ಮುದುಕನ ಬಳಿ ತಾಳಿ ಕಟ್ಟಿಸಿಕೊಂಡ ಬ್ಯೂಟಿಯನ್ನು ನೋಡಿ ಸಿಂಗಲ್ ಹುಡುಗರ ಗೋಳಾಟ ತಪ್ಪು ಮಾಹಿತಿ ಹಂಚುತ್ತಿರುವ ಟ್ರೋಲಿಗರಿಗೆ ಬುದ್ಧಿ ಹೇಳಿದ ನೆಟ್ಟಿಗರು ;ವೈರಲ್ ವೀಡಿಯೋ

ಸುಮಾರು 24 ವರ್ಷದ ಹುಡುಗಿಯನ್ನು ಅಂದಾಜು 70 ವರ್ಷದ ಮುದುಕ ಮದುವೆಯಾಗಿರುವುದು. ಈ ಘಟನೆ ಎಲ್ಲಿ ನಡೆದಿದೆಯೋ ಗೊತ್ತಿಲ್ಲ. ಆದರೆ, ಮುದುಕ ಯುವತಿಗೆ ತಾಳಿ ಕಟ್ಟುತ್ತಿರುವ ವೀಡಿಯೋ ವೈರಲ್ ಆಗಿದೆ. ಮನೆಯವರೆಲ್ಲರೂ ಈ ಮದುವೆಯಲ್ಲಿ ಪಾಲ್ಗೊಂಡಿದ್ದು, ಈ ವೀಡಿಯೋವನ್ನು ಟ್ರೋಲ್ ಮಾಡಲಾಗಿದೆ. ಸಿಂಗಲ್ ಬಾಯ್ಸ್ ಎಲ್ಲಾ ಮಠ ಸೇರಿಕೊಳ್ಳಬೇಕು ಎಂದು ಟ್ರೋಲ್ ಮಾಡಲಾಗಿದೆ. ಯುವತಿ ನೋಡಲು ಸುಂದರವಾಗಿದ್ದು, ಮುದುಕನ ಕೈಯಲ್ಲಿ ತಾಳಿ ಕಟ್ಟಿಸಿಕೊಂಡಿರುವುದಕ್ಕೆ ಟ್ರೋಲಿಗರು ವೀಡಿಯೋವನ್ನು ವೈರಲ್ ಮಾಡಿದ್ದಾರೆ. 

ಆದರೆ, ಈ ವೀಡಿಯೋವನ್ನು ನೋಡಿದ ನೆಟ್ಟಿಗರು ಗರಂ ಆಗಿದ್ದಾರೆ. ಅದು ಸೋದರಮಾವ ತಂದೆ ಸ್ಥಾನದಲ್ಲಿ ನಿಂತು ಕಾಯ್ತೀನಿ ಅನ್ನೋದರ ಧೋತಕವಾಗಿ ತಾಳಿ ಪೂಜೆ ಮಾಡುವ ಸಂಪ್ರದಾಯ. ಕೆಟ್ಟ ಕಮೆಂಟ್ ಮಾಡ್ಬೇಡಿ. ಪೋಸ್ಟ್ ಮಾಡೋರು ವಿಚಾರ ತಿಳಿದು ಪೋಸ್ಟ್ ಮಾಡಿ ಫೇಮಸ್ ಆಗೋ ಹುಚ್ಚಲ್ಲಿ ಯಾಕೆ ತಪ್ಪು ತಪ್ಪಾಗಿ ಹೇಳ್ತೀರಾ? ಕಣ್ಣು ಬಿಟ್ಟು ನೋಡಿ ಒಂದೊಂದು ಕಡೆ ಒಂದೊಂದು ಆಚಾರ ಇರುತ್ತೆ. ಕೆಲವು ಕಡೆ ತವರು ಮನೆ ತಾಳಿ ಶಾಸ್ತ್ರ ಅಂತ ಇರುತ್ತೆ. ಅದನ್ನು ಅಪ್ಪ, ಅಮ್ಮ, ಸೋದರ ಮಾವ ಯಾರಾದರೂ ಒಬ್ಬರು ಕಟ್ಟುತ್ತಾರೆ. ಸರಿಯಾಗಿ ತಿಳಿದು ವಿಡಿಯೋ ಅಪ್ಲೋಡ್ ಮಾಡಿ ಎಂದು ಕಮೆಂಟ್‌ ಮಾಡುತ್ತಿದ್ದಾರೆ.    

ಹುಡುಗಿಗೆ ತಾಳಿ ಕಟ್ಟಿರುವುದು ಅವರ ಸೋದರ ಮಾವ. ವೀಡಿಯೋವನ್ನು ಪೂರ್ತಿ ನೋಡಿದರೆ, ಕೊನೆಯಲ್ಲಿ ಹುಡುಗ ಕಾಣಿಸುತ್ತಾನೆ. ಇದನ್ನು ಗಮನವಿಟ್ಟು ನೋಡಿ ನಂತರ ಟ್ರೋಲ್‌ ಮಾಡಬೇಕಿತ್ತು. ಆದರೆ, ಯಾವುದೋ ಒಂದು ವೀಡಿಯೋ ಎಂದು ಟ್ರೋಲ್‌ ಮಾಡುವುದು ತಪ್ಪು. ಇದು ಭಾರತೀಯರಲ್ಲಿ ಕೆಲವರು ಪಾಲಿಸುವ ಸಂಪ್ರದಾಯ. ಹೀಗೆಲ್ಲಾ ಟ್ರೋಲ್‌ ಮಾಡಿದಾಗ ಕೆಲವರ ವಯಕ್ತಿಕ ಜೀವನಕ್ಕೆ ತೊಂದರೆಯಾಗುತ್ತದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಟ್ರೋಲ್‌ ಮಾಡುವಾಗ ಎಚ್ಚರಿಸುವುದು ಒಳ್ಳೆಯದು.

 

 

ಅದು ಸೋದರಮಾವ ತಂದೆ ಸ್ಥಾನದಲ್ಲಿ ನಿಂತು ಕಾಯ್ತೀನಿ ಅನ್ನೋದರ ಧೋತಕವಾಗಿ ತಾಳಿ ಪೂಜೆ ಮಾಡುವ ಸಂಪ್ರದಾಯ.ಬ್ಯಾಡ್ ಕಮೆಂಟ್ ಮಾಡ್ಬೇಡಿ.