ನಟ ರಮೇಶ್ ಅವರ ಎರಡು ಡಿವೋರ್ಸ್ ಕಥೆ ನಿಮಗೆ ಗೊತ್ತಾ..? ಇಲ್ಲಿದೆ ನೋಡಿ ಅಸಲಿ ವಿಡಿಯೋ

ನಟ ರಮೇಶ್ ಅವರ ಎರಡು ಡಿವೋರ್ಸ್ ಕಥೆ ನಿಮಗೆ ಗೊತ್ತಾ..? ಇಲ್ಲಿದೆ ನೋಡಿ ಅಸಲಿ ವಿಡಿಯೋ

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಎಂದು ತಮ್ಮನ್ನು ತಾವು ಹೆಚ್ಚು ಗುರುತಿಸಿಕೊಂಡಿರುವ ರಮೇಶ್ ಅರವಿಂದ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ನಟ ರಮೇಶ್ ಅರವಿಂದ್ ಅವರು ಅವರದ್ದೇ ಆದ ಅಭಿನಯದಿಂದ ಅಪಾರ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದಾರೆ. ಈಗಲೂ ಚಿರ ಯುವಕನ ಹಾಗೆ ಕಾಣುವ ರಮೇಶ್ ಅವರ ಪೆರ್ಸನಾಲಿಟಿ ಬಗ್ಗೆ ಎರಡು ಮಾತಿಲ್ಲ. ಕನ್ನಡ ಚಿತ್ರರಂಗದಲ್ಲಿ ಹಿಟ್ ಮೇಲೆ ಹಿಟ್ ಸಿನಿಮಾ ನೀಡಿ ಶ್ರೇಷ್ಠ ನಟ ಎಂದೆನಿಸಿಕೊಂಡಿದ್ದಾರೆ. ನಟ ರಮೇಶ್ ಅರವಿಂದ್ ಅವರು ಈಗಾಗಲೇ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೂಲಕ ಎಲ್ಲರಿಗೂ ಹತ್ತಿರ ಆಗಿದ್ದು, ಕನ್ನಡಿಗರ ಪಾಲಿನ ಚಾಣಾಕ್ಷ ನಿರೂಪಕರಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಬಹುದು.

ರಮೇಶ್ ಅವರು ಮಾತನಾಡುವ ಶೈಲಿಗೆ ಎಲ್ಲರೂ ಕೂಡ ಫಿದಾ ಆಗಿದ್ದಾರೆ, ಅಷ್ಟರ ಮಟ್ಟಕ್ಕೆ ರಮೇಶ್ ಅರವಿಂದ್ ಅವರ ಮಾತುಗಳು ಮನಸ್ಸನ್ನು ನಾಟುತ್ತವೆ. ಹೌದು ನಟ ರಮೇಶ್ ಅರವಿಂದ್ ಅವರ ಮತ್ತೊಂದು ವಿಡಿಯೋ ಇದೀಗ ವೈರಲ್ ಆಗುತ್ತಿದೆ. ರಮೇಶ್ ಅರವಿಂದ್ ಅವರು ಹೇಳುವ ಹಾಗೆ, 'ನನಗೆ ಇಬ್ಬರು ಗೆಳೆಯರು ಇದ್ದರು. ಒಬ್ಬ ದೊಡ್ಡ ಬಿಸಿನೆಸ್ ಮ್ಯಾನ್, ಇನ್ನೊಬ್ಬ ಖ್ಯಾತ ಸ್ಟಾರ್ ನಟ. ಇವರಿಬ್ಬರಿಗೂ ಡಿವೋರ್ಸ್ ಆಗಿದೆ, ಇವರು ಹೇಳುತ್ತಾರಂತೆ, ಮೊದಲಿಗೆ ಬಿಸಿನೆಸ್ ಮ್ಯಾನ್, ನನ್ನ ಬಳಿ ಎಲ್ಲ ಇದೆ, ಹಣ ಇದೆ, ಕೆಲಸ ಮಾಡುವವರು ಸಹ ಇದ್ದಾರೆ. ಆದರೆ ನನ್ನ ನೆಮ್ಮದಿಗಾಗಿ ನಾನು ಮನೆಗೆ ಹೋದಾಗ, ತಕ್ಷಣ ನನ್ನನ್ನು ಮಾತನಾಡಿಸುವವರು, ಜೊತೆಗೆ ಕುಳಿತುಕೊಂಡು ಊಟ ಮಾಡುವವರು ಯಾರು ಇಲ್ಲ. ನನ್ನದು ಎನ್ನಲು ಒಂದು ಕುಟುಂಬ ಇಲ್ಲ, ಮನಸ್ಸಿಗೆ ನೆಮ್ಮದಿಯೇ ಇಲ್ಲ ಎಂದು ಹೇಳುತ್ತಾರಂತೆ.

ಇನ್ನೊಬ್ಬರು ಸ್ಟಾರ್ ನಟ 'ನನ್ನನ್ನು ಅವಳು ಸರಿಯಾಗಿ ಅರ್ಥಮಾಡಿಕೊಂಡಿಲ್ಲ, ಅವಳು ಹೋದರೆ ಹೋಗಲಿ ನನ್ನ ಜೊತೆ ಅಭಿಮಾನಿಗಳು ಇದ್ದಾರೆ ದುಡ್ಡು ಇದೆ, ನನ್ನ ಚಿತ್ರಗಳು ಯಶಸ್ಸು ಆಗುತ್ತಿವೆ, ಇದಕ್ಕಿಂತ ಹೆಸರು ಇನ್ನೊಂದು ಬೇಕಾ' ಎಂದು ಹೇಳುತ್ತಾರಂತೆ. ಆದರೆ ಇವೆರಡರಲ್ಲಿ ನಾವು ಒಂದು ಅರ್ಥಮಾಡಿಕೊಳ್ಳುವ ವಿಚಾರವನ್ನ ನಾವು ಈಗ ರಮೇಶ್ ಅವರಿಂದ ತಿಳಿದುಕೊಳ್ಳಲೇಬೇಕು. ಕೇವಲ ಜೀವನದಲ್ಲಿ ಯಶಸ್ಸು ಎಂದರೆ ದುಡ್ಡು ಮಾತ್ರ ಎಂದು ಸಾಕಷ್ಟು ಜನರು ಅಂದುಕೊಂಡಿದ್ದಾರೆ. ಅದು ಅಲ್ಲ ಎನ್ನುವ ರಮೇಶ್ ಅವರು ಬದಲಿಗೆ ನೆಮ್ಮದಿ ಎಂದು ಕೆಲ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ರಮೇಶ್ ಅವರು ಸಣ್ಣವರಿದ್ದಾಗ ಅವರ ತಂದೆಯವರು ಹೇಳಿಕೊಟ್ಟ ಕೆಲ ಜೀವನದ ಮಾರ್ಗ ಎಷ್ಟು ಸೊಗಸಾಗಿದೆ ನೋಡಿ.

ಅದೊಂದು ಇದ್ದರೆ ಜೀವನದಲ್ಲಿ ಎಲ್ಲವನ್ನು ಸಾಧಿಸಲಿಕ್ಕೆ ಸಾಧ್ಯ, ಜೊತೆಗೆ ನೆಮ್ಮದಿಯಿಂದ ಜೀವನ ಮಾಡಬಹುದು ಎಂದಿದ್ದಾರೆ ರಮೇಶ್ ಅರವಿಂದ್. ಇಲ್ಲಿದೆ ನೋಡಿ ನಟ ರಮೇಶ್ ಅರವಿಂದ್ ಅವರು ಹೇಳಿದ ಕಥೆಯ ವಿಡಿಯೋ. ಈ ವಿಡಿಯೋವನ್ನು ಪೂರ್ತಿಯಾಗಿ ತಪ್ಪದೆ ನೋಡಿ. ಹಾಗೆ ಯಾರೂ ಮಿಸ್ ಮಾಡಿಕೊಳ್ಳಲೇಬೇಡಿ ಈ ವಿಡಿಯೋವನ್ನ. ಇದು ಇಷ್ಟವಾದಲ್ಲಿ ಶೇರ್ ಮಾಡಿ, ಮತ್ತು ತಪ್ಪದೆ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...