ಅಯ್ಯೋ ,ರಶ್ಮಿಕಾಗೆ ಬೇಕಿತ್ತಾ ಇದೆಲ್ಲಾ, ತುಂಡು ಬ-ಟ್ಟೆ ತೊಟ್ಟಾಗ ಆದ ಪಜೀತಿ ನೋಡಿ; ವೈರಲ್ ವೀಡಿಯೊ

ಅಯ್ಯೋ ,ರಶ್ಮಿಕಾಗೆ ಬೇಕಿತ್ತಾ ಇದೆಲ್ಲಾ, ತುಂಡು ಬ-ಟ್ಟೆ ತೊಟ್ಟಾಗ ಆದ ಪಜೀತಿ ನೋಡಿ; ವೈರಲ್ ವೀಡಿಯೊ

ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ರಶ್ಮಿಕ ಮಂದಣ್ಣ ಮೊದಲಿಗೆ ಕನ್ನಡ ಚಿತ್ರರಂಗದಿಂದ ಸಿನಿ ಕೆರಿಯರ್ ಆರಂಭಿಸಿ ಈಗ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಕನ್ನಡದ ಬೆಡಗಿ ರಶ್ಮಿಕಾ ಎಲ್ಲೆಡೆ ಇಷ್ಟು ಜನಪ್ರಿಯತೆ ನಮಗೆಲ್ಲ ಹೆಮ್ಮೆ. ಆಗಾಗ ಕೆಲವು ವಿಚಾರಗಳಿಂದ ಸುದ್ದಿಯಾಗುತ್ತಾರೆ ರಶ್ಮಿಕಾ ಮಂದಣ್ಣ.2016ರ ಅಂತ್ಯದಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ನಂತರ ಕನ್ನಡದಲ್ಲಿ ಗಣೇಶ್ ಅವರ ಜೊತೆ ಚಮಕ್ ಸಿನಿಮಾದಲ್ಲಿ ನಟಿಸಿಜ್ ಟಾಲಿವುಡ್ ಗೆ ಹಾರಿದರು.

ಕನ್ನಡದಲ್ಲಿ ಅಂಜನಿಪುತ್ರ, ಯಜಮಾನ ಮತ್ತು ಪೊಗರು ಸಿನಿಮಾದಲ್ಲಿ ನಟಿಸಿದ ರಶ್ಮಿಕಾ, ತೆಲುಗಿನಲ್ಲಿ ಚಲೋ, ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್, ಸರಿಲೇರು ನೀಕೇವ್ವರು, ಭೀಷ್ಮ ಸಿನಿಮಾಗಳಲ್ಲಿ ನಟಿಸಿದರು. ಸುಲ್ತಾನ್ ಸಿನಿಮಾ ಮೂಲಕ ಕಾಲಿವುಡ್ ಗು ಎಂಟ್ರಿ ಕೊಟ್ಟಿದ್ದಾರೆ ರಶ್ಮಿಕಾ. ಬಾಲಿವುಡ್ ಗೆ ಟಾಪ್ ಟಕರ್ ಹಾಡಿನ ಮೂಲಕ ಎಂಟ್ರಿ ಕೊಟ್ಟು, ಈಗ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಷನ್ ಮಜ್ನು ಸಿನಿಮಾ ಮತ್ತು ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಜೊತೆಯಲ್ಲಿ ಗುಡ್ ಬೈ ಸಿನಿಮಾದಲ್ಲಿ ನಟಿಸಿದ್ದಾರೆ.  

ಇತ್ತೀಚೆಗೆ ರಶ್ಮಿಕಾ ಅವರು ಬಾಲಿವುಡ್ ನ ಒಂದು ಫ್ಯಾಷನ್ ಶೋನಲ್ಲಿ ಸಹ ಕಾಣಿಸಿಕೊಂಡರು. ಈ ಶೋನಲ್ಲಿ ಕೆಂಪು ಬಣ್ಣದ ಡಿಸೈನರ್ ತುಂಡುಡುಗೆ ಧರಿಸಿ ಬಂದಿದ್ದರು ರಶ್ಮಿಕಾ ಮಂದಣ್ಣ. ಈ ಡ್ರೆಸ್ ಎಲ್ಲರ ಕಣ್ಣುಕುಕ್ಕುವ ಹಾಗೆ ಇದ್ದಿದ್ದಂತೂ ನಿಜ. ಶಾರ್ಟ್ ಡ್ರೆಸ್ ನಲ್ಲಿ ರಾಂಪ್ ವಾಕ್ ಮಾಡಿದ ರಶ್ಮಿಕಾ ಸ್ಟೈಲ್ ಗೆ ಅಲ್ಲಿ ನೆರೆದಿದ್ದವರು ಹಾಗೂ ಬಾಲಿವುಡ್ ಅಭಿಮಾನಿಗಳು ಫಿದಾ ಆಗಿದ್ದರು. ಅಲ್ಲಿದ್ದ ಜನ ರಶ್ಮಿಕಾ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದಿದ್ದಂತೂ ನಿಜ. ರಶ್ಮಿಕಾ ಜೊತೆಗೆ ಸೆಲ್ಫಿಗಾಗಿ ನೂಕಾಟ ತಳ್ಳಾಟ ಸಹ ನಡೆದಿತ್ತು..

ಈ ಸಮಯದಲ್ಲಿ ತುಂಡುಡುಗೆ ಧರಿಸಿ ಅಭಿಮಾನಿಗಳ ನೂಕಾಟದಲ್ಲಿ ರಶ್ಮಿಕಾ ಅವರಿಗೆ ಇರಿಸು ಮುರಿಸಾದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಜೊತೆಗೆ ನೆಟ್ಟಿಗರು ಸಹ ಈ ರೀತಿಯ ತುಂಡು ಬಟ್ಟೆ ಧರಿಸಿದ್ದಕ್ಕೆ, ರಶ್ಮಿಕಾ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಈ ರೀತಿ ಬಟ್ಟೆಯ ವಿಚಾರದಲ್ಲಿ ರಶ್ಮಿಕಾ ಅವರು ಆಗಾಗ ಟ್ರೋಲ್ ಆಗುವುದನ್ನು ನೋಡಿರುತ್ತೇವೆ, ಇದೀಗ ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ.