ಸರಿಗಮಪನಲ್ಲಿ ಈ ಶೋ ವಿನ್ನರ್ ರನ್ನರ್ಸ್ ಗೆ ಸಿಕ್ಕ ನಗದು ಬಹುಮಾನವೆಷ್ಟು ಎಂದು ಗೊತ್ತಾ..?

ಸರಿಗಮಪನಲ್ಲಿ  ಈ ಶೋ ವಿನ್ನರ್ ರನ್ನರ್ಸ್ ಗೆ  ಸಿಕ್ಕ ನಗದು ಬಹುಮಾನವೆಷ್ಟು ಎಂದು ಗೊತ್ತಾ..?

ಜೀ ಕನ್ನಡವಾಹಿನಿಯ ಸರಿಗಮಪ ಸೀಸನ್ 19  ಶೋ ನಿನ್ನೆಯಷ್ಟೇ ಮುಕ್ತಾಯಗೊಂಡಿದೆ. ಗ್ರ್ಯಾಂಡ್ ಫಿನಾಲೆಯನ್ನು ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಏರ್ಪಡಿಸಲಾಗಿತ್ತು. ಗ್ರ್ಯಾಂಡ್ ಫಿನಾಲೆ ಯಶಸ್ವಿಯಾಗಿ ನಡೆದಿದ್ದು, 6 ಸ್ಪರ್ಧಿಗಳು ಸ್ಪರ್ಧಿಸಿದರು. ಗ್ರ್ಯಾಂಡ್‌ ಫಿನಾಲೆಯಲ್ಲಿ ಮಂಗಳೂರಿನ ತನುಶ್ರೀ, ಬೆಂಗಳೂರಿನ ಕೌಷಿಕ್, ಮೈಸೂರಿನ ಗುರುಪ್ರಸಾದ್, ಉಡುಪಿಯ ಶಿವಾನಿ ನವೀನ್ ಕೊಪ್ಪ, ಸೊಲ್ಲಾಪುರದ ರೇವಣಸಿದ್ಧ ಹಾಗೂ ಕುಶಾಲನಗರದ ಪ್ರಗತಿ ಬಡಿಗೇರ್ ಅವರು ಸ್ಪರ್ಧಿಸಿಸದ್ದರು. 

ಸರಿಗಮಪ ಸೀಸನ್ 19 ರಲ್ಲಿ ಟಫ್‌ ಫಯಟ್‌ ಕೊಟ್ಟು ವಿನ್ನರ್ ಆಗಿ ಪ್ರಗತಿ ಬಡಿಗೇರ್ ಅವರು ಹೊರಹೊಮ್ಮಿದ್ದಾರೆ. ಸರಿಗಮಪ ಲಿಟಲ್ ಚಾಂಪ್ ಸೀಸನ್ 19 ಕೊಪ್ಪಳದಲ್ಲಿ ಅದ್ದೂರಿಯಾಗಿ ನಡೆದಿದೆ. ಬೃಹತ್ ವೇದಿಕೆ ಮೇಲೆ ಪ್ರಗತಿ ಬಡಿಗೇರ್ ಟ್ರೋಫಿ ಸ್ವೀಕರಿಸಿ ಸಂತಸವನ್ನು ಹಂಚಿಕೊಂಡಿದ್ದಾರೆ. ವಿನ್ನರ್ ಆದ ಪ್ರಗತಿ ಬಡಿಗೇರ್‌ ಗೆ ನೆಲಮಂಗಲ ಬಳಿ 21 ಲಕ್ಷ ರೂ ಬೆಲೆ ಬಾಳುವ 30-40 ಸೈಟ್ ಹಾಗೂ 4 ಲಕ್ಷ ನಗದು ಹಣವನ್ನು ನೀಡಲಾಗಿದೆ. 

ಸರಿಗಮಪ ಸೀಸನ್ 19 ರನ್ನರ್ ಅಪ್ ಆದ ಶಿವಾನಿಗೆ 20 ಲಕ್ಷ ನಗದು ಹಣ ಬಹುಮಾನವಾಗಿ ಸಿಕ್ಕಿದೆ. ಎರಡನೇ ರನ್ನರ್ ಅಪ್ ಆಗಿರುವ ತನುಶ್ರೀ ಅವರಿಗೆ 5 ಲಕ್ಷ ರೂಪಾಯಿ ಕ್ಯಾಶ್ ಪ್ರೈಸ್ ಮತ್ತು ಐದು ಲಕ್ಷ ರೂಪಾಯಿ ಎಲೆಕ್ಟ್ರಿಕ್ ವಾಹನ ದೊರೆತಿದೆ. ವಿನ್ನರ್ ಪ್ರಗತಿ, ರನ್ನರ್ ಅಪ್ ಶಿವಾನಿ, ತನುಶ್ರೀಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.