ಅಶ್ವಿನಿ ಅವರ ಜೊತೆಗೆ ಇದ್ದ ಅಪ್ಪುಗೆ ಕೊನೆ ಗಳಿಗೆಯಲ್ಲಿ ಆಗಿದ್ದೇನು..? ಇಲ್ಲಿದೆ ವಿಡಿಯೋ

ಕರ್ನಾಟಕದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಾಗಿ ಕಾಣಿಸಿಕೊಂಡಿದ್ದ ನಟ ಅಪ್ಪು ಅವರು ಇದೀಗ ಇಲ್ಲವಾಗಿದ್ದಾರೆ. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಕೇವಲ ದೈಹಿಕವಾಗಿ ಮಾತ್ರ ಅಪ್ಪು ನಮ್ಮ ಜೊತೆಗಿಲ್ಲ, ಆಂತರಿಕವಾಗಿ ಸದಾ ಎಲ್ಲರ ಜೊತೆಗೆ ಪ್ರತಿ ನಿಮಿಷ ಇದ್ದಾರೆ. ಹೌದು ಒಬ್ಬ ಸ್ಟಾರ್ ನಟನಾಗಲಿ, ಒಬ್ಬ ರಾಜಕಾರಣಿ ಆಗಲಿ, ಸದಾ ಒಳ್ಳೆಯ ಕೆಲಸಗಳ ಮಾಡಿದರೂ ಕೂಡ, ಅವ್ರು ನಮ್ಮಿಂದ ದೂರವಾಗಿ ಪ್ರಾಣ ಬಿಟ್ಟರೆ, ಸುಮಾರು ಆರು ತಿಂಗಳು, ಅಬ್ಬಬ್ಬ ಅಂದ್ರೆ ಒಂದು ವರ್ಷ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯ. ಅವರ ಬಗ್ಗೆ ಮಾತನಾಡಲು ಸಾಧ್ಯ.
ಆದರೆ ಅಪ್ಪು ಹಾಗಲ್ಲ, ಅಪ್ಪು ಅಗಲಿಕೆ ಆದರೂ ಕೂಡ ಇಂದಿಗೂ ಅವರು ಎಲ್ಲರ ನೆನಪಿನಲಿ ಇದ್ದಾರೆ. ಅವರು ನಮ್ಮನ್ನೆಲ್ಲ ದೈಹಿಕವಾಗಿ ಅಗಲಿ ಇಂದಿಗೆ ಎರಡು ವರ್ಷ ಕಳೆದಿದೆ ಗೆಳೆಯರೇ, ಇಂದಿಗೂ ಪ್ರತಿದಿನ ಅವರ ಎಲ್ಲಾ ಅಭಿಮಾನಿಗಳು, ಇಡೀ ಕರ್ನಾಟಕದ ಜನತೆ, ಹಾಗೆ ನಮ್ಮ ಕನ್ನಡಿಗರು ಸದಾ ಅವರನ್ನ ಪೂಜಿಸುತ್ತಲೆ ಮತ್ತು ಗೌರವಿಸುತ್ತಲೆ ಹೋಗುತ್ತಿದ್ದಾರೆ. ಅವರ ಆದರ್ಶ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಜೀವನ ನಡೆಸುತ್ತಾ ಇದ್ದಾರೆ..ಜೊತೆಗೆ ಅಪ್ಪು ದೇವರೇ ಎಂದು ನಾವು ಹೇಳಬಹುದು.. ಅಷ್ಟರಮಟ್ಟಿಗೆ ನಟನ ರಂಗದಲ್ಲಿ ಮಾತ್ರವಲ್ಲದೆ, ಒಬ್ಬ ಮನುಷ್ಯ ಹೇಗೆ ಬದುಕಬೇಕು ಹೇಗೆ ಸಾರ್ಥಕತೆಯ ಬದುಕು ತಮ್ಮದಾಗಿಸಿಕೊಳ್ಳಬೇಕು ಎನ್ನುವುದಾಗಿ ತೋರಿಸಿ ಕೊಟ್ಟಿರುವ ನಮ್ಮ ಪುನೀತ್ ರಾಜ್ ಕುಮಾರ್, ಅವರೇ ನಮ್ಮ ಮಹಾತ್ಮ ಅಪ್ಪು.
ಹೌದು ಅಪ್ಪು ಅವರಿಗೆ 2021 ಅಕ್ಟೋಬರ್ 29 ನೇ ತಾರೀಕು ಬೆಳಗ್ಗೆ ಅಸಲಿಗೆ ಆಗಿದ್ದೇನು..? ಇನ್ನೊಮ್ಮೆ ಆ ವಿಷಯವನ್ನು ನೋಡಿಕೊಂಡು ಬರೋಣ..ಅಂದು ಅಶ್ವಿನಿ ಅವರ ತೊಡೆಯ ಮೇಲೆ ಅಪ್ಪು ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ರಮಣ ಆಸ್ಪತ್ರೆಯಿಂದ ವಿಕ್ರಮ ಆಸ್ಪತ್ರೆ ಹೋಗುವ ವೇಳೆ ನಡೆದ ವಿಚಾರ ಇದೀಗ ಈ ವಿಡಿಯೋದಲ್ಲಿ ಇನ್ನೊಮ್ಮೆ ತೋರಿಸಲಾಗಿದೆ..ಅವರ ಅಗಲಿಕೆ ಎಂದಿಗೂ ಕೂಡ ಮಾಸದಂತ ಒಂದು ಅತಿ ದೊಡ್ಡ ನೋವು ಎನ್ನಬಹುದು.ಈ ವಿಡಿಯೋ ನೋಡಿ. ವಿಡಿಯೋ ಶೇರ್ ಮಾಡಿ ಧನ್ಯವಾದಗಳು.. ( video credit : third eye )