.ಏನು ಕಾಲ ಬಂತಪ್ಪ ಗಂಡನಿಗೆ ಸೋಡಾ ಚೀಟಿ ಕೊಟ್ಟು, ಪ್ರೇಮಿಸಿದ ಯುವತಿಯ ಜೊತೆ ದೇವಸ್ಥಾನದಲ್ಲಿ ಮದುವೆಯಾದ ಹೆಂಡತಿ! ವಿಡಿಯೋ ವೈರಲ್

ಈಗಿನ ಕಾಲದಲ್ಲಿ ಮದುವೆ ಎನ್ನುವುದು ಒಂದು ಸಾಮಾಜಿಕ ಜವಾಬ್ದಾರಿಯಾಗಿ ಉಳಿದಿಲ್ಲ . ಸ್ವಲ್ಪ ಸಣ್ಣ ಕಾರಣಕ್ಕೆ ಆಗಲಿ ಇಲ್ಲ ಎಂತಹ ದೊಡ್ಡ ಕಾರಣಕ್ಕೆ ಆಗಲಿ ಅವರು ವಿವಾಹ ವಿಚ್ಚೇದನ ತೆಗೆದು ಕೊಳ್ಳುತ್ತಾರೆ . ಆದರೆ ಇಲ್ಲೊಬ್ಬ ಯುವತಿ ತನ್ನ ಗಂಡನ ಕಾಟ ತಡೆಯಲಾರದೆ ಅವನಿಗೆ ಡೈವೋರ್ಸ್ ಕೊಟ್ಟು ಸಾಕಪ್ಪ ಗಂಡಸರೇ ಸಹವಾಸ ಅಂತ ಇನ್ನೊಬ್ಬ ಹುಡುಗಿಯನ್ನೇ ಮದುವೆ ಆಗಿದ್ದಾಳೆ . ಏನ್ ಇದು ಸ್ಟೋರಿ ನೋಡಣ ಬನ್ನಿ
ಮಹಿಳೆಯೊಬ್ಬರು ತನ್ನ ಪತಿಗೆ ವಿಚ್ಛೇದನ ನೀಡಿ ತಾನು ಪ್ರೇಮಿಸಿದ ಸ್ನೇಹಿತೆಯನ್ನೇ ವರಿಸಿದ್ದಾಳೆ. ಇಬ್ಬರು ಮಹಿಳೆಯರೂ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗುವ ಮೂಲಕ ಸತಿ ದಂಪತಿಗಳಾಗಿದ್ದಾರೆ.ಪಶ್ಚಿಮ ಬಂಗಾಳದಮೌಸುಮಿ ದತ್ತಾ ಮತ್ತು ಮೌಮಿತಾ ಎಂಬ ಇಬ್ಬರು ಮಹಿಳೆಯರು ಕೆಲ ಸಮಯದಿಂದ ಡೇಟಿಂಗ್ ಮಾಡುತ್ತಿದ್ದರಂತೆ. ಇಬ್ಬರೂ ಈಗ ಮದುವೆಯಾಗಲು ನಿರ್ಧರಿಸಿದರು. ಆದರೆ ಮೌಸುಮಿ ದತ್ತಾ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ! ಇದರೊಂದಿಗೆ ಮೌಮಿತಾ ಮೌಸುಮಿಯ ಮಕ್ಕಳನ್ನು ತನ್ನ ಮಕ್ಕಳನ್ನಾಗಿ ಸ್ವೀಕರಿಸಲು ಒಪ್ಪಿದ್ದಾಳೆ.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮೌಸುಮಿ, ಪತಿ ತನಗೆ ದಿನನಿತ್ಯ ಚಿತ್ರಹಿಂಸೆ ನೀಡುತ್ತಿದ್ದು, ಅದಕ್ಕಾಗಿಯೇ ಪತಿಯಿಂದ ಬೇರ್ಪಟ್ಟಿದ್ದೇನೆ ಎಂದಿದ್ದಾಳೆ.
ಮತ್ತೊಂದೆಡೆ ಮೌಮಿತಾ ಹೇಳಿದ್ದು.. 'ಪ್ರೀತಿ ಇರುವುದು ಗಂಡು ಹೆಣ್ಣಿನ ನಡುವೆ ಮಾತ್ರವೇ? ಇಬ್ಬರು ಮಹಿಳೆಯರು ಅಥವಾ ಇಬ್ಬರು ಪುರುಷರ ನಡುವೆ ಪ್ರೀತಿ ಅರಳಬಹುದು ಮತ್ತು ಅವರು ಒಟ್ಟಿಗೆ ಇರಬಹುದು. ತಾನು ಮೌಸುಮಿಯನ್ನು ಮದುವೆಯಾಗುವುದು ನನ್ನ ಮನೆಯವರಿಗೆ ಇಷ್ಟವಿರಲಿಲ್ಲ, ಆದ್ದರಿಂದ ಅವರು ನಮ್ಮನ್ನು ಮನೆಯೊಳಗೆ ಬಿಡಲಿಲ್ಲ. ನನ್ನ ಜೀವನದುದ್ದಕ್ಕೂ ಅವಳೊಂದಿಗೇ ಇರುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡಿದೆ. ನಾನು ಯಾವುದೇ ಸಂದರ್ಭದಲ್ಲೂ ಮೌಸುಮಿಯನ್ನು ಬಿಟ್ಟು ಹೋಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದೆ.