಂದಿಗೂ ಇರಲೇಬಾರದು ಎನ್ನುತ್ತದೆ ಸಂಶೋಧನೆ.

ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಜೊತೆ ಎಮೋಷನಲ್ ಅಟ್ಯಾಚ್ಮೆಂಟ್ ಇರಲೆ ಬಾರದು..ಅವರು ನಿಮ್ಮ ರೀತಿ ಇರದೇ ಹೋದರೆ, ನಿಮ್ಮ ಭಾವುಕ ಕ್ಷಣಗಳಿಗೆ ಅವರು ಬೆಲೆ ಕೊಡದೆ ಹೋದರೆ, ಆಗ ನೀವು ಹೆಚ್ಚು ನೊಂದು ಕೊಳ್ಳುತ್ತೀರಿ, ಎಮೋಷನಲ್ ಅಟ್ಯಾಚ್ಮೆಂಟ್ ಇದ್ದರೆ ಹೆಚ್ಚಾಗಿ ನೋವನ್ನು ಅನುಭವಿಸುತ್ತೀರಿ, ಹಾಗಾಗಿ ಇದು ಕೂಡ ಕೆಟ್ಟ ಅಭ್ಯಾಸ ಆಗಿದೆ.. ಹೆಚ್ಚು ಮೊಬೈಲ್ ಬಳಕೆ, ನಿದ್ದೆಯ ವಿಚಾರವಾಗಿ, ಪೋರ್ನ್ ವಿಡಿಯೋಗಳನ್ನು ಹೆಚ್ಚಾಗಿ ನೋಡುವುದರಿಂದ ಮೆದುಳಿನಲ್ಲಿ ಬಿಡುಗಡೆ ಆಗುವ ಡೋಪೋಮೆನ್ ಬಿಡುಗಡೆಯಾಗಿ ಯಾವ ರೀತಿ ಸಮಸ್ಯೆ ತಂದೊದಗುತ್ತದೆ, ಜೊತೆಗೆ ಹಿರಿಯರಿಗೆ ನೀಡದಿರುವ ಗೌರವ, ಮತ್ತು ನಿಮ್ಮ ಕುಟುಂಬದವರ ಜೊತೆ ನೀವು ಕಳೆಯದರಿರುವ ಸಮಯ ನಿಮ್ಮನ್ನು ಯಾವ ರೀತಿ ಕೆಟ್ಟ ಅಭ್ಯಾಸಕ್ಕೆ ತಳ್ಳಿ ಹಾಕುತ್ತದೆ ಎಂದು ತಿಳಿಯಲು ಈ ವಿಡಿಯೋ ನೋಡಿ, ಹಾಗೆ ಸಿಗರೇಟ್ ನ ಅಭ್ಯಾಸ ಇದ್ದವರು ತಪ್ಪದೆ ವಿಡಿಯೋ ವೀಕ್ಷಿಸಿ, ಹಾಗೆ ಈ ವಿಡಿಯೋ ತುಂಬಾನೇ ಇಂಫಾರ್ಮೇಟಿಕ್ ಅಂತ ನಿಮಗೂ ಅನಿಸಿದರೆ, ವಿಡಿಯೋವನ್ನ ಶೇರ್ ಮಾಡಿ ಧನ್ಯವಾದಗಳು...

( video credit : CHARITRE )