ಇದೆಂತ ಸಂಪ್ರದಾಯ ; ವರನ ಬಾಯಿಗೆ ಸಿಗರೇಟ್​ ಇಟ್ಟು ಸ್ವಾಗತಿಸಿದ ಅತ್ತೆ! ಅದಕ್ಕೆ ಬೆಂಕಿ ಹಚ್ಚಿದ ಮಾವ ;ವಿಡಿಯೋ ವೈರಲ್

ಇದೆಂತ ಸಂಪ್ರದಾಯ ; ವರನ ಬಾಯಿಗೆ ಸಿಗರೇಟ್​ ಇಟ್ಟು ಸ್ವಾಗತಿಸಿದ ಅತ್ತೆ!  ಅದಕ್ಕೆ ಬೆಂಕಿ ಹಚ್ಚಿದ ಮಾವ ;ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು. 

ಆದರೆ ನಾವು ನಿಮಗೆ ಈಗ ತೋರಿಸಲಿರುವ ವಿಡಿಯೋ ನೋಡಿದರೆ ನೀವು ಶಾಕ್ ಆಗುತ್ತೀರಾ . ಕಾರಣ ಇಲ್ಲಿದೆ ನೋಡಿ .ಭಾರತದ ಮದುವೆ ಸಂಪ್ರದಾಯಗಳು ಜಗತ್ತಿನಾದ್ಯಂತ ಫೇಮಸ್ ಆಗಿವೆ. ಇಲ್ಲಿನ ಆಚಾರ-ವಿಚಾರ, ಸಂಪ್ರದಾಯಗಳನ್ನು ವಿದೇಶಿಗರು ಸಹ ಇಷ್ಟಪಡುತ್ತಾರೆ. ಆದ್ರೆ  ಗುಜರಾತ್‌ನಲ್ಲಿ ಅತ್ತೆ , ವರನ ಬಾಯಿಗೆ ಸಿಗರೇಟ್​ ಇಟ್ಟು ಸ್ವಾಗತಿಸಿದ್ದು, ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.. 

ಆದರೆ ಭಾರತದಲ್ಲೂ ಮದುವೆ ನಡೆಸುವುದರಲ್ಲಿ ಒಂದೊಂದು ಕಡೆಯಲ್ಲೂ ಒಂದೊಂದು ರೀತಿಯ ಆಚರಣೆ ಇರುತ್ತದೆ. ಕೆಲವೊಂದು ಸರಳ ಎನಿಸಿದರೆ, ಇನ್ನೊಂದಿಷ್ಟು ವಿಚಿತ್ರ ಎನಿಸದೇ ಇರದು. ಗುಜರಾತ್‌ನಲ್ಲಿ ನಡೆಯುವ ಇಂಥಹದ್ದೊಂದು ಮದುವೆ ಸಂಸ್ಕೃತಿ ಭಾರತೀಯ ಸಂಪ್ರದಾಯಕ್ಕೆ  ಕಪ್ಪು ಚುಕ್ಕೆಯಂತಿದೆ. ಗುಜರಾತ್‌ನಲ್ಲಿ ನಡೆಯುವ ಮದುವೆ ಸಂಪ್ರದಾಯದಲ್ಲಿ ವರನನ್ನುಅತ್ತೆ ಸಿಗರೇಟ್ ಮತ್ತು ಪಾನ್‌ನೊಂದಿಗೆ ಸ್ವಾಗತಿಸುವುದನ್ನು ನೋಡಬಹುದು. ಈ ವೀಡಿಯೋ ಸದ್ಯ ಎಲ್ಲೆಡೆ ವೈರಲ್ ಆಗ್ತಿದೆ.

ವಿಡಿಯೋದಲ್ಲಿ ವರ ಸೋಫಾ ಮೇಲೆ ಕುಳಿತಿರುತ್ತಾನೆ. ಈ ವೇಳೆ ಅತ್ತೆ ವರನ ಬಾಯಿಗೆ ಸಿಗರೇಟ್​​​ ಇಡುತ್ತಾರೆ. ಬಳಿಕ ಮಾವ ಬೆಂಕಿ ಕಡ್ಡಿಯಿಂದ ಸಿಗರೇಟ್​ ಹಚ್ಚತ್ತಾರೆ. ಆದರೆ, ವರ ಸಿಗರೇಟ್​ ಸೇದುವುದಿಲ್ಲ. ಬದಲಾಗಿ ಅದನ್ನು ವಾಪಸ್​ ತೆಗೆದು ಮಾವನ ಕೈಯಲ್ಲೇ ಕೊಡುತ್ತಾನೆ. ಬಳಿಕ ಸಂಪ್ರದಾಯದಂತೆ ವರನು ಇಬ್ಬರಿಗೂ ಸ್ವಲ್ಪ ಹಣವನ್ನು ಹಸ್ತಾಂತರಿಸುತ್ತಾನೆ. ಇದೀಗ ಈ ವೀಡಿಯೋ ವೈರಲ್ ಆಗಿದ್ದು, ಸಂಪ್ರದಾಯದ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಇಂತಹ ಸಂಪ್ರದಾಯ ಈ ಹಿಂದೆ ಚಾಲ್ತಿಯಲ್ಲಿತ್ತು ಎಂದು ಕೆಲವರು ವಾದಿಸಿದರೆ, ಇನ್ನು ಕೆಲವರು ಇಂತಹ ಆಚರಣೆ ಈ ಕೂಡಲೇ ನಿಲ್ಲಿಸಿ ಎಂದಿದ್ದಾರೆ. ಹಿಂದೂ ಮದುವೆಯಲ್ಲಿ ಇಂತಹ ಸಂಪ್ರದಾಯ ಎಷ್ಟು ಸರಿ ನೀವೇ ಹೇಳಿ 

 

 
 
 
 
 
 
 
 
 
 
 
 
 
 
 

A post shared by Joohi K Patel (@joohiie)