ಈಗ ಕಾಲ ತುಂಬಾ ಕೆಟ್ಟೋಗಿದೆ . ಇದಕ್ಕೆ ಕಲಿ ಗಾಲ ಎನ್ನುವುದು ಕಾಮಕ್ಕೆ ಕಣ್ಣಿಲ್ಲ ಅನ್ನುತ್ತಾರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ .ಮಾವನಿಗೆ ತನ್ನ ಮಗನ ಹೆಂಡಿತಿಯ ಮೇಲೆ ಲವ್ ಆಗಿದೆ
ಭಾರತೀಯ ಸಂಸ್ಕೃತಿಯಲ್ಲಿ ಎಲ್ಲಾ ಸಂಬಂಧಗಳು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿವೆ. ಎಲ್ಲವನ್ನೂ ಪೂಜನೀಯ ಭಾವನೆಯಿಂದಲೇ ನೋಡುವ ಕಾರಣ, ಈ ಸಂಬಂಧಗಳನ್ನು ಆಚರಿಸಲೂ ಕೆಲವು ದಿನಗಳಿವೆ. ತಂದೆ-ತಾಯಿ, ಅಣ್ಣ-ತಂಗಿ, ಅತ್ತೆ-ಸೊಸೆ, ಅಳಿಯ-ಮಗಳು ಹೀಗೆ ಎಲ್ಲಾ ಸಂಬಂಧವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲವೊಬ್ಬರು ಸಂಬಂಧಕ್ಕೆ ಮಹತ್ವ ನೀಡದೆ ಸಂಸ್ಕೃತಿಗೇ ಕಳಂಕ ತರುತ್ತಿದ್ದಾನೆ. ರಾಜಸ್ಥಾನದಲ್ಲೂ ಇಂಥಹದ್ದೇ ಘಟನೆಯೊಂದು ನಡೆದಿದೆ. ಮಾವ ತನ್ನ ಸೊಸೆಯನ್ನೇ ಪ್ರೀತಿಸಿ ಆಕೆಯೊಂದಿಗೆ ಓಡಿ ಹೋಗಿದ್ದಾನೆ.
ಮಾವ ತನ್ನ ಸೊಸೆಯನ್ನೇ ಪ್ರೀತಿಸಿ ಆಕೆಯೊಂದಿಗೆ ಓಡಿಹೋಗಿರುವ ವಿಲಕ್ಷಣ ಘಟನೆ ರಾಜಸ್ಥಾನದ ಬುಂದಿ ಜಿಲ್ಲೆಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಸೊಸೆಯನ್ನು ಪ್ರೀತಿಸಿ ಆಕೆಯೊಂದಿಗೆ ಓಡಿಹೋಗಿದ್ದಾನೆ. ತಂದೆ, ಪತ್ನಿಯೊಂದಿಗೆ ಓಡಿ ಹೋಗಿರುವ ವಿಷಯ ತಿಳಿದ ಮಗ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಮಾತ್ರವಲ್ಲ ತಮ್ಮ ತಂದೆ ಓಡಿಹೋಗುವ ಮುನ್ನ ಬೈಕ್ ಕದ್ದಿದ್ದಾರೆ ಎಂದು ಆರೋಪಿಸಿದ್ದಾನೆ. ಬುಂದಿ ಜಿಲ್ಲೆಯ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿಲೋರ್ ಗ್ರಾಮದಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ..
ಪವನ್ ವೈರಾಗಿ ಎಂಬಾತ ತನ್ನ ತಂದೆ ರಮೇಶ್ ವೈರಾಗಿ ತನ್ನ ಪತ್ನಿ ಯೊಂದಿಗೆ ಓಡಿ ಹೋಗಿರುವುದಾಗಿ ದೂರು ಸಲ್ಲಿಸಿದ್ದಾನೆ. ನನ್ನ ತಂದೆ ಹೆಂಡತಿಯನ್ನು ನನ್ನಿಂದ ದೂರ ಮಾಡಿದ್ದಾರೆ ಎಂದು ಪವನ್ ಆರೋಪಿಸಿದ್ದಾನೆ. ಪವನ್ ಅವರಿಗೆ ಆರು ತಿಂಗಳ ಮಗಳಿದ್ದಾಳೆ. ಈ ಹಿಂದೆಯೂ ತನ್ನ ತಂದೆ ರಮೇಶ್ ನನ್ನ ಹೆಂಡತಿಯೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರು. ಪತ್ನಿ ಅಮಾಯಕಿಯಾಗಿದ್ದು ಆಕೆ ತಂದೆಯಿಂದ ಮೋಸ ಹೋಗಿದ್ದಾಳೆ. ಮಾತ್ರವಲ್ಲ, ದೂರು ದಾಖಲಿಸಿದ ನಂತರ, ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲಎಂದು ಪವನ್ ಆರೋಪಿಸಿದ್ದಾನೆ.