ಮಿಸ್ ಬಿಹೇವ್ ಮಾಡಿದವನ ಕೆನ್ನೆಗೆ ಭಾರಿಸಿದ ನಟಿ ಸಾನಿಯಾ ಅಯ್ಯಪ್ಪನ್ ವೀಡಿಯೋ ವೈರಲ್

ಮಿಸ್ ಬಿಹೇವ್ ಮಾಡಿದವನ ಕೆನ್ನೆಗೆ ಭಾರಿಸಿದ ನಟಿ ಸಾನಿಯಾ ಅಯ್ಯಪ್ಪನ್ ವೀಡಿಯೋ ವೈರಲ್

ನಟಿ ಸಾನಿಯಾ ಅಯ್ಯಪ್ಪನ್, ಸ್ಯಾಂಡಲ್ ವುಡ್ ನಲ್ಲಿ ನಟಿಸಿಲ್ಲವಾದರೂ, ತುಂಬಾನೇ ಫೇಮಸ್ ನಟಿ. ಮಲಯಾಳಂನ ಸಾನಿಯಾ ಅಯ್ಯಪ್ಪನ್ ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಬಂದವರು. ಆಗಾಗ ತಮ್ಮ ಬೋಲ್ಡ್ ಫೊಟೋಸ್ ಗಳಿಂದಲೇ ಸುದ್ದಿಯಾಗುತ್ತಲೇ ಇರುತ್ತಾರೆ. ಮಳಯಾಳಂನ ಕೆಲವೇ ಕೆಲವು ಚಿತ್ರಗಳಲ್ಲಿ ನಟಿಸಿದ್ದರೂ, ಸಾನಿಯಾ ಅಯ್ಯಪ್ಪನ್ ಅವರ ಅಭಿಮಾನಿಗಳ ಬಳಗ ಬಹಳ ದೊಡ್ಡದಿದೆ. ಬಾಲ ನಟಿಯಾಗಿ ಎರಡು ಚಿತ್ರದಲ್ಲಿ ನಟಿಸಿದ ಸಾನಿಯಾ ಅಯ್ಯಪ್ಪನ್ ಈಗ ನಾಯಕಿಯಾಗಿ ನಟಿಸಿದ್ದು ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಮಾತ್ರವೇ. 

ಕ್ವೀನ್ ಚಿತ್ರದ ಮೂಲಕ ನಾಯಕಿಯಾಗಿ ಮಾಲಿವುಡ್ ನಲ್ಲಿ ನಟಿಸಿದ ಸಾನಿಯಾ ಅಯ್ಯಪ್ಪನ್, ಸಾಟರ್ಡೆ ನೈಟ್, ಪದಿ ನೆಟ್ಟಾಂ ಪಡಿ, ವೈಟ್ ರೋಸ್, ಲೂಸಿಫರ್ ಸೇರಿದಂತೆ ಬಹಳಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾನಿಯಾ ಅಯ್ಯಪ್ಪ ಆಗಾಗ ಬೋಲ್ಡ್ ಆಗಿ ಫೋಟೋ ಶೂಟ್ ಗಳನ್ನು ಮಾಡಿಸುತ್ತಿರುತ್ತಾರೆ. ಆಗಾಗ ಕೆಲ ಕಿರಿಕ್ ಗಳನ್ನು ಮಾಡಿಕೊಂಡು ಸುದ್ದಿಯಾಗುತ್ತಿರುತ್ತಾರೆ. ಇದೀಗ ಸಿನಿಮಾ ಒಂದರ ಪ್ರಚಾರ ಕಾರ್ಯಕ್ರಮಕ್ಕಾಗಿ ಸಾನಿಯಾ ಅಯ್ಯರ್ ಮಾಲ್ ಒಂದಕ್ಕೆ ತೆರಳಿದ್ದರು.  

ಕಾರ್ಯಕ್ರಮ ಮುಗಿದ ಮೇಲೆ ವೇದಿಕೆಯಿಂದ ಇಳಿದ ಸಾನಿಯಾ ಅವರು ಸುತ್ತಲೂ ನೆರೆದಿದ್ದ ಅಭಿಮಾನಿಗಳ ನಡುವೆಯೇ ಹಾದು ಹೋಗಬೇಕಿತ್ತು. ಸಾನಿಯಾ ಹಾಗೂ ತಮ್ಮ ಕೋ ಸ್ಟಾರ್ ಇಬ್ಬರೂ ಜನ ಜಂಗುಳಿಯ ನಡುವೆಯೇ ನಡೆದು ಹೋಗುತ್ತಿದ್ದರು. ಆದರೆ, ಅಲ್ಲೊಬ್ಬ ಯುವಕ ಸಾನಿಯಾ ಅವರ ಜೊತೆಗಾರ್ತಿ ಬಳಿ ಮಿಸ್ ಬಿಹೇವ್ ಮಾಡಿದ್ದಾರೆ. ಇದನ್ನು ನೋಡಿ ಸುಮ್ಮನಾಗದ ಸಾನಿಯಾ ಅವರು ಆತನ ಕೆನ್ನೆಗೆ ಸರಿಯಾಗಿ ಒಂದು ಏಟು ಕೊಟ್ಟಿದ್ದಾರೆ. ಇದನ್ನು ಮತ್ತೊಬ್ಬ ವ್ಯಕ್ತಿ ವೀಡಿಯೋ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿತ್ತು. ಇನ್ನು ನಟಿ ಈ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದರು