ದೇವಸ್ಥಾನದಲ್ಲಿ ರಾಧಿಕಾ ಕುಮಾರಸ್ವಾಮಿ ಮತ್ತು ರಾಧಿಕಾ ಕ್ಯೂಟ್ವ ವಿಡಿಯೋ ವೈರಲ್

ಆಕೆ ಬೇರೆ ಯಾರು ಅಲ್ಲ ಅಭಿಮಾನಿಗಳ ಪ್ರೀತಿಯ ಸ್ವೀಟಿ ಅಗಿರುವ ರಾಧಿಕಾ ಕುಮಾರಸ್ವಾಮಿಯವರು.   ನವೆಂಬರ್ 12 1986 ರಂದು ದೇವರಾಜ್ ಹಾಗೂ ಸುರೇಖಾ ದಂಪತಿಗಳಿಗೆ ಮಂಗಳೂರಿನಲ್ಲಿ ಜನಿಸಿದ ರಾಧಿಕಾ ಬಾಲ್ಯದಿಂದಲೂ ಕೂಡ ನೃತ್ಯದ ಮೇಲೆ ಅಪಾರ ಆಸಕ್ತಿಯನ್ನು ಹೊಂದಿರುತ್ತಾರೆ.   ಇದೇ ಕಾರಣದಿಂದಾಗಿ ಡ್ಯಾನ್ಸ್ ತರಬೇತಿಗೂ ಸಹ ಸೇರಿಕೊಂಡ ರಅವರು ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದ ಸಮಯದಲ್ಲಿ

ನೀಲ ಮೇಘ ಶ್ಯಾಮ ಎಂಬ ಸಿನಿಮಾದಲ್ಲಿ ಅಭಿನಯಿಸುವುದರ ಮೂಲಕವಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತ ಎಂದೇ ಖ್ಯಾತಿ ಪಡೆದಿದ್ದು ವಿಜಯ್ ರಾಘವೇಂದ್ರ ರವರ ಅಭಿನಯದ ನಿನಗಾಗಿ ಎಂಬ ಸಿನಿಮಾದಲ್ಲಿ ಪರಿಪೂರ್ಣ ನಾಯಕಿಯಾಗಿ ಕಾಣಿಸಿಕೊಳ್ಳುವ ರಾಧಿಕಾ ಚಿತ್ರರಂಗದಲ್ಲಿ ಅಪಾರ ಪ್ರಶಂಸೆಯನ್ನು ಗಿಟ್ಟಿಸಿಕೊಳ್ಳುತ್ತಾರೆ. ಈ  ಸಿನಿಮಾದ ನಂತರ ಹುಡುಗಿಗಾಗಿ ಮಣಿ ಮನೆ ಮಗಳು ಹಾಗೂ ತಾಯಿ ಇಲ್ಲದ ತಬ್ಬಲಿ ಎಂಬ ಸಿನಿಮಾದಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳುತ್ತಾರೆ.

ಇನ್ನು ನಟಿ ರಾಧಿಕಾ ಕುಮಾರಸ್ವಾಮಿ ಯವರು   ತಾಯಿ ಇಲ್ಲದ ತಬ್ಬಲಿ ಸಿನಿಮಾದಲ್ಲಿ ಗೌರಿ ಎಂಬ ಪಾತ್ರಕ್ಕಾಗಿ ಕನ್ನಡ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಸಹ ಮುಡಿಗೇರಿಸಿಕೊಂಡಿದ್ದು ನಂತರ ದಿನಗಳಲ್ಲಿ ಸಾಲು ಸಾಲು ಫ್ಲಾಪ್ ಚಿತ್ರಗಳನ್ನು ನೀಡುವ ಮೂಲಕ ಚಿತ್ರರಂಗದಲ್ಲಿ ಸೋಲಿನ ಸುಳಿಯಲ್ಲಿ ಬಿದ್ದ ಅವರು ಬಳಿಕ ತಮಿಳು  ತೆಲುಗು ಚಿತ್ರರಂಗದಲ್ಲೂ ಸಹ ಅಭಿನಯಿಸಲು ಪ್ರಾರಂಭಿಸಿ ಅಲ್ಲಿಯೂ ತಮ್ಮ ಅದೃಷ್ಟ ಪರೀಕ್ಷೆ ನೋಡುತ್ತಾರೆ.  ತಮಿಳು ಚಿತ್ರರಂಗದ ಬಹಳ ಖ್ಯಾತಿ ಹಾಗೂ ಜನಪ್ರಿಯತೆ ಗಳಿಸಿದ ಅವರು  ಟಾಲಿವುಡ್ ನಲ್ಲಿ ಕುಟ್ಟಿ ರಾಧಿಕಾ ಎಂದೇ ಜನಪ್ರಯತೆ ಕಂಡುಕೊಳ್ಳುತ್ತಾರೆ.

 

ಸದ್ಯ ಈಗ ಯಾವುದೇ ವಿವಾದಕ್ಕೂ ಕೂಡ ಸಿಲುಕಿಕೊಳ್ಳದ ರಾಧಿಕಾ ತಮ್ಮ ಪಾಡಿಗೆ ತಾವಿದ್ದಾರೆ. ಈ ನಡುವೆ ಸಂಸ್ಥೆಯ ಜಾಲತಾಣದಲ್ಲಿ ವೈರಲ್ ಆಗಿದ್ದು  ರಾಧಿಕಾ ಕುಮಾರಸ್ವಾಮಿಯವರು ತಮ್ಮ ಪತಿ ಹಾಗೂ ಮಗಳ ಜೊತೆ ಕಳೆದ ಕೆಲವು ಅಪರೂಪದ ದೃಶ್ಯಗಳನ್ನು ಈ ವೀಡಿಯೊದಲ್ಲಿ ತಾವು ನೋಡಬಹುದು.