ಹೆಣ್ಣು ಮಕ್ಕಳ ಫೊಟೋ ಬಳಸಿಕೊಂಡು ನಕಲಿ ಪ್ರೊಫೈಲ್​ ಮೂಲಕ ದಂಧೆ ಮಾಡುತ್ತಿದ್ದ ಖ್ಯಾತ ಸ್ಯಾಂಡಲ್​ವುಡ್ ನಟ ಅರೆಸ್ಟ್ : ಯಾರದು ನೋಡಿ

ಈಗಿನ ಕಾಲದಲ್ಲಿ ದುಡ್ಡು ಮಾಡುವದಕ್ಕೆ ನಟರು ಮತ್ತು ನಟಿಯರು ಎಂತಹ ಕೆಲಸಕ್ಕೆ ಸಹ ಮುಂದಾಗುತ್ತಾರೆ .ಒಟ್ಟಿನಲ್ಲಿ ಅವರಿಗೆ ಮಜಾ ಮಾಡುವದಕ್ಕೆ ದುಡ್ಡು ಬೇಕು ಅಷ್ಟೇ . ದುಡ್ಡಿನ ಹಿಂದೆ ಬಿದ್ದ ಈ ನಟನ ಕಥೆ ಏನ್ ಆಗಿದೆ ನೋಡಣ್ಣ ಬನ್ನಿ. ಆ ನಟ ಯಾರು ಮತ್ತು ಯಾವ ಚಿತ್ರದಲ್ಲಿ ನಾಯಕ ನಾಗಿ ನಟಿಸಿದ್ದ ನೋಡಿ . 

ಸೈಕೋಲಾಜಿ ಸಂಬಂಧಪಟ್ಟಂತಹ ಚಿತ್ರದಲ್ಲಿ ನಟಿಸಿದ್ದ ನಾಯಕ ನಟ ಮಂಜುನಾಥ್ ನ್ಯೂರಾನ್ ಎಂಬ ಚಿತ್ರದಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮನಸು ಗೆದ್ದಿದ್ದರು. ನ್ಯೂರಾನ್ ಎಂಬ ಸೈಕೋಲಾಜಿ ಚಿತ್ರದಲ್ಲಿ ನಾಯಕನಾಗಿದ್ದ ಮಂಜುನಾಥ್ ಯುವ ಎಂಬ ಹೆಸರಿನಲ್ಲಿ ಇಂಟ್ರೊಡ್ಯೂಸ್ ಆಗಿದ್ದರು  ಯುವ ಎಂದು ಹೆಸರಿಟ್ಟುಕೊಂಡು ಚಿತ್ರರಂಗಕ್ಕೆ ಪ್ರವೇಶ ನೀಡಿದ್ದ ಮಂಜುನಾಥ್ ಅಥವಾ ಸಂಜು ಲೊಕ್ಯಾಂಟೋದಲ್ಲಿ ಹುಡುಗಿಯರ ಫೋಟೋ ಬಳಸಿ ಗ್ರಾಹಕರನ್ನ ಸೆಳೆದು ಸುಲಿಗೆ ಮಾಡುವುದನ್ನೇ ಫುಲ್ ಟೈಂ ಕೆಲಸ ಮಾಡಿಕೊಂಡಿದ್ದರು.

ನಟನೆ ಬಿಟ್ಟು ಹೆಣ್ಣುಮಕ್ಕಳನ್ನು ಬಳಸಿಕೊಂಡು ದಂಧೆ ಶುರು ಮಾಡಿದ ಸ್ಯಾಂಡಲ್​ವುಡ್  ನಟ ಈಗ ಅರೆಸ್ಟ್  ಆಗಿದ್ದಾರೆ. ಲೊಕ್ಯಾಂಟೋ ಆ್ಯಪ್ ನ ಹಿಂದೆ ಬಿದ್ದಂತಹ ನಟ ಈಗ ಕಂಬಿ ಎಣಿಸುತ್ತಿದ್ದಾರೆ. ಹುಡುಗಿಯರ ಫೋಟೋಗಳನ್ನು ಬಳಸಿಕೊಂಡು ನಕಲಿ ಪ್ರೊಫೈಲ್ ಬಳಸಿ ದಂಧೆ ಮಾಡುತ್ತಿದ್ದ ನಟನನ್ನು ಪೊಲೀಸರು  ಬಂಧಿಸಿದ್ದಾರೆ. ಹೀರೋ ಆಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೇ ದಂಧೆಯಲ್ಲಿ ಪ್ರಮುಖ ಆರೋಪಿಯಾಗಿದ್ದು ಸಂಜು ಅಲಿಯಾಸ್ ಮಂಜುನಾಥ್ ಅರೆಸ್ಟ್ ಆಗಿದ್ದಾರೆ.