ಪವಿತ್ರಕ್ಷೇತ್ರದಲ್ಲಿ ದಂಪತಿಗಳ ರೋಮ್ಯಾನ್ಸ್ ! ನಂತರ ಆದದ್ದೇನು ? ವಿಡಿಯೋ ವೈರಲ್

ಪವಿತ್ರಕ್ಷೇತ್ರದಲ್ಲಿ ದಂಪತಿಗಳ ರೋಮ್ಯಾನ್ಸ್ ! ನಂತರ ಆದದ್ದೇನು ? ವಿಡಿಯೋ ವೈರಲ್

ಅಯೋಧ್ಯೆಯ ಸರಯೂ ನದಿಯ ರಾಮ್‌ ಕಿ ಪೌಡಿ ಘಾಟ್‌ನಲ್ಲಿ ದಂಪತಿಗಳ ಅನುಚಿತ ಘಟನೆ ನಡೆದಿದೆ. ಪುಣ್ಯಕ್ಷೇತ್ರ ಅನ್ನುವುದನ್ನು ಮರೆತು ದಂಪತಿಗಳು ಮಾಡಿದ ರೋಮ್ಯಾನ್ಸ್ ಹಾಗು ತದನಂತರ ಅವರಿಗಾದ ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.ಆದರೆ ಇದು ಆದರೆ ಯಾವಾಗ ನಡೆದಿದೆ ಅನ್ನೋದು ಖಚಿತವಾಗಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಸುತ್ತಲೂ ಭಕ್ತರು ನದಿಯಲ್ಲಿ ತೀರ್ಥಸ್ನಾನ ಮಾಡುತ್ತಿದ್ದರು. ಆದರೆ ತೀರ್ಥಸ್ನಾನಕ್ಕೆಂದು ನದಿಗೆ ಇಳಿದಿದ್ದ ದಂಪತಿ ಮಾತ್ರ ಪುಣ್ಯಕ್ಷೇತ್ರ ಅನ್ನೋದನ್ನೂ ಮರೆತು ನದಿಯಲ್ಲಿ ರೋಮ್ಯಾನ್ಸ್‌ ಆರಂಭಿಸಿದ್ದರು. ದಂಪತಿ ಚುಂಬನ ಶುರುವಿಡುತ್ತಲೇ ಅಲ್ಲಿದ್ದ ಭಕ್ತರು ದಂಪತಿಯನ್ನು ನದಿಯಿಂದ ಹೊರ ಕರೆದೊಯ್ದು ಥಳಿಸಿದ್ದಾರೆ.  

ಪತಿಯ ಮೇಲೆ ಅಲ್ಲಿದ್ದ ಗುಂಪು ಹಲ್ಲೆ ಮಾಡಿರುವುದನ್ನು ಕಂಡ ಪತ್ನಿ ಕಂಗಾಲಾಗಿದ್ದಾಳೆ. ಅಲ್ಲಿದ್ದ ಕೆಲ ಭಕ್ತರು ಘಟನೆಯ ಕುರಿತು ವಿಡಿಯೋ ಚಿತ್ರೀಕರಿಸಿದ್ದು ಸಾಮಾಜಿಕ ಜಾಲತಾಣ ದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ವಿಡಿಯೋ ಸಾಕಷ್ಟು ವೈರಲ್‌ ಆಗಿದ್ದು, ಪರ ವಿರೋಧದ ಚರ್ಚೆ ಆರಂಭವಾಗಿದೆ.

ಘಟನೆಯ ಕುರಿತು ಇದೀಗ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದೊಂದು ನೈತಿಕ ಪೊಲೀಸ್‌ ಗಿರಿ ಅನ್ನೋ ಆರೋಪ ಕೇಳಿಬರುತ್ತಿದೆ. ಆದರೆ ಈ ಕುರಿತು ಯಾವುದೇ ಪಕರಣ ದಾಖಲಾಗಿಲ್ಲ, ಆದರೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದು, ದುಷ್ಕರ್ಮಿಗಳಿಗಾಗಿ ಹುಡುಕಾಟ ಆರಂಭಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಶೈಲೇಶ್‌ ಪಾಂಡೆ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಆದರೆ ಅಯೋಧ್ಯೆಯಲ್ಲಿ ಇಂತಹ ಸಭ್ಯತೆಯನ್ನು ಎಂದಿಗೂ ಸಹಿಸುದಿಲ್ಲ. ನದಿಯಲ್ಲಿ ಸ್ನಾನ ಮಾಡುವಾಗ ಪತ್ನಿಯನ್ನು ಚುಂಬಿಸಿರುವುದು ಸರಿಯಲ್ಲ ಎಂದು  ಹೇಳಿರುವ ಕುರಿತು ಮಾಧ್ಯಮಗಳು ವರದಿ ಮಾಡಿವೆ.