ಮಗನ ಪುಣ್ಯ ತಿಥಿಯಲ್ಲಿ ಬಡವರಿಗೆ 40 ಸೈಟ್ ಕೊಟ್ಟ ದಂಪತಿ..! ಇದು ಬೇಕು ಎಲ್ಲರಲ್ಲೂ

ಮಗನ ಪುಣ್ಯ ತಿಥಿಯಲ್ಲಿ ಬಡವರಿಗೆ 40 ಸೈಟ್ ಕೊಟ್ಟ ದಂಪತಿ..! ಇದು ಬೇಕು ಎಲ್ಲರಲ್ಲೂ

ಹೌದು ಜೀವನದಲ್ಲಿ ಏನೂ ಇಲ್ಲ ಜೀವನದಲ್ಲಿ ಒಂದಲ್ಲ ಒಂದು ದಿನ ಎಲ್ಲರೂ ಸಾಯಲೇಬೇಕು, ಸಾಯುವುದರ ಒಳಗೆ ಜೀವನವನ್ನು ಯಾವ ರೀತಿ ಮಾಡಬೇಕು, ಯಾವ ರೀತಿ ಇನ್ನೊಬ್ಬರಿಗೆ ಸ್ಪೂರ್ತಿದಾಯಕ ಆಗಿ ನಮ್ಮ ಹೆಸರು ಕೊನೆಯವರೆಗೂ ಉಳಿಯಬೇಕು ಎಂಬುದಾಗಿ ಇತ್ತೀಚಿನ ದಿನಕ್ಕೆ ನಾವು ಎಲ್ಲವನ್ನು ತಿಳಿದುಕೊಂಡಿದ್ದೇವೆ. ಹೌದು ಅದೇ ಸಾಲಿನಲ್ಲಿ ಇಲ್ಲೊಂದು ದಂಪತಿ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಒಂದು ಮಹತ್ತರ ಕಾರ್ಯ ಕೈಗೊಂಡಿದ್ದು ನಿಜಕ್ಕೂ ಎಲ್ಲರೂ ಮೆಚ್ಚುವಂತಾಗಿದೆ...ಹೌದು ಲಕ್ಷ್ಮೇಶ್ವರದ ಸೂರಣಗಿ ಗ್ರಾಮದ ದಂಪತಿಗಳಾದ ದ್ಯಾಮಣ್ಣ ನೀರಲಗಿ ಮತ್ತು ಜ್ಯೋತಿ ಎನ್ನುವವರು ಇದೀಗ ಈ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದಾರೆ..ಹೌದು ಈ ದಂಪತಿಗೆ ಒಬ್ಬ ಜೀವನ್ ಎನ್ನುವ ಮಗನಿದ್ದನು. ಆತ ಬದುಕಿದ್ದು ಕೇವಲ 6 ವರೆ ವರ್ಷ.

ಈ ಮಗುವಿನ ಆಸ್ಪತ್ರೆ ಚಿಕಿತ್ಸೆಗೆ ಮೂರುವರೆ ಎಕರೆ ಹೊಲ ಮಾರಿಕೊಂಡ ಈ ದಂಪತಿ 15 ಲಕ್ಷ ಖರ್ಚು ಮಾಡಿದರೂ ತಮ್ಮ ಮಗ ಉಳಿಯಲಿಲ್ಲ. ವಿಧಿ ಹಣೆಬರಹವೂ ಯಾರ ಕೈಯಲ್ಲೂ ಇಲ್ಲ ಎಂಬುದಾಗಿ ಈ ಮೂಲಕ ಹೇಳಬಹುದು. ಇದೀಗ ಡದ್ಯಾಮಣ್ಣ ಮತ್ತು ಜ್ಯೋತಿ ಅವರ ಮಗನಾದ ಜೀವನ್ ಸ್ಮರಣಾರ್ಥ ಪುಣ್ಯ ತಿಥಿ. ಮಗನ ಕೇಳಿಕೊಂಡು ಮೂರು ವರ್ಷ ಆಗಿದೆ.. ಹೀಗಿರುವಾಗ ಈ ದಂಪತಿಗಳು ಬೇರೆ ಮಗುವ ದತ್ತು ಪಡೆಯಬೇಕು  ಎಂದುಕೊಂಡಿದ್ದರು. ಆದರೆ ಅದು ಆಗಿದ್ದೆ ಆದ್ರೆ ಅದು ಕೇವಲ ಒಬ್ಬರಿಗೆ ಮಾತ್ರ ಮೀಸಲಾಗುತ್ತದೆ ಎನ್ನುವ ಅಂಶ ತೆಲೆಯಲ್ಲಿ ಇಟ್ಟುಕೊಂಡು ಅವರದೇ ಆದ ಎರಡು ಎಕರೆ ಭೂಮಿಯಲ್ಲಿ 40 ನಿವೇಶನ ಕಲ್ಪಿಸುವುದಾಗಿ ಹೇಳಿದ್ದಾರೆ.ಹೌದು, ಸೂರಣಗಿ ಗ್ರಾಮದ ಕಡುಬಡವರರಿರುವ 40 ಜನರಿಗೆ ಸೈಟ್ ನೀಡುತ್ತಿರುವುದು ವಿಶೇಷ.

ಮೂರು ಅಂಗವಿಕಲರಿಗೆ ಒಂದು ಮಹಿಳಾ ಸಂಘದವರಿಗೆ ಇನ್ನೊಂದು, ಯುವಕ ಮಂಡಳಿ ಅವರಿಗೆ ಮತ್ತೊಂದು, ಗ್ರಾಮ ಪಂಚಾಯಿತಿಗೂ ಒಂದೂ, ಅಂಗನವಾಡಿಯನ್ನು ಸಹ ಇದೇ ಜಾಗದಲ್ಲಿ ತಯಾರು ಮಾಡಲು ಊರಿನ ಹಿರಿಯರ ಅನುಮತಿ ಪಡೆದು, ಅವರಿಂದ ಅವರ ಜೊತೆ ಚರ್ಚೆ ನಡೆಸಿ, ನಾವು ಈ ರೀತಿ ಕೆಲಸವ ಮಾಡುತ್ತಿದ್ದೇವೆ ನಮ್ಮದೇ ಆದ ಊರಿನ 40 ಜನ ಬಡವರನ್ನು ನಮಗೆ ಒಂದು ಲಿಸ್ಟ್ ಮಾಡಿಕೊಡಿ, ಅವರಿಗೆ ಸೈಟ್ ಕೊಡುತ್ತೇವೆ ಎಂದು ಮುಂದೆ ಬಂದಿದ್ದಾರೆ...ಹೌದು ಈ ದಂಪತಿಯ ಕೆಲಸಕ್ಕೆ ಇದೀಗ ರಾಜ್ಯದಲ್ಲೆಡೆ ಒಳ್ಳೆಯ ಪ್ರಶಂಸೆ ಸಿಗುತ್ತಿದೆ. ಜೀವನದಲ್ಲಿ ಏನೂ ಇಲ್ಲ ಸತ್ತಾಗ ಎಲ್ಲವನ್ನು ಇಲ್ಲೇ ಬಿಟ್ಟು ಹೋಗುತ್ತೇವೆ, ಆದರೆ ನಾವು ಸತ್ತ ಮೇಲೂ ನಮ್ಮ ಹೆಸರು ಇರಬೇಕೆಂದರೆ ಇಂತಹ ಕೆಲಸಗಳು ಇನ್ನೂ ಕೂಡ ಹೆಚ್ಚೆಚ್ಚು  ಆಗಬೇಕು, ಸ್ವಾರ್ಥದ ಜೀವನವನ್ನು ಬಿಡಬೇಕು ಎನ್ನುವ ಅಂಶ ಇದರಲ್ಲಿ ಗೊತ್ತಾಗುತ್ತದೆ..

ಹೌದು ದ್ಯಾಮಣ್ಣ ಹಾಗೂ ಜ್ಯೋತಿ ಅವರ ಪುತ್ರ ಹುಟ್ಟಿದಾಗ ತುಂಬಾ ಚೆನ್ನಾಗಿ ಇದ್ದನಂತೆ, ನಂತರದಲ್ಲಿ ಪುಟ್ಟ ಬಾಲಕನ ಹೊಟ್ಟೆಯಲ್ಲಿ ಗಡ್ಡೆ ಇರುವುದಾಗಿ ತಿಳಿದು ಬಂದಿದೆ, ಇದನ್ನ ಹೇಗೋ ಮಾಡಿ ಈ ದಂಪತಿಗಳು ಬಗೆಹರಿಸಿಕೊಂಡಿದ್ದಾರೆ. ಚಿಕಿತ್ಸೆ ಕೊಡಿಸಿ ಮಗನನ್ನು ಸಾವಿನಿಂದ ಪಾರು ಮಾಡಿದ್ದಾರೆ. ಆದರೆ ನಂತರದಲ್ಲಿ ಆಡುವಾಗ ತಲೆಗೆ ಜೋರಾದ ಪೆಟ್ಟು ಬಿದ್ದು ಬ್ರೈನ್ ಅಸ್ವಸ್ಥಗೊಂಡ ಕಾರಣಕ್ಕಾಗಿ ಇವರ ಮಗ ಉಳಿಯಲಿಲ್ಲವೆಂದು ತಿಳಿದುಬಂದಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ದಂಪತಿಯ ಕೆಲಸಕ್ಕೆ ನಿಮ್ಮದು ಒಂದು ಮೆಚ್ಚುಗೆ ಹೇಳಿ, ಧನ್ಯವಾದಗಳು..