ಮುದುಕರು ಹುಚ್ಚೆದ್ದು ಕುಣಿಯುವಂತೆ ಮಾಡಿದ ಡಾನ್ಸ್ ಇಲ್ಲಿದೆ ನೋಡಿ; ವೈರಲ್ ವೀಡಿಯೊ

ಸ್ಯಾಂಡಲ್ ವುಡ್ ನ ಸಾಕಷ್ಟು ನಟಿಯರು ಫಿಟ್ನೆಸ್ ಫ್ರಿಕ್ ಗಳೇ! ಅದರಲ್ಲೂ ಈಗೀಗಂತೂ ಹೆಚ್ಚಾಗಿ ಜಿಮ್, ಡಯಟ್ ಕಡೆ ಮುಖ ಮಾಡಿದ್ದಾರೆ. ಸಿನಿಮಾಗಳಲ್ಲಿಯೂ ಅಷ್ಟೇ, ತೆಳ್ಳಗೆ ಮೈಮಾಟ ಹೊಂದಿದ್ದರೆ ಹೆಚ್ಚೆಚ್ಚು ಅವಕಾಶಗಳೂ ಕೂಡ ಸಿಗುತ್ತವೆ. ತಮಗೆ ತಾವೇ ಅವಕಾಶಗಳನ್ನು ಸೃಷ್ಟಿಸಿಕೊಂಡ ಸ್ಯಾಂಡಲ್ ವುಡ್ ನಟಿಯರಲ್ಲಿ ರಾಧಿಕಾ ಕುಮಾರ ಸ್ವಾಮಿ ಕೂಡ ಒಬ್ಬರು. ತಮ ಮೊದಲನೇಯ ಚಿತ್ರದಿಂದ ಇವತ್ತಿನವರೆಗೂ ರಾಧಿಕಾ ಕುಮಾರಸ್ವಾಮಿಯವರ ಬೇಡಿಕೆಯಾಗಲೀ, ಚಾರ್ಮ್ ಆಗಲಿ ಒಂಚೂರೂ ಕಡಿಮೆಆಗಲೇ ಇಲ್ಲ.

ಹೌದು, ಕನ್ನಡ ಸ್ಟಾರ್ ನಟಿಯರಲ್ಲಿ ರಾಧಿಕಾ ಕುಮಾರಸ್ವಾಮಿ ಇಂದಿಗೂ ಮುಂಚೂಣಿಯಲ್ಲಿರುವ ನಟಿ, ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೇ ಇದ್ದರೂ ಸಿನಿಮಾ ನಿರ್ಮಾಣದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸದಾ ಕಾರ್ಯಪ್ರವೃತರಾಗಿರುತ್ತಾರೆ. ಇನ್ನು ರಾಧಿಕಾ ಕುಮಾರಸ್ವಾಮಿ ಮದುವೆಯಾಗಿ ಕೆಲವು ವರ್ಷಗಳೇ ಕಳೆದವು. ಇವರಿಗೆ ಒಬ್ಬ ಮುದ್ದಾದ ಮಗಳೂ ಇದ್ದಾಳೆ.  

ಇನ್ನು ರಾಧಿಕಾ ಕುಮಾರಸ್ವಾಮಿ ಅತ್ಯುತ್ತಮ ಡ್ಯಾನ್ಸರ್ ಕೂಡ ಹೌದು. ಇತ್ತೀಚಿಗೆ ಬೆಲ್ಲಿ ಡ್ಯಾನ್ಸ್ ಮಾಡುವುದರ ಮೂಲಕವೂ ಅಭಿಮಾನಿಗಳನ್ನು ರಂಜಿಸಿದ್ದಾರೆ. ರಾಧಿಕಾ ಅವರು ಈ ಹಿಂದೆ, ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ನೃತ್ಯ ಮಾಡಿದ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ರಾಧಿಕಾ ಕುಮಾರ ಸ್ವಾಮಿ ಗುಲಾಬಿ ಬಣ್ಣದ ಸೀರೆಯುಟ್ಟು ನೃತ್ಯ ಮಾಡುತ್ತಿದ್ದರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದರು. ನಟಿ ರಾಧಿಕಾ ಹೀಗೆ ಸೊಂಟ ಬಳುಕಿಸುತ್ತಿದ್ದರೆ ಯುವಕರ ನಿದ್ದೆಗೆಡೋದು ಪಕ್ಕಾ