ವೀಕೆಂಡ್ ವಿತ್ ರಮೇಶ್ ಸೀಸನ್-5 ನಲ್ಲಿ ರಶ್ಮಿಕಾ ಮಂದಣ್ಣ ಯಾವಾಗ ಬರುತ್ತಾರೆ ನೋಡಿ ?

ಎವರ್ ಗ್ರೀನ್ ಸ್ಟಾರ್ ರಮೇಶ್ ಅರವಿಂದ್ ಅವರ ನಡೆಸಿಕೊಡುತ್ತಿದ್ದ ಎಲ್ಲರ ನೆಚ್ಚಿನ ಶೋ ಅಂದರೆ ಅದು ವೀಕೆಂಡ್ ವಿತ್ ರಮೇಶ್. ಈ ಕಾರ್ಯಕ್ರಮವನ್ನು ನೋಡಲು ಎಲ್ಲರೂ ತುಂಬಾ ಕಾತುರದಿಂದ ಕಾಯುತ್ತಿದ್ದರು. ಪ್ರತೀ ಎಪಿಸೋಡ್ ಕೂಡ ರೆಡ್ ಸೀಟ್ ಮೇಲೆ ಯಾವ ಸಾಧಕ-ಸಾಧಕಿ ಈ ವಾರ ಕೂರುತ್ತಾರೆ ಅನ್ನೋ ಕುತೂಹಲದಿಂದ ಕೂಡಿರುತ್ತದೆ. ಇಷ್ಟು ಫೇಮಸ್ ಆಗಿರು ಶೋ ಕಳೆದೆರಡು ವರ್ಷದಿಂದ ತೆರೆಮೇಲೆ ಕಾಣದೆ ಜನ ಬೇಸರ ಪಟ್ಟುಕೊಂಡಿದ್ದರು. ಆದರೆ ಇದೀಗ ವೀಕೆಂಡ್ ವಿತ್ ರಮೇಶ್ ಸೀಸನ್ 5 ಶುರುವಾಗಿದೆ. ಈಗಾಗಲೇ ಇಬ್ಬರು ಸಾಧಕರೂ ಬಂದಿದ್ದಾರೆ.
ಈಗಾಗಲೇ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಸುಧಾಮೂರ್ತಿ ದಂಪತಿಗಳು, ಶ್ರೀಮುರಳಿ, ವಿನಯಾ ಪ್ರಸಾದ್, ಟೈಗರ್ ಅಶೋಕ್, ಶಂಕರ್ ಬಿದರಿ ಸೇರಿದಂತೆ 84 ಸಾಧಕರು ರೆಡ್ ಸೀಟ್ ಅನ್ನು ಅಲಂಕರಿಸಿದ್ದರು. ಈ ಸೀಸನ್ 5ರಲ್ಲಿ ನೂರು ಸಾಧಕರನ್ನು ಕಂಪ್ಲೀಟ್ ಮಾಡಲಿದೆ ವೇದಿಕೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ನಟಿ ರಮ್ಯಾ ಅವರನ್ನು ಕರೆಸಲೇಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡಿದ್ದರಿಂದ ಕರೆಸಲಾಯ್ತು. ಬಳಿಕ ರಮ್ಯಾ ಅವರು ಕನ್ನಡದಲ್ಲಿ ಮಾತನಾಡುವುದು ಬಿಟ್ಟು ಇಂಣಗ್ಲೀಷ್ ನಲ್ಲಿ ಮಾತನಾಡಿದರು ಎಂದು ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿತ್ತು.
ಆದರೆ ಈಗ ಪುನಃ ನೆಟ್ಟಿಗರು ಮತ್ತೊಬ್ಬ ನಟಿಯನ್ನು ಕರೆಸಲು ಬೇಡಿಕೆ ಇಟ್ಟಿದ್ದಾರೆ. ಅದು ಬೇರೆ ಯಾರೂ ಅಲ್ಲ. ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಕರೆಸುವಂತೆ ಒತ್ತಾಯಿಸುತ್ತಿದ್ದಾರೆ. ಕಿರಿಕ್ ರಾಣಿಯ ಜೀವನದ ಬಗ್ಗೆ ತಿಳಿಯಬೇಕು. ಅವರ ಬದುಕಿನ ಸಾಧನೆಯ ಹಾದಿಯನ್ನು ಕೇಳಬೇಕು ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಗಳ ಈ ಬೇಡಿಕೆಯನ್ನು ಜೀ ಕನ್ನಡ ವಾಹಿನಿ ತನ್ನ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಕರೆಸುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.