ತನ್ನ ದೇಹ ಸಿರಿ ಪ್ರದರ್ಶಿಸಿದ ರಶ್ಮಿಕಾ ಮಂದಣ್ಣ :ಇದೊಂದು ಕಮ್ಮಿ ಇತ್ತು ಇವಳಿಗೆ ಎಂದ ನೆಟ್ಟಿಗರು : ವೈರಲ್ ವಿಡಿಯೋ

ತನ್ನ ದೇಹ ಸಿರಿ ಪ್ರದರ್ಶಿಸಿದ ರಶ್ಮಿಕಾ ಮಂದಣ್ಣ :ಇದೊಂದು ಕಮ್ಮಿ ಇತ್ತು ಇವಳಿಗೆ ಎಂದ ನೆಟ್ಟಿಗರು : ವೈರಲ್ ವಿಡಿಯೋ

​ಈಗಾಗಲೇ ಕನ್ನಡ, ತೆಲುಗು, ತಮಿಳಿನಲ್ಲಿ ದೊಡ್ಡ ಯಶಸ್ಸು ಕಂಡಿರುವ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಗೂ ಹಾರಿದ್ದಾರೆ. ಮಲೆನಾಡ ಕುವರಿ, ಚಂದನವನದಿಂದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ತೆರೆ ಮೇಲೆ ಬಂದ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್. ಕಳೆದ ಐದು ವರ್ಷದಲ್ಲಿ ಈಗಾಗಲೇ ಕನ್ನಡ, ತೆಲುಗಿನಲ್ಲಿ ದೊಡ್ಡ ಯಶಸ್ಸು ಕಂಡಿದ್ದಾರೆ. ಇಡೀ ದಕ್ಷಿಣ ಭಾರತದಲ್ಲಿ ಲೀಡಿಂಗ್ ನಲ್ಲಿರೋ ನಾಯಕಿ ಎಂದರೆ ಅದು ರಶ್ಮಿಕಾ ಮಂದಣ್ಣ. ಈಗ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲವೂ ಚಿನ್ನವೇ. ಈಗ ಸ್ಯಾಂಡಲ್ ವುಡ್, ಬಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಸೌತ್ ನ ಅನೇಕ ಸ್ಟಾರ್ ಹೀರೋಗಳ ಜೊತೆಗೆ ರಶ್ಮಿಕಾ ಅವರು ನಟಿಸಿದ್ದಾರೆ.

ಇದೀಗ ಬಾಲಿವುಡ್ ನಲ್ಲಿಯೂ ತನ್ನ ಛಾಪನ್ನು ಮೂಡಿಸಿರುವ ರಶ್ಮಿಕಾ, ಇತ್ತೀಚೆಗಷ್ಟೇ ಅವರ ನಟನೆಯ ವಾರಿಸು ಸಿನಿಮಾ ತೆರೆ ಮೇಲೆ ಅಪ್ಪಳಿಸಿದೆ. ವಾರಿಸು ಸಿನಿಮಾದಲ್ಲಿ ರಂಜಿತಮೆ ಹಾಡಿನ ಸ್ಟೆಪ್ ಗಳು ಈಗ ಹಿಟ್ ಆಗಿವೆ. ರಶ್ಮಿಕಾ ಡ್ಯಾನ್ಸ್ ಗೆ ಎಲ್ಲರೂ ಫಿದಾ ಆಗಿದ್ದಾರೆ. ರಶ್ಮಿಕಾ ಅವರು ಈಗ ತಮ್ಮ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಕಿರಿಕ್ ಕೀರ್ತಿ, ಚಲೋ, ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್, ಪೊಗರು, ಪುಷ್ಪಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಇದೀಗ, ವಿಜಯ್ ಅವರ ಜೊತೆಗೆ ತೆರೆ ಹಂಚಿಕೊಂಡಿದ್ದು, ಹಾಡಿನ ವೀಡಿಯೋ ಈಗ ವೈರಲ್ ಆಗಿದೆ.  

ನಟಿ ರಶ್ಮಿಕಾ ಮಂದಣ್ಣ ಸದಾ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲಾ ಒಂದು ವಿಚಾರಕ್ಕೆ ಸದ್ದು ಮಾಡುತ್ತಲೇ ಇರುತ್ತಾರೆ. ಜಾಹಿರಾತುಗಳಲ್ಲಿ ರಶ್ಮಿಕಾರದ್ದೇ ಮೇಲುಗೈಯಾಗಿದೆ. ಹತ್ತು ಹಲವು ಆಡ್ ಗಳಲ್ಲಿ ರಶ್ಮಿಕಾ ಮಿಂಚುತ್ತಿದ್ದಾರೆ. ವಾರಿಸು ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಸಕ್ಸಸ್ ಕಂಡಿರುವ ಸಿನಿಮಾ ಮೇಲೆ ರಶ್ಮಿಕಾ ಮುನಿಸಿಕೊಂಡಿದ್ದಾರೆ ಆದರೂ, ಅಭಿಮಾನಿಗಳು ನಿತ್ಯ ಹತ್ತಾರು ಸಲ ರಂಜಿತಮೆ ಹಾಡನ್ನು ನೋಡುತ್ತಿದ್ದಾರೆ. ಎಲ್ಲರ ಸ್ಟೇಟಸ್‌ ಗಳಲ್ಲೂ ರಶ್ಮಿಕಾ ಫೋಟೋ, ವೀಡಿಯೋಗಳೇ ಹೆಚ್ಚಾಗಿವೆ.