ವಿವಾಹಿತ ಮಹಿಳೆಯರೇ ದಯವಿಟ್ಟು ಅನೈತಿಕ ಸಂಬಂಧ ಬೆಳೆಸ ಬೇಡಿ ; ಗಂಡನ ಬಿಟ್ಟು ಸೋಷಿಯಲ್ ಮೀಡಿಯಾ ಫ್ರೆಂಡ್ ಹಿಂದೆ ಹೋದ ಸುಂದರಿ ಗತಿ ಏನಾಯ್ತು ನೋಡಿ ?

ವಿವಾಹಿತ ಮಹಿಳೆಯರೇ ದಯವಿಟ್ಟು ಅನೈತಿಕ ಸಂಬಂಧ ಬೆಳೆಸ ಬೇಡಿ ; ಗಂಡನ ಬಿಟ್ಟು ಸೋಷಿಯಲ್ ಮೀಡಿಯಾ ಫ್ರೆಂಡ್ ಹಿಂದೆ ಹೋದ ಸುಂದರಿ ಗತಿ ಏನಾಯ್ತು ನೋಡಿ ?

ಈಗಿನ ಕಾಲದಲ್ಲಿ ಮದುವೆ ಆದ ಕೆಲವು  ಪುರುಷರಾಗಲಿ ಅಥವಾ ಮಹಿಳೆ ಆಗಲಿ  ಅನೈತಿಕ ಸಂಬಂಧ  ಬೆಳೆಸುವುದು ಸಾಮಾನ್ಯ ಆಗಿದೆ . ಆದರೆ ಎಲ್ಲರೂ ಈ ರೀತಿ ಮಾಡುವುದಿಲ್ಲ . ಏಕೆಂದ್ರೆ ಈ ತರ ಸಂಬಂಧಗಳು ಕೊನೆಗೂಳ್ಳುವುದು ದುರಂತದಲ್ಲಿ ಮಾತ್ರ . ಮದುವೆ ಎನ್ನುವುದು ಒಂದು ಸುಂದರ ದಾಂಪತ್ಯ ಜೀವನ . ಒಂದು ಹೆಣ್ಣಿಗೆ ಒಂದು ಗಂಡು ಎನ್ನುವುದು ಭಾರತೀಯ ಸಂಸ್ಕೃತಿಯ ಭಾಗವಾಗಿದೆ . ಆದರೆ ಇದನ್ನು ಬಿಟ್ಟು ಪಾಶ್ಚಿಮಾತ್ಯ ರೀತಿಯಲ್ಲಿ ನಡೆದು ಕೊಂಡರೆ ದುರಂತ ಖಂಡಿತ .
 ಇಲ್ಲಿ  ಗಂಡನ  ಬಿಟ್ಟು ಸೋಷಿಯಲ್ ಮೀಡಿಯಾ ಫ್ರೆಂಡ್ ಹಿಂದೆ ಹೋದ ಸುಂದರಿ ಗತಿ ಏನಾಯ್ತು ನೋಡಿ 
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕೆರೆತಣ್ಣೂರು ಗ್ರಾಮದ‌ ಮಮತ, ಮದುವೆಯಾಗಿದ್ರೂ ಗಂಡನ ಜೊತೆ ವಾಸ ಮಾಡದೆ ಕೆರೆ ತಣ್ಣೂರಿನಲ್ಲೇ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡ್ತಿದ್ಲು, ಯಾವಾಗಲೂ ಮೊಬೈಲ್ ನಲ್ಲೇ ಮುಳುಗಿದ್ದ ಮಮತಾಗೆ ಫೆಸ್ ಬುಕ್ ನಲ್ಲಿ ಈ ಅಸಾಮಿ ಮೋಹನ್ ಕುಮಾರ್ ಪರಿಚಯವಾಗಿದ್ದಾನೆ. ಹಾಸನ ಮೂಲಕ ಈ ಮೋಹನ್ ಗೋವಾದಲ್ಲಿ ಬೇಕರಿ ಇಟ್ಟುಕೊಂಡಿದ್ನಂತೆ,‌ ಮೂರು ವರ್ಷಗಳ ಹಿಂದಷ್ಟೇ ಮಮತ, ಮೋಹನ್ ನಡುವೆ ಸ್ನೇಹ ಬೆಳೆದಿದೆ.  

ಇನ್ನೂ, ಅದಾಗ್ಲೆ ಗಂಡನನ್ನ ಬಿಟ್ಟಿದ್ದ ಮಮತಾಗೆ ಒಂಟಿ ಜೀವನ ಬೇಸತ್ತಿತ್ತು ಅನ್ನಿಸುತ್ತೆ. ಹೀಗಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಜೊತೆಯಾದ ಗೆಳೆಯ ಮೋಹನ್ ಜೊತೆ ಅತಿ ಸಲುಗೆ ಬೆಳೆಸಿಕೊಂಡಳು ಜೊತೆಗೆ ಅನೈತಿಕ ಸಂಬಂಧ ಬೆಳೆದಿತ್ತು. ಈ ಕಾರಣಕ್ಕಾಗಿಯೇ ಈ ಮಮತ ಆಗಾಗ ಪ್ರಿಯಕರ ಇದ್ದ ದೂರದ ಗೋವಾಕ್ಕೆ ಹೋಗಿ ಬರ್ತಾ ಇದ್ಲು. ಗೋವಾ ಅದ್ಯಾಕೋ ದೂರ ಅನಿಸಿರಬೇಕು ಅದಕ್ಕಾಗಿಯೇ ಏನೋ ಗೋವಾದಲ್ಲಿದ್ದ ಮೋಹನ ಕುಮಾರನಿಗೆ ಬ್ಯುಸಿನೆಸ್ ನಲ್ಲಿ ಸಾಥ್ ನೀಡಿ ಸಿದ್ದಲಿಂಗಪುರಕ್ಕೆ ಬೇಕರಿ ಶಿಫ್ಟ್ ಮಾಡಿಸಿದ್ಲು. ಹೀಗಾಗಿಯೇ ಗೋವಾದಲ್ಲಿದ್ದ ಮೋಹನ ಕುಮಾರ ಕಳೆದ ಮೂರು ತಿಂಗಳ ಹಿಂದಷ್ಟೇ ಮೈಸೂರು- ಬೆಂಗಳೂರು ಹೈವೇ ಸಮೀಪವೇ ಶ್ರೀ ರಾಘವೇಂದ್ರ ಬೇಕರಿ ಅಂಡ್ ಸ್ವೀಟ್ಸ್‌ ಹೆಸ್ರಲ್ಲಿ ಬೇಕರಿ ಮಾಡಿದ್ದ. ಈ ಬೇಕರಿ ಮಾಡೋಕೆ ಮಮತ ಕೂಡ ಸುಮಾರು 5 ರಿಂದ 6 ಲಕ್ಷ ರೂಪಾಯಿ ನೀಡಿದ್ಲು ಎನ್ನಲಾಗಿದೆ.

ಸಿದ್ದಲಿಂಪುರದಲ್ಲಿದ್ದ ಬೇಕರಿಗೆ ಬರ್ತಿದ್ದ ಮಮತಳನ್ನ ಸ್ಥಳೀಯರಿಗೆ ಈಕೆ ನನ್ನ ಅಕ್ಕ ಅಂತಾ ಪರಿಚಯ ಮಾಡಿಕೊಟ್ಟಿದ್ದ. ಆಕೆ ಕೂಡ ಪ್ರಿಯತಮನನ್ನ ತಮ್ಮ ತಮ್ಮ ಅಂತಾ ಜನರೆದುರಿಗೆ ಕರಿತಾ ಇದ್ಲು. ಎಂದಿನಂತೆ ಮೇ.24 ಕ್ಕೆ ಬಂದಿದ್ದ ಮಮತ ಜೊತೆ ಬೇಕರಿಯಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಇಬ್ಬರ ನಡುವೆ ಜೋರಾಗಿ ಗಲಾಟೆಯಾಗಿದೆ. ಮಳೆ ಇದ್ದ ಕಾರಣ ಗಿರಾಕಿಗಳು ಕೂಡ ಯಾರೂ ಇರಲಿಲ್ಲ. ಹೀಗಾಗಿ ಗಲಾಟೆ ವಿಕೋಪಕ್ಕೆ ತಿರುಗಿದ್ದು ಕುಪಿತಗೊಂಡಿದ್ದ ಮೋಹನ್ ಕುಮಾರ್ ಬೇಕರಿಯಲ್ಲೇ ಇದ್ದ ರಾಡ್ ನಿಂದ ಮಮತ ತಲೆಗೆ ಬಲವಾಗಿ ಹೊಡೆದಿದ್ದಾನೆ. ಈ ವೇಳೆ ತಲೆಗೆ ಬಲವಾಗಿ ಏಟು ಬಿದ್ದ ಕಾರಣ ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.