ಒಳ್ಳೆ ಹುಡುಗ ಪ್ರಥಮ್ ಬಾಯಲ್ಲಿ ಇಂಥಾ ಮಾತುಗಳು..!! ವಿಡಿಯೋ ವೈರಲ್

ಒಳ್ಳೆ ಹುಡುಗ ಪ್ರಥಮ್ ಬಾಯಲ್ಲಿ ಇಂಥಾ ಮಾತುಗಳು..!! ವಿಡಿಯೋ ವೈರಲ್

ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ಈಗ ನಟನಷ್ಟೇ ಅಲ್ಲ. ನಿರ್ದೇಶಕನೂ ಆಗಿದ್ದಾರೆ. ನಟ ಭಯಂಕರ ಎಂಬ ಚಿತ್ರವನ್ನು ನಿರ್ದೇಶಿಸಿದ್ದು, ನಟಿಸಿದ್ದಾರೆ ಕೂಡ. ಈ ಓಂ ಪ್ರಕಾಶ್ ರಾವ್, ಕುರಿ ಪ್ರತಾಪ್, ಮಜಾ ಟಾಕೀಸ್ ಪವನ್, ಬಿರಾದಾರ ಹಾಗೂ ರಾಕ್ ಲೈನ್ ಸುಧಾಕರ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಚಿತ್ರವನ್ನು ಕಳೆದ ಶುಕ್ರವಾರವೇ ಥಿಯೇಟರ್ ಗಳಲ್ಲಿ ರಿಲೀಸ್ ಮಾಡಲಾಯ್ತು. ಆದರೆ, ಚಿತ್ರ ಓಡಿಲ್ಲ ಎಂಬ ಕಾರಣಕ್ಕೆ ಪ್ರಥಮ್ ಬೇಸರ ಮಾಡಿಕೊಂಡಿದ್ದಾರೆ. 

ಈ ಬಗ್ಗೆ ಫೇಸ್ಬುಕ್ ಲೈವ್ ಬಂದು ಅಭಿಮಾನಿಗಳಲ್ಲಿ ರಿಕ್ವೆಸ್ಟ್ ಮಾಡಿಕೊಂಡಿದ್ದರು. ಕಷ್ಟಪಟ್ಟು ಚಿತ್ರವನ್ನು ಮಾಡಿದ್ದೇನೆ. ಎಲ್ಲರೂ ಥಿಯೇಟರ್ ಗೆ ಬಂದು ಚಿತ್ರವನ್ನು ನೋಡಿ. ಮೊದಲು ಟ್ರೈಲರ್ ನೋಡಿ ಇಷ್ಟವಾದರೆ ಸಿನಿಮಾ ನೋಡಲು ಥಿಯೇಟರ್ ಗೆ ಬನ್ನಿ. ಇಲ್ಲವಾದರೆ, ಈಗಾಗಲೇ ಸಿನಿಮಾ ನೋಡಿದವರ ಬಳಿ ವಿಚಾರಿಸಿ ನಂತರ ಚಿತ್ರ ನೋಡಿ ಎಂದು ಕೇಳಿಕೊಂಡಿದ್ದರು. ಆದರೆ ಇದೀಗ ಸಂದರ್ಶನ ಒಂದರಲ್ಲಿ ಮಾತನಾಡಿರುವ ಪ್ರಥಮ್ ಅವರು ಕನ್ನಡ ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ.   

ನಟ ಭಯಂಕರ ಸಿನಿಮಾ ಬಗ್ಗೆ ಎಲ್ಲರೂ ಏನೇನೋ ಮಾತನಾಡುತ್ತಿದ್ದಾರೆ. ಕಟ್ಷದಿಂದ ಸಿನಿಮಾ ಮಾಡಿದ್ದೇನೆ. ಆದರೆ, ಯಾರ್ಯಾರಿಂದಲೋ ಸೋಲುವಂತಾಗಿದೆ ಎಂದು ಕೆಟ್ಟ ಪದಗಳನ್ನು ಬಳಸಿದ್ದಾರೆ. ಚಿತ್ರ ರಂಗವಷ್ಟೇ ಅಲ್ಲದೇ, ಚಿತ್ರ ಪ್ರೇಮಿಗಳಿಗೆ, ಕರ್ನಾಟಕದ ಜನತೆ ಬಗ್ಗೆಯೂ ಏನೇನೋ ಹೇಳಿದ್ದಾರೆ. ಇದರಿಂದ ಟ್ರೋಲಿಗರು ಈ ವೀಡಿಯೋವನ್ನು ಟ್ರೋಲ್ ಮಾಡಿದ್ದಾರೆ. ಚಿತ್ರರಂಗದ ಬಗ್ಗೆ, ರಾಜ್ಯದ ಜನತೆ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಸಿಕ್ಕು ನಿನಗೆ ಎಂದು ಕೋಪ ತೋರಿಸಿದ್ದಾರೆ. ಈ ವೀಡಿಯೋ ಈಗ ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ.