ಹರಿಪ್ರಿಯಾ ಮತ್ತು ವಸಿಷ್ಟ ಸಿಂಹ ಅವರ ಮದುವೆಯ ಅದ್ಭುತ ಕ್ಷಣಗಳು!! ವಿಡಿಯೋ ವೈರಲ್

ಒಂದೆರಡು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಅವರು ಜೀವನದ ಹೊಸ ಹಂತವನ್ನು ಪ್ರವೇಶಿಸಿದರು. ಜನವರಿ 26, 2023 ರಂದು ವಸಿಷ್ಟ ಮತ್ತು ಹರಿ ಪ್ರಿಯಾ ವಿವಾಹವಾದರು.  ಶಿವರಾಜ್‌ಕುಮಾರ್, ಡಾಲಿ ಧನಂಜಯ, ಅಮೃತಾ ಅಯ್ಯಂಗಾರ್ ಮುಂತಾದ ಗಣ್ಯರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಚಿತ್ರಗಳು ಮತ್ತು ವೀಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.ಅವರು ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿವಾಹವಾದರು.

ಪರಸ್ಪರ ಪ್ರೀತಿಸುತ್ತಿದ್ದ ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಅವರು ಇಂದು (ಜ.26) ಸಪ್ತಪದಿ ತುಳಿದಿದ್ದಾರೆ. ಈ ಜೋಡಿಯ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಮೈಸೂರಿನ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸ್ಯಾಂಡಲ್​ವುಡ್​ನ ಅನೇಕರು ಬಂದು ನವ ದಂಪತಿಗೆ ಶುಭ ಹಾರೈಸಿದರು.  ಸಿಂಹಪ್ರಿಯಾ ವಿವಾಹಕ್ಕೆ ಕೆಲವೇ ಕೆಲವು ಮಂದಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ವಸಿಷ್ಠ ಸಿಂಹ ಅವರ ಗೆಳೆಯ ಡಾಲಿ ಧನಂಜಯ್​ ಅವರು ಈ ಶುಭ ಕಾರ್ಯಕ್ಕೆ ಸಾಕ್ಷಿಯಾದರು.  

ಶಿವರಾಜ್​ಕುಮಾರ್​ ಅವರು ಮೈಸೂರಿಗೆ ತೆರಳಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಮದುವೆಗೆ ಹಾಜರಿ ಹಾಕಿದ್ದಾರೆ. ಹೊಸ ಬಾಳಿಗೆ ಕಾಲಿಟ್ಟ ಜೋಡಿಗೆ ಶಿವಣ್ಣ ಮನಸಾರೆ ಹರಸಿದ್ದಾರೆ. ಮದುವೆಗೂ ಮುನ್ನ ಜನವರಿ 25ರಂದು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರ ಅರಿಶಿಣ ಶಾಸ್ತ್ರ ನೆರವೇರಿತು. ಆ ಕ್ಷಣದ ಪೋಟೋಗಳನ್ನು ಈ ಜೋಡಿ ಹಂಚಿಕೊಂಡಿತ್ತು. ಅವು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

ಮದುವೆ ಬಳಿಕ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರು ಬೆಂಗಳೂರಿನಲ್ಲಿ ರಿಸೆಪ್ಷನ್​ ಏರ್ಪಡಿಸಲಿದ್ದಾರೆ. ಕನ್ನಡ ಚಿತ್ರರಂಗದ ಅನೇಕರು ಆರತಕ್ಷತೆ ಕಾರ್ಯಕ್ರಮಕ್ಕೆ ಬಂದು ಅಭಿನಂದನೆ ಸಲ್ಲಿಸಲಿದ್ದಾರೆ.