ಕಡಲ ತೀರದಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡ ಸ್ಯಾಂಡಲ್ ವುಡ್ ಸ್ಟಾರ್ ನಟಿ ಯಾರದು ನೋಡಿ :ವಿಡಿಯೋ ವೈರಲ್

ಕಡಲ ತೀರದಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡ ಸ್ಯಾಂಡಲ್ ವುಡ್ ಸ್ಟಾರ್ ನಟಿ ಯಾರದು ನೋಡಿ :ವಿಡಿಯೋ ವೈರಲ್


ಮೂಲತಃ ಉತ್ತರ ಪ್ರದೇಶದ ವಾರಾಣಸಿಯವರಾಗಿರುವ ಶಾನ್ವಿ ಅವರ ನಿಜವಾದ ಹೆಸರು ಶಾನ್ವಿ ನಾಯರ್. ಸದ್ಯ ಕನ್ನಡ ಚಿತ್ರರಂಗದಲ್ಲಿ ಭದ್ರವಾಗಿ ನೆಲೆ ಕಂಡುಕೊಂಡಿದ್ದಾರೆ. 2012ರಲ್ಲೇ ತೆಲುಗಿನಲ್ಲಿ ನಟಿಸಿದ ಇವರು ಬಳಿಕ  ಈಗಾಗಲೇ ಸ್ಯಾಂಡಲ್ವುಡ್ನಲ್ಲಿ ಹತ್ತಾರು ಸಿನಿಮಾಗಳನ್ನು ಮಾಡುವ ಮೂಲಕ ಗುರುತಿಸಿಕೊಂಡಿದ್ದಾರೆ. ಶಾನ್ವಿ ತಮ್ಮ ನಟನೆ ಮೂಲಕವೇ ಕನ್ನಡಿಗರನ್ನು ಸೆಳೆದಿದ್ದಾರೆ. ಸ್ಯಾಂಡಲ್ವುಡ್ ಪ್ರಸಿದ್ಧ ನಟರೊಂದಿಗೆ ಶಾನ್ವಿ ತೆರೆ ಹಂಚಿಕೊಂಡಿದ್ದು, ಅವನೇ ಶ್ರೀಮನ್ ನಾರಾಯಣ ಚಿತ್ರದಲ್ಲೂ ಮೋಡಿ ಮಾಡಿದ್ದರು. 

ಇನ್ನು ಶಾನ್ವಿ ಅವರು ಕನ್ನಡದಲ್ಲಿ ಮಾಸ್ಟರ್ ಪೀಸ್, ಭಲೇ ಜೋಡಿ, ಚಂದ್ರಲೇಖಾ ಸುಂದರಾಂಗ ಜಾಣ,ಸಾಹೇಭ,ತಾರಕ್, ಮಫ್ತಿ, ಕಸ್ತೂರಿ ಮಹಲ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಮೊದಲ ಬಾರಿಗೆ ಮಳಯಾಳಂಗೂ ಪ್ರವೇಶ ಮಾಡಿದ್ದು, ಮಹಾವೀರ್ಯರ್ ಎಂಬ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಲ್ಲದೇ ಕನ್ನಡದ ಬ್ಯಾಂಗ್ ಎಂಬ ಚಿತ್ರದಲ್ಲಿ ಗ್ಯಾಂಗ್ ಸ್ಟರ್ ರೂಪದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಇಷ್ಟು ದಿನ ದೆವ್ವದ ಪಾತ್ರಗಳಲ್ಲಿ ನಟಿಸಿದ್ದ ಶಾನ್ವಿ ಅವರು ಮೊದಲ ಬಾರಿಗೆ ಗ್ಯಾಂಗ್ ಸ್ಟರ್ ಅವತಾರದಲ್ಲಿ ಕಾಣಿಸಿಕೊಂಡರು.    

ಈ ಬ್ಯುಸಿ ಶೆಡ್ಯೂಲ್ ನಲ್ಲಿ ಇದೀಗ ಶಾನ್ವಿ ಅವರು ಅಭಿಮಾನಿಗಳಿಗೋಸ್ಕರ ಕೊಂಚ ಬಿಡುವು ಮಾಡಿಕೊಂಡಿದ್ದಾರೆ. ಬಿಸಿಲ ಬೇಗೆಗ ಬೇಸತ್ತು, ಶಾನ್ವಿ ಅವರು ಬಿಕಿನಿ ಧರಿಸಿದ್ದಾರೆ. ಬಿಕಿನಿಯಲ್ಲಿ ಕಡಲ ತೀರದಲ್ಲಿ ನಿಂತು ಸುಂದರವಾದ ಫೋಟೋಗಳಿಗೆ ಫೋಸ್ ಕೊಟ್ಟಿದ್ದಾರೆ. ಇನ್ ಸ್ಟಾಗ್ರಾಂ ಪೇಜ್ ನಲ್ಲಿ ತಮ್ಮ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶಾನ್ವಿ ಅವರನ್ನು 14 ಲಕ್ಷಕ್ಕೂ ಅಧಿಕ ಮಂದಿ ಫಾಳೋ ಮಾಡುತ್ತಿದ್ದಾರೆ.